More

    ಚಹಾ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ; ವಾರಕ್ಕೆ ಮೂರು ಬಾರಿ ಟೀ ಕುಡಿಯಿರಿ, ಬಹು ಕಾಲ ಬಾಳಿರಿ..!

    ನವದೆಹಲಿ: ಬಹುಕಾಲ ಆರೋಗ್ಯವಾಗಿ ಬಾಳಬೇಕೆ, ಹಾಗಾದರೆ ವಾರಕ್ಕೆ ಮೂರು ಬಾರಿಯಾದರೂ ಚಹಾ ಸವಿಯಿರಿ..!

    ಹೌದು, ಚಹಾ ಪ್ರಿಯರಿಗೆ ಇಂತಹದ್ದೊಂದು ಸಿಹಿ ಸುದ್ದಿ ಕೊಟ್ಟಿದ್ದಾರೆ ಸಂಶೋಧಕರು.

    ಚಹಾ ಕುಡಿಯುವ ಅಭ್ಯಾಸ ಇರುವವರಿಗೆ ಹೃದಯ ಸಂಬಂಧಿ ರಕ್ತನಾಳದ ಸಮಸ್ಯೆಗಳು ಕಡೆಮೆಯಾಗುವುದರಿಂದ, ಸಾವಿನ ಭಯ ದೂರವಾಗುತ್ತದೆ ಎನ್ನುತ್ತಾರೆ ಚೀನಾ ಬೀಜಿಂಗ್​ನ ಚೈನೀಸ್​ ಅಕಾಡೆಮಿ ಆಫ್​ ಮೆಡಿಕಲ್​ ಸೈನ್ಸ್​ನ ಸಂಶೋಧಕ, ಲೇಖಕ ಕ್ಸಿಯಾಂ ವಾಂಗ್. ಚಹಾ ಕುಡಿಯುವ ಅಭ್ಯಾಸ ಇರುವವರಿಗೆ, ಅದರಲ್ಲೂ ಗ್ರೀನ್​ ಚಹಾ ಸೇವಿಸುವವರಿಗೆ ಆರೋಗ್ಯ ಉತ್ತಮವಾಗಿರುತ್ತದೆ ಎನ್ನುತ್ತಾರೆ ವಾಂಗ್​.

    ಯೂರೋಪಿನ ಪ್ರಿವೇಂಟಿವ್​ ಕಾರ್ಡಿಯಾಲಜಿ ಜರ್ನಲ್​ನಲ್ಲಿ ಪ್ರಕಟವಾದ ವಿಶ್ಲೇಷಣೆಯಲ್ಲಿ ಈ ವಿಷಯ ತಿಳಿಸಲಾಗಿದೆ. ಚೀನಾದಲ್ಲಿ ಪಿಎಆರ್​ ಪ್ರಾಜಕ್ಟ್​-2 ಸಂಶೋಧನೆಯಲ್ಲಿ ಭಾಗವಹಿಸಿದ್ದ 1, 00, 902 ಜನರಲ್ಲಿ ಹೃದಯಾಘಾತ, ಪಾರ್ಶ್ವವಾಯು ಅಥವಾ ಕ್ಯಾನ್ಸರ್​ನ ಲಕ್ಷಣಗಳಿರಲಿಲ್ಲ.

    ಇಷ್ಟು ಜನರನ್ನು ಎರಡು ಭಾಗಗಳಾಗಿ ವಿಂಗಡಿಸಲಾಯಿತು. ಇದರಲ್ಲಿ ಚಹಾ ಕುಡಿಯುವ ಅಭ್ಯಾಸ ಇರುವವರು (ವಾರದಲ್ಲಿ ಮೂರು ಅಥವಾ ಹೆಚ್ಚು ಬಾರಿ) ಹಾಗೂ ಅಭ್ಯಾಸ ಇರದವರು (ವಾರಕ್ಕೆ ಮೂರು ಬಾರಿಗೂ ಕಡಿಮೆ ಬಾರಿ) ಎಂದು ವಿಭಜಿಸಿ, 7.3 ವರ್ಷ ಇವರನ್ನು ಅಭ್ಯಸಿಸಲಾಯಿತು.

    ಇಲ್ಲಿ ಕಂಡು ಬಂದ ಅಂಶವೆಂದರೆ ಚಹಾ ಸೇವನೆ ಆಭ್ಯಾಸ ಇರುವವರು ಆರೋಗ್ಯಶಾಲಿಗಳಾಗಿ ಮತ್ತು ಧೀರ್ಘ ಆಯುಷ್ಯ ಉಳ್ಳವರು ಎಂದು ತಿಳಿದಿದೆ. ಚಹಾದ ಆಭ್ಯಾಸ ಇಲ್ಲದವರಿಗೆ ಹೋಲಿಸಿದರೆ ಹೃದಯಾಘಾತ, ಪಾರ್ಶ್ವವಾಯು ಅಥವಾ ಕ್ಯಾನ್ಸರ್​ನ ಅಪಾಯ ಶೇ. 20 ಕಡಿಮೆ ಮತ್ತು ಈ ಸಂಬಂಧ ಸಾವು ಕೂಡ ಕಡಿಮೆ ಎನ್ನುವುದನ್ನು ಕಂಡುಕೊಳ್ಳಲಾಗಿದೆ.

    ಚಹಾದಲ್ಲಿನ ರಕ್ಷಣಾತ್ಮಕ ಪರಿಣಾಮಗಳು ಕುಡಿಯುವ ಅಭ್ಯಾಸ ಇರುವವರಲ್ಲಿ ಕಂಡಿವೆ. ಚಹಾದಲ್ಲಿರುವ ಪಾಲಿಫಿನಾಲ್‌ಗಳನ್ನು ದೇಹದಲ್ಲಿ ದೀರ್ಘಕಾಲ ಸಂಗ್ರಹಿಸಲಾಗುವುದಿಲ್ಲ ಎಂದು ಅಧ್ಯಯನಗಳು ಸೂಚಿಸುತ್ತವೆ ಎಂದು ಹಿರಿಯ ಲೇಖಕ ಡಾಂಗ್​ಫೆಂಗ್​ ಗು ತಿಳಿಸಿದ್ದಾರೆ. (ಏಜೇನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts