More

    ಕುಡಿವ ನೀರಿನ ಸಮಸ್ಯೆ ಬಗೆಹರಿಸಿ

    ಮುದಗಲ್: ಅಸಮರ್ಪಕ ಕುಡಿವ ನೀರು ಪೂರೈಕೆಯಿಂದಾಗಿ ನಿತ್ಯ ಸಮಸ್ಯೆ ಎದುರಿಸುವಂತಾಗಿದ್ದು, ಸಮಸ್ಯೆ ಬಗೆಹರಿಸಬೇಕೆಂದು ಪಟ್ಟಣದ ಕಿಲ್ಲಾ ಏರಿಯಾದ ನಾಗರಿಕರು ಖಾಲಿ ಕೊಡಗಳೊಂದಿಗೆ ಪುರಸಭೆ ಎದುರು ಮಂಗಳವಾರ ಪ್ರತಿಭಟನೆ ನೆಡೆಸಿದರು.

    ನೀರಿನ ಸಮಸ್ಯೆ ಅಧಿಕವಾಗಿದೆ


    ಕುಡಿವ ನೀರಿಗಾಗಿ ಪಟ್ಟಣದಲ್ಲಿ ಅನೇಕ ವರ್ಷಗಳಿಂದ ನಾಗರಿಕರು ತೊಂದರೆ ಅನುಭವಿಸುವಂತಾಗಿದೆ. ಬೇಸಿಗೆ ಆರಂವಾಗಿರುವುದರಿಂದ ನೀರಿನ ಸಮಸ್ಯೆ ಅಧಿಕವಾಗಿದೆ. ಸಮರ್ಪಕ ನೀರು ಪೂರೈಸಲು ಹಲವು ಬಾರಿ ಅಧಿಕಾರಿ ಹಾಗೂ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಕಡೆಗಣಿಸುತ್ತಿದ್ದಾರೆ. ಪ್ರತಿ ವರ್ಷ ನೀರಿನ ಕರ ಏರಿಕೆ ಮಾಡುವ ಪುರಸಭೆ ಅಧಿಕಾರಿಗಳು ಸೌಲಭ್ಯ ಕಲ್ಪಿಸುವುದಕ್ಕೆ ಮುಂದಾಗುತ್ತಿಲ್ಲ. ಈ ಬಗ್ಗೆ ನೀರು ಸರಬರಾಜು ಸಿಬ್ಬಂದಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನೀರು ಪೂರೈಕೆ ಮಾಡದೆ ಬೇಜವಾಬ್ದಾರಿ


    ಪಟ್ಟಣದಲ್ಲಿ 8ರಿಂದ 10 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ, ಬೇಸಿಗೆಯಲ್ಲಿ ನೀರಿನ ಬಳಕೆ ಹೆಚ್ಚಾಗಿದ್ದು, ನಾಲ್ಕೈದು ದಿನಗಳಿಗೊಮ್ಮೆ ನೀರು ಸರಬರಾಜು ಮಾಡುವಂತೆ ಮಹಿಳೆಯರು ಒತ್ತಾಯಿಸಿದರು. ಪೈಪ್ ದುರಸ್ತಿ, ಕರೆಂಟ್ ಮತ್ತು ಮೋಟಾರ್ ಸಮಸ್ಯೆ ಎಂದು ಪುರಸಭೆ ಸಿಬ್ಬಂದಿ ನೆಪ ಹೇಳುತ್ತಿದ್ದಾರೆ. ಪಟ್ಟಣದ ಯಾವುದೇ ವಾರ್ಡ್‌ಗೂ ಸರಿಯಾಗಿ ನೀರು ಪೂರೈಕೆ ಮಾಡದೆ ಬೇಜವಾಬ್ದಾರಿ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
    ಸ್ಥಳೀಯರಾದ ಫಾರುಕ್ ಪಾಷಾ, ಮಾಬಬೇಗ್, ಲಕ್ಷ್ಮಣ ಸಿಂಗ್, ಸಲೀಮಬೇಗ್, ಫಿರೋಜ ಪಾಷಾ, ಶಾಮೀದ್ ಬೇಗ್, ಖಾಸೀಂ ಪಾಷಾ, ಗಫೂರ್ ಇತರರಿದ್ದರು.

    ಇದನ್ನೂ ಓದಿ: 25 ವರ್ಷದಿಂದ ನೀರಿನ ಸಮಸ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts