More

    ಎಲ್ಲ ಕಾಲಕ್ಕೂ ಸಲ್ಲುವವಳು ದ್ರೌಪದಿ: ಡಾ. ವಿಠ್ಠಲರಾವ್ ಗಾಯಕ್ವಾಡ್

    ಶಿವಮೊಗ್ಗ: ದ್ರೌಪದಿಯನ್ನು ಒಂದು ಕಾಲ ಅಥವಾ ಪರಂಪರೆಯಲ್ಲಿ ಹಿಡಿದಿರುವುದು ತುಂಬಾ ಕಷ್ಟ. ಆಕೆಯು ಮಹಾಭಾರತದ ಒಂದು ಸ್ತ್ರೀ ಪಾತ್ರ ಮಾತ್ರವಲ್ಲ, ಇಡೀ ಮಹಾಭಾರತದ ಕೇಂದ್ರ ಬಿಂದು ಕೂಡ ಆಗಿದ್ದಾಳೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ವಿಠ್ಠಲರಾವ್ ಗಾಯಕ್ವಾಡ್ ಅಭಿಪ್ರಾಯಪಟ್ಟರು.

    ನಗರದಲ್ಲಿ ಭಾನುವಾರ ವಿನೋಬನಗರದ ಬೆಳಗು ಪ್ರಕಾಶನದಿಂದ ಲೇಖಕಿ ಸುನೀತಾ ರಾವ್ ಅವರ ದ್ರೌಪದೀಪರ್ವ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಮಹಾಭಾರತದಲ್ಲಿ ದ್ರೌಪದಿಯದ್ದು ಕ್ರಿಯಾಶೀಲ ಪಾತ್ರವಾಗಿದೆ. ಹಾಗಾಗಿ ಮಹಾಭಾರತ ಮಹಿಳಾ ಪ್ರಧಾನವಾಗಿದೆ ಎಂಬುದನ್ನು ದ್ರೌಪದೀಪರ್ವ ಕಾದಂಬರಿ ಅರ್ಥೈಸುತ್ತದೆ ಎಂದರು.
    ಸ್ತ್ರೀ ಪಾತ್ರಕ್ಕೆ ಇರುವ ಇನ್ನೊಂದು ಮಗ್ಗಲನ್ನು ಸುನೀತಾ ರಾವ್ ಅವರು ಕಾದಂಬರಿಯಲ್ಲಿ ಅಚ್ಚುಕಟ್ಟಾಗಿ ಉಲ್ಲೇಖಸಿದ್ದಾರೆ. ಇಡೀ ಜಗತ್ತು ಮಾತೃ ಹೃದಯದ ಮೇಲೆ ನಿಂತಿದ್ದು ಲೇಖಕಿಯ ಕಲ್ಪನೆ ವಾಸ್ತವವಾಗಿದೆ. ಒಂದು ಕಾಲದಲ್ಲಿ ಪುರುಷರು ಮಹಿಳೆರ ಮೇಲೆ ದೌರ್ಜನ್ಯ ನಡೆಸುವುದು ಸಾಮಾನ್ಯವಾಗಿತ್ತು. ಆದರೆ ಇಂದು ಮಹಿಳೆಯರೇ ಪುರುಷರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಹಾಗಾಗಿ ಮಹಿಳೆಯರು ಮಾತೃ ಹೃದಯಿಗಳಾಗಬೇಕಿದೆ. ಹೆಣ್ಣು ಗಂಡಿನಲ್ಲಿ ದೈಹಿಕವಾಗಿ ವ್ಯಾತ್ಯಸವಿದೆಯೇ ವಿನಃ ಮಾನಸಿಕವಾಗಿ ಇಬ್ಬರಿಗೂ ಒಂದೇ ಸಮನಾದ ಸಾಮರ್ಥ್ಯವಿದೆ ಎಂಬುದನ್ನು ಮರೆಯಬಾರದು ಎಂದು ಸಲಹೆ ನೀಡಿದರು.
    ದ್ರೌಪದಿಗೆ ಕುಂತಿಯ ಆದರ್ಶವಿತ್ತು. ಸೀತೆ ವನವಾಸಕ್ಕೆ ಹೋದ ಬಳಿಕ ದ್ರೌಪದಿಗಿದ್ದ ಪ್ರಜ್ಞೆ, ಛಲವನ್ನು ಮೆಚ್ಚಲೇಬೇಕಾಗುತ್ತದೆ. ರಾಮಾಯಣಕ್ಕೆ ಒಂದೇ ಆರಂಭವಿದ್ದರೆ ಮಹಾಭಾರತಕ್ಕೆ ಸಾಕಷ್ಟು ಆರಂಭಗಳಿವೆ. ಮಹಾಭಾರತದಲ್ಲಿ ದ್ರೌಪದಿಯ ಮುಡಿಯೇ ಇಡೀ ಮಹಾಭಾರತದ ಪ್ರತಿಮೆಯಾಗಿದೆ. ಮಾತೃಹೃದಯ ಮತ್ತು ಮುಡಿ ಹೊಸ ನೆಲೆಯಲ್ಲಿ ಕಾದಂಬರಿ ಬರೆದಿದ್ದಾರೆ. ದ್ರೌಪದಿಗೆ ಹಲವಾರು ಹೆಸರಿದ್ದು ಆಕೆ ತಾಯಿಯ ಗರ್ಭದಲ್ಲಿ ಜನಿಸಿದವರಲ್ಲ. ತಂದೆಯ ಗರ್ಭದಲ್ಲಿ ಜನಿಸಿದರೂ ಆಕೆಯಲ್ಲಿ ಮಾತೃಹೃದಯ ಹೇಗೆ ಬಂದಿದೆ ಎಂಬುದಕ್ಕೆ ಉತ್ತರವನ್ನು ಸುನೀತಾರಾವ್ ಅವರು ಕಾದಂಬರಿಯಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
    ನಿವೃತ್ತ ಉಪನ್ಯಾಸ ವಿದ್ವಾನ್ ನಾರಾಯಣಭಟ್, ಬೆಳಗು ಪ್ರಕಾಶನದ ಎಸ್.ಬಿ.ಪೂರ್ಣಚಂದ್ರ ಮಾತನಾಡಿದರು. ಲೇಖಕಿ ಸುನೀತಾ ರಾವ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಎನ್.ಎಂ.ಸುಂದರರಾಜ್, ಕಸಾಪ ಮಾಜಿ ಅಧ್ಯಕ್ಷ ಡಿ.ಬಿ.ಶಂಕರಪ್ಪ, ಎಸ್.ವಿ.ಚಂದ್ರಕಲಾ, ಪ್ರೊ. ಎಸ್.ಎಸ್.ದುರ್ಗೋಜಿರಾವ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts