More

    ಅಂಬಟ್ಟಿ ಮಖಾಂ ಉರುಸ್‌ಗೆ ಚಾಲನೆ

    ಗೋಣಿಕೊಪ್ಪ: ಅಂಬಟ್ಟಿ ಮಖಾಂ ಉರುಸ್‌ಗೆ ಶುಕ್ರವಾರ ಚಾಲನೆ ದೊರೆಯಿತು.

    ಶುಕ್ರವಾರದ ಜುಮಾ ನಮಾಜಿನ ಬಳಿಕ ಅಂಬಟ್ಟಿ ಮಖಾಂ ಆವರಣದಲ್ಲಿ ಅಂಬಟ್ಟಿ ಜಮಾಅತಿನ ಅಧ್ಯಕ್ಷ ಎ.ಎಚ್. ಶಾದುಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಉರುಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಖಾಂನಲ್ಲಿ ಅಂಬಟ್ಟಿ ಜುಮ್ಮಾ ಮಸೀದಿಯ ಖತೀಬರಾದ ರಫೀಕ್ ಸಅದಿ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.

    ಅಂಬಟ್ಟಿ ಜಮಾಅತ್ತಿನ ಉಪಾಧ್ಯಕ್ಷ ಎಂ.ಕೆ. ಹ್ಯಾರಿಸ್, ಕೋಶಾಧಿಕಾರಿ ಖಾಲಿದ್ ಫೈಜಿ, ಉರೂಸ್ ಆಯೋಜನ ಸಮಿತಿ ಅಧ್ಯಕ್ಷ ಎಚ್. ತೌಸೀಫ್, ಕಾರ್ಯದರ್ಶಿ ಜುಬೇರ್ ಅಹಮದ್, ಜಮಾಅತ್ತಿನ ಮಾಜಿ ಅಧ್ಯಕ್ಷ ಕೆ.ಎ.ಯುಸೂಫ್, ಮಾಜಿ ಕಾರ್ಯದರ್ಶಿ ಎಂ. ಕೆ. ಮುಸ್ತಫ, ಜಮಾಅತ್ತಿನ ಆಡಳಿತ ಮಂಡಳಿ ಪದಾಧಿಕಾರಿಗಳಾದ ಪಿ.ಎ. ಖಾಲಿದ್, ರಜಾಕ್, ಹುಸೇನಾರ್, ಸುಹೀರ್ ಇತರರು ಇದ್ದರು. ಸಂಜೆ ಅಲಂಕೃತ ಅಂಬಟ್ಟಿ ಮಖಾಂನಲ್ಲಿ ಸಂದಲ್ ಕಾರ್ಯಕ್ರಮ ನೆರವೇರಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts