More

    VIDEO: ಏಕಾಏಕಿ ಅಂಗಡಿಯೊಳಗೆ ನುಗ್ಗಿತು ಕಾರು: ಇಲ್ಲಿದೆ ಬೆಚ್ಚಿ ಬೀಳಿಸುವ ದೃಶ್ಯ

    ನ್ಯೂಯಾರ್ಕ್​: ಸಿಸಿಟಿವಿಯಲ್ಲಿ ಸೆರೆಯಾಗಿರುವ ಭೀಕರ ದೃಶ್ಯ ಎಂತಹವರನ್ನೂ ಬೆಚ್ಚಿಬೀಳಿಸುತ್ತೆ. ಅಂಗಡಿಯಲ್ಲಿ ಕೆಲಸಗಾರರಿಬ್ಬರು ಮಾತುಕತೆಯಲ್ಲಿ ನಿರತರಾಗಿರುತ್ತಾರೆ. ಆಗಲೇ ಎಲ್ಲಿಂದಲೋ ಬರುವ ಕಾರು ಏಕಾಏಕಿ ಅಂಗಡಿಯೊಳಗೆ ನುಗ್ಗಿದೆ. ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಇಂತಹದ್ದೊಂದು ಘಟನೆ ನಡೆದಿರುವುದು ಅಮೆರಿಕದ ಅರಿಜೋನಾ ನಗರದಲ್ಲಿ, ಅಂಗಡಿಯೊಳಗೆ ನುಗ್ಗಿದ ಕಾರು ಡಿಕ್ಕಿಯ ರಭಸಕ್ಕೆ 25 ಅಡಿಗಳಷ್ಟು ದೂರದವರೆಗೂ ಕ್ರಮಿಸಿದೆ. ಅದೃಷ್ಟವಶಾತ್​ ಇಬ್ಬರು ಕೆಲಸಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ದೃಶ್ಯದಲ್ಲಿರುವಂತೆ ಅಂಗಡಿಯೊಳಗೆ ಇಬ್ಬರು ತಮ್ಮಷ್ಟಕ್ಕೆ ತಾವು ಮಾತಾಡುತ್ತಿರುತ್ತಾರೆ. ಬಿಳಿ ಬಣ್ಣದ ಕಾರು ಗಾಜಿನ ಡೋರನ್ನು ಒಡೆದು ಏಕಾಏಕಿ ಒಳ ನುಗ್ಗಿದ್ದು, ಇಬ್ಬರನ್ನು ಡಿಕ್ಕಿ ಹೊಡೆದು ಎಳೆದುಕೊಂಡು ಹೋಗಿರುವ ದೃಶ್ಯ ನೋಡುಗರಲ್ಲಿ ಭಯವನ್ನು ಹುಟ್ಟಿಸುವಂತಿದೆ.

    ಈ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸ್ವತಃ ಪೊಲೀಸರೇ ಈ ವಿಡಿಯೋವನ್ನು ತಮ್ಮ ಅಧಿಕೃತ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದು ಭಾರೀ ವೈರಲ್​ ಆಗುತ್ತಿದೆ. ಇನ್ನು ಘಟನೆಗೆ ಚಾಲಕನ ಅಜಾಗರೂಕತೆಯೇ ಕಾರಣ ಎಂದಿರುವ ಇಲ್ಲಿನ ಪೊಲೀಸರು ಆತನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

    ನಾಲ್ವರು ಭಾರತೀಯರು ಸೇರಿ 22 ಮಂದಿ ಪ್ರಯಾಣಿಕರಿದ್ದ ನೇಪಾಳ ವಿಮಾನ ನಾಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts