More

    ಶಿವಮೊಗ್ಗದಲ್ಲಿ 5 ದಿನ ರಂಗ ದಸರಾ

    ಶಿವಮೊಗ್ಗ: ನಗರ ಪಾಲಿಕೆಯಿಂದ ಆಯೋಜಿಸಿರುವ ದಸರಾದ ಭಾಗವಾಗಿ ಸೆ.27ರಿಂದ ಐದು ದಿನ ರಂಗ ದಸರಾ ಆಯೋಜಿಸಲಾಗಿದೆ. 27ರ ಬೆಳಗ್ಗೆ 10.30ಕ್ಕೆ ರಂಗ ಜಾಥಾಕ್ಕೆ ನಗರ ಪಾಲಿಕೆ ಆವರಣದಲ್ಲಿ ರಂಗಕರ್ಮಿ ಹಾಲೇಶ್ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ ಎಂದು ರಂಗ ದಸರಾ ಸಮಿತಿ ಸದಸ್ಯ ಎಸ್.ಎನ್.ಚನ್ನಬಸಪ್ಪ ತಿಳಿಸಿದರು.
    ರಂಗ ಜಾಥಾ ಬಳಿಕ ಕುವೆಂಪು ರಂಗ ಮಂದಿರದಲ್ಲಿ ನಾಟಕಕಾರ ಗಜಾನನ ಶರ್ಮಾ ಚಾಲನೆ ನೀಡಲಿದ್ದಾರೆ. ಬಳಿಕ ಜಿಲ್ಲೆಯ ಹಿರಿಯ ರಂಗಕರ್ಮಿಗಳೊಂದಿಗೆ ಸಂವಾದ ನಡೆಯಲಿದೆ. ಚಿಂತಕ ವಿಜಯವಾಮನ ಸಂವಹನಕಾರರಾಗಿ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಅಂದು ಮಧ್ಯಾಹ್ನ 2.30ಕ್ಕೆ ಮೂಕಾಭಿನಯ ಸ್ಪರ್ಧೆಗೆ ರಂಗಕರ್ಮಿ ಕಾಂತೇಶ್ ಕದರಮಂಡಲಗಿ ಚಾಲನೆ ನೀಡಲಿದ್ದಾರೆ. ಸೆ.28ರ ಬೆಳಗ್ಗೆ 10.30ಕ್ಕೆ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಮಟ್ಟದ ಏಕಾಪಾತ್ರಾಭಿನಯ ಸ್ಪರ್ಧೆ (ಶಾಲಾ, ಕಾಲೇಜು ಮತ್ತು ಸಾರ್ವಜನಿಕ ವಿಭಾಗಗಳಲ್ಲಿ) ನಡೆಯಲಿದೆ. ಅಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ರಾಜ್ಯ ಮಟ್ಟದ ಹಾಸ್ಯ ನಾಟಕ ಸ್ಪರ್ಧೆ ನಡೆಯಲಿದ್ದು, ಪರಿಸರವಾದಿ ಪ್ರೊ.ಬಿ.ಎಂ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.
    ಸೆ. 1ರಂದು ಬೆಳಗ್ಗೆ 10ರಿಂದ ಕುವೆಂಪು ರಂಗ ಮಂದಿರದಲ್ಲಿ ಮಕ್ಕಳ ರಂಗೋತ್ಸವ ನಡೆಯಲಿದ್ದು, ವಿವಿಧ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಐದು ನಾಟಕಗಳನ್ನು ಪ್ರಸ್ತುತಪಡಿಸಲಿದ್ದಾರೆ ಎಂದರು.
    ರಂಗ ದಸರಾ ಸಮಿತಿ ಅಧ್ಯಕ್ಷ ಶಿರೀಶ್, ಸದಸ್ಯರಾದ ಆರ್.ಸಿ.ನಾಯ್ಕ, ಪ್ರಭಾಕರ್, ಎಚ್. ಮೂರ್ತಿ, ಕಾರ್ಯದರ್ಶಿ ಮಧು ನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts