More

    ಖೇಡ ಉಮರ್ಗಾದ ನೀರಿನ ಸಮಸ್ಯೆಗೆ ಸಿಕ್ತು ಪರಿಹಾರ

    ಆಳಂದ: ಖೇಡ ಉಮರ್ಗಾದಲ್ಲಿ ಕಳೆದ ಕೆಲವು ದಿನಗಳಿಂದ ತಲೆದೂರಿದ್ದ ಕುಡಿಯುವ ನೀರಿನ ಸಮಸ್ಯೆಗೆ ಮಾದನಹಿಪ್ಪರಗಿ ಪೊಲೀಸ್ ಠಾಣೆಯ ಪಿಎಸ್‌ಐ ದಿನೇಶ ಟಿ. ಪರಿಹಾರ ಕಲ್ಪಿಸಿದ್ದಾರೆ.

    ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ೨೦೧೯ರಲ್ಲಿ ೨೨ ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಇಂದಿರಾಬಾಯಿ ಪಾಟೀಲ್ ಅವರ ಜಮೀನಿನಲ್ಲಿ ತೆರೆದ ಬಾವಿ ನಿರ್ಮಿಸಿ, ಪೈಪ್‌ಲೈನ್ ಕಾರ್ಯ ಮಾಡಲಾಗಿತ್ತು. ಗ್ರಾಮಕ್ಕೆ ನೀರು ಕೊಡುವುದರ ಜತೆಗೆ ತಮ್ಮ ಜಮೀನುಗಳಿಗೂ ನೀರುಣಿಸಲಾಗುತ್ತಿತ್ತು. ಆದರೆ ಈ ಬಾರಿ ಬರ ಆವರಿಸಿರುವುದರಿಂದ ಬೆಳೆಗಳಿಗೆ ನೀರು ಸಾಕಾಗುವುದಿಲ್ಲ, ಹೀಗಾಗಿ ಗ್ರಾಮಕ್ಕೆ ನೀರು ಕೊಡುವುದಿಲ್ಲ ಎಂದು ಜಮೀನು ಮಾಲೀಕರು ನೀರು ಸರಬರಾಜು ಕಡಿತಗೊಳಿಸಿದ್ದರು.

    ಪಿಎಸ್‌ಐ ದಿನೇಶ ಟಿ. ಅವರ ಗಮನಕ್ಕೆ ಸಮಸ್ಯೆ ತರಲಾಯಿತು. ಮಂಗಳವಾರ ನಿಂಬಾಳ ಗ್ರಾಪಂ ಅಧ್ಯಕ್ಷ ಗಣೇಶ ಒಡ್ಡಳ್ಳಿ, ಪಿಡಿಒ ಅಣ್ಣಾಸಾಬ್ ಅಂಜುಟಗಿ, ಕಾರ್ಯದರ್ಶಿ ಲಕ್ಷ್ಮಣ ಎಸ್. ಅವರೊಂದಿಗೆ ತೆರೆದ ಬಾವಿಯಿರುವ ಜಮೀನಿನಲ್ಲೇ ಸಭೆ ನಡೆಸಲಾಯಿತು. ನೀರಿನ ಸಮಸ್ಯೆ ಮನವರಿಕೆ ಮಾಡಿದ್ದು, ನಿತ್ಯ ಎರಡು ಗಂಟೆ ಗ್ರಾಮಕ್ಕೆ ನೀರು ಹರಿಸಲು ಸಮ್ಮತಿ ನೀಡಿದರು. ಇದರಿಂದ ಜನರು ನೀರಿನ ಸಮಸ್ಯೆ ಸ್ವಲ್ಪ ದೂರವಾದಂತಾಗಿದೆ.

    ಪ್ರಮುಖರಾದ ಅಪ್ಪಾಸಾಬ್ ಮೇಲಿಕೇರಿ, ದಯಾನಂದ ವಾಲೀಕಾರ, ಸಂಗನಬಸವ ರದ್ದೇವಾಡಿ, ಗುರುನಾಥ ಪಾಟೀಲ್, ಗುರುಶಾಂತ ಅತನೂರ, ಬಸವರಾಜ ಮೇಲಕೇರಿ, ರಾಜಕುಮಾರ ಪಾಟೀಲ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts