More

    ಕಾಲೇಜು ಪ್ರಾಂಶುಪಾಲರು-ಉಪನ್ಯಾಸಕರು ಬೋಧನೆ ಅವಧಿಯಲ್ಲಿ ಜೀನ್ಸ್​ ಪ್ಯಾಂಟ್​-ಟಿ ಶರ್ಟ್​​ ಧರಿಸದಂತೆ ಆದೇಶ; ಮುಂದಾ?

    ಮೈಸೂರು: ಕಾಲೇಜುಗಳ ಪ್ರಾಂಶುಪಾಲರು-ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ತಮ್ಮ ಕರ್ತವ್ಯದ ಅವಧಿಯಲ್ಲಿ ಜೀನ್ಸ್​ ಪ್ಯಾಂಟ್​ ಹಾಗೂ ಟಿ-ಶರ್ಟ್ ಧರಿಸುವಂತಿಲ್ಲ. ಮೈಸೂರು ಜಿಲ್ಲೆಗೆ ಸೀಮಿತವಾಗಿ ನಿನ್ನೆ ಹೀಗೊಂದು ಆದೇಶವನ್ನು ಹೊರಡಿಸಲಾಗಿತ್ತು. ಪ್ರಾಂಶುಪಾಲರು-ಉಪನ್ಯಾಸಕರು ಈ ಆದೇಶದಿಂದಾಗಿ ‘ಮುಂದೇನು?’ ಎಂದು ಯೋಚನೆ ಮಾಡುತ್ತಿರುವಷ್ಟರಲ್ಲೇ ಮಹತ್ವದ ಬೆಳವಣಿಗೆಯೊಂದು ಆಗಿಬಿಟ್ಟಿದೆ.

    ಮೈಸೂರು ಜಿಲ್ಲೆಯ ಕಾಲೇಜುಗಳ ಪ್ರಾಂಶುಪಾಲರು-ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಕರ್ತವ್ಯ ವೇಳೆಯಲ್ಲಿ ಜೀನ್ಸ್ ಪ್ಯಾಂಟ್, ಟಿ-ಶರ್ಟ್ ಧರಿಸದಂತೆ ನಿರ್ಬಂಧ ವಿಧಿಸಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ನಿನ್ನೆ ಆದೇಶ ಹೊರಡಿಸಿದ್ದರು. ಡಿಡಿಪಿಯು ಹೊರಡಿಸಿದ್ದ ಈ ಆದೇಶಕ್ಕೆ ಉಪನ್ಯಾಸಕರ ವಲಯದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಕೆಲವರು ಈ ವಿಚಾರವನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್​ ಅವರ ಗಮನಕ್ಕೂ ತಂದಿದ್ದರು.

    ಇದನ್ನೂ ಓದಿ: ಅಣ್ಣ-ತಮ್ಮ ಸೇರಿ ಕೆಲಸ ಕೊಟ್ಟಿದ್ದಾತನ ಮಗನನ್ನೇ ಕೊಂದು ಮೂಟೆ ಕಟ್ಟಿದ್ದರು!; ಇಬ್ಬರು ಕೊಲೆ ಆರೋಪಿಗಳ ಬಂಧನ…

    ಹೀಗೆ ಆದೇಶ ಹೊರಬಿದ್ದ 24 ಗಂಟೆಗಳಲ್ಲೇ ಅದನ್ನು ಹಿಂಪಡೆಯಲಾಗಿದೆ. ಉಡುಗೆ-ತೊಡುಗೆ ಸಂಬಂಧ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ ಕುರಿತು ಜಿಲ್ಲಾಧಿಕಾರಿಯವರು ಡಿಡಿಪಿಐ ಅವರಿಗೆ ಕರೆ ಮಾಡಿ ವಿಚಾರಿಸಿಕೊಂಡ ಬೆನ್ನಿಗೇ ಅವರು ಆದೇಶವನ್ನು ಹಿಂಪಡೆದಿದ್ದಾರೆ.

    ಇದನ್ನೂ ಓದಿ: ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 ತಿಂಗಳ ಮಗು ಜತೆ ನದಿಗೆ ಹಾರಿದ ತಾಯಿ!

    ಜಿಲ್ಲಾಧಿಕಾರಿಯವರು ಕರೆ ಮಾಡಿ ವಿಚಾರಿಸಿದರು. ಆದೇಶ ವಾಪಸ್ ಪಡೆದಿರುವ ಮಾಹಿತಿಯನ್ನು ಅವರಿಗೂ ನೀಡಿದ್ದೇನೆ. ತರಗತಿಯಲ್ಲಿ ಶಿಸ್ತು ಮೂಡಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಿದ್ದೆ. ಈಗ ಆ ಆದೇಶ ವಾಪಸ್ ಪಡೆದಿದ್ದೇನೆ ಎಂದು ಡಿಡಿಪಿಯು ಶ್ರೀನಿವಾಸಮೂರ್ತಿ ಭಾನುವಾರ ತಿಳಿಸಿದರು.

    ಪುನೀತ್ ಸಾವಿನಿಂದ ಖಿನ್ನತೆಗೆ ಒಳಗಾಗಿ ಊಟ-ತಿಂಡಿ ಬಿಟ್ಟಿದ್ದ ಅಭಿಮಾನಿಯ ಸಾವು!

    ಎರಡು ಮಕ್ಕಳಿದ್ದ ವಿಚ್ಛೇದಿತೆಯನ್ನು ಪ್ರೀತಿಸುತ್ತಿದ್ದವನೇ ಕುತ್ತಿಗೆ ಬಿಗಿದು ಕೊಂದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts