More

    ಪರಿಣಾಮ ಬೋಧನೆಗೆ ರಂಗ ಕಲೆ ಸಹಕಾರಿ

    ಚಿತ್ರದುರ್ಗ: ಪರಿಣಾಮಕಾರಿ ಪಠ್ಯ ಬೋಧನೆಗೆ, ರಂಗಕಲೆ ಶಿಕ್ಷಕರಿಗೆ ಸಹಕಾರಿಯಾಗಿದೆ ಎಂದು ಡಯಟ್ ಉಪನ್ಯಾಸಕ ಎನ್.ರಾಘವೇಂದ್ರ ಹೇಳಿದರು.

    ನಗರದ ಬಾದರ ದಿನ್ನಿ ಆರ್ಟ್ಸ್‌ಅಕಾಡೆಮಿ,ಕನ್ನಡ ಮತ್ತು ಸಂಸೃತಿ ಇಲಾಖೆ ಸಹಯೋಗದೊಂದಿಗೆ ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಶಿಕ್ಷಣದಲ್ಲಿ ರಂಗಕಲೆ ಕುರಿತ ಒಂದು ದಿನದ ಕಾರ‌್ಯಾಗಾರದಲ್ಲಿ ಅವರು ಮಾತನಾಡಿ, ಶಿಕ್ಷಕರು ರಂಗಕಲೆಯನ್ನು ಬಳಸಿಕೊಂಡು ಮಕ್ಕಳಲ್ಲಿರುವ ಸೃಜನಶೀಲತೆ ಹೆಚ್ಚಿಸ ಬೇಕು.ಇದರಿಂದ ಪಠ್ಯವನ್ನು ಪರಿಣಾಮಕಾರಿಯಾಗಿ ಮಕ್ಕಳಿಗೆ ತಲುಪಿಸ ಬಹುದೆಂದರು.

    ಬಾಪೂಜಿ ಸಮೂಹ ಸಂಸ್ಥೆಗಳ ಕಾರ‌್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ,ರಂಗಕಲೆ ಮಕ್ಕಳಲ್ಲಿ ಶಿಸು,್ತ,ಸಂಯಮ ಕಲಿಸುತ್ತದೆ. ರಂಗಕಲೆಯಿಂದ ಮೌಲ್ಯಯುತ ಶಿಕ್ಷಣ ಪಡೆಯಲು ಸಾಧ್ಯವಿದೆ. ಶಾಲೆಗಳಲ್ಲಿ ರಂಗಕಲೆಗೆ ಹೆಚ್ಚಿನ ಮಹತ್ವ ನೀಡುವ ಕೆಲಸವಾಗಬೇಕು. ರಂಗಕಲೆಯಿಂದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಸಾಧ್ಯ. ಜಗತ್ತಿನ ಉತ್ತಮ ಶಿಕ್ಷಕ ಒಬ್ಬ ರಂಗಕರ್ಮಿ ಆಗಿರುತ್ತಾನೆ ಎಂದರು.

    ನೀನಾಸಂ ಕಲಾವಿದ ಕೆ.ಪಿ.ಎಂ.ಗಣೇಶಯ್ಯ ಅವರು ನವರಸಗಳ ಹಾಗೂ ರಾಕ್‌ಪೋರ್ಟ್ ಶಾಲೆ ಮುಖ್ಯಶಿಕ್ಷಕ ಸಿ.ಪಿ.ಜ್ಞಾನದೇವ ಧ್ವನಿಯ ಏರಿಳಿತದ ಕುರಿತಂತೆ ತಿಳಿಸಿದರು. ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ‌್ಯೆ ಜಯಲಕ್ಷ್ಮೀ ಉಪ್ಯಾಸಕರಾದ ಮಂಜುನಾಥ್, ಎಸ್.ಮಂಜುನಾಥ,ಟಿ.ಮಾರುತೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts