More

    ಬದುಕಿನ ನೈಜತೆ ಬಿಂಬಿಸುವ ಕಲೆ ನಾಟಕ

    ರಿಪ್ಪನ್​ಪೇಟೆ: ಅನಾದಿ ಕಾಲದಿಂದ ಜನಮನವನ್ನು ರಂಜಿಸಿ ವಾಸ್ತವತೆ ಬಿಂಬಿಸುವ ಕಲೆಯಾಗಿರುವ ನಾಟಕ, ಕಲಾ ಪ್ರಕಾರಗಳಲ್ಲಿ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ ಎಂದು ಆನಂದಪುರ ಮುರುಘಾಮಠದ ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

    ಪಟ್ಟಣದಲ್ಲಿ ಮಂಗಳವಾರ ಸಂಜೆ ದಿವಂಗತ ಎಂ.ಕೆ.ರೇಣುಕಪ್ಪಗೌಡ ಪ್ರತಿಷ್ಠಾನದಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಆಯೋಜಿಸಿದ್ದ ‘ಸಂಕ್ರಾಂತಿ ನಾಟಕೋತ್ಸವ ಮತ್ತು ಜನಪದ ಉತ್ಸವ -2020’ರ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

    ಪ್ರಸ್ತುತ ವಿವಿಧ ತಂತ್ರಜ್ಞಾನಗಳಿಂದ ಪರಿವರ್ತಿತಗೊಂಡ ಕಲಾಭಿರುಚಿಗಳತ್ತ ಜನರು ಆಕರ್ಷಿತವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಆದರೆ ನಾಟಕ ಕಲೆ ಇವುಗಳ ಅಗತ್ಯವಿಲ್ಲದೆ ನವರಸಗಳನ್ನು ಮೀಸಲಿಟ್ಟ ವೇದಿಕೆಯಲ್ಲಿ ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರನ್ನು ಆಕರ್ಷಿಸಿಸುವ ಕಲೆಯಾಗಿದೆ. ಇತ್ತೀಚೆಗೆ ಸಿನಿಮಾ, ಧಾರಾವಾಹಿಗಳಂತಹ ತಾಂತ್ರಿಕ ಮನೋರಂಜನೆಯಿಂದ ನಾಟಕಗಳು ನೇಪಥ್ಯಕ್ಕೆ ಸರಿದಿವೆ. ಆದರೆ ರಂಗಕರ್ವಿುಗಳು ನಾಟಕಗಳ ಸಂದೇಶವನ್ನು ಗಟ್ಟಿಗೊಳಿಸಲು ಅಲ್ಲಲ್ಲಿ ತಂಡ ರಚಿಸಿಕೊಂಡು ನಮ್ಮದೇ ಆದ ಕಲಾಪ್ರಕಾರ ಉಳಿಸಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.

    ಒಬ್ಬ ಶಿಕ್ಷಕ ರೇಣುಕಪ್ಪಗೌಡ ಮರಣ ಹೊಂದಿದ 20 ವರ್ಷಗಳ ನಂತರ ಅವರ ನೆನಪಿನಲ್ಲಿ ಒಂದು ಪ್ರತಿಷ್ಠಾನ ರಚಿಸಿಕೊಂಡು ಆ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲೆಗಳನ್ನು ಬೆಳೆಸುವ ಸಂಕಲ್ಪವನ್ನು ಅವರ ಶಿಷ್ಯಂದಿರು ತೆಗೆದುಕೊಂಡಿದ್ದಾರೆ ಎಂದರೆ ರೇಣುಕಪ್ಪ ಗೌಡರ ವ್ಯಕ್ತಿತ್ವ ಎಷ್ಟು ಆಕರ್ಷಿತವಾಗಿತ್ತು ಎಂಬುದನ್ನು ಕಾಣಬಹುದು. ಶಿಕ್ಷಕರಿಂದ ಪ್ರೇರಿತರಾದ ವಿದ್ಯಾರ್ಥಿಗಳು ಇಂದು ಸಮಾಜದ ಅನೇಕ ಸ್ಥರದಲ್ಲಿ ಕೆಲಸ ನಿರ್ವಹಿಸುತ್ತಿದ್ದರೂ ಅವರ ಸವಿನೆನಪನ್ನು ಅಜರಾಮರವಾಗಿಸುವ ಪಣತೊಟ್ಟಿರುವ ಕಾರ್ಯ ಶ್ಲಾಘನೀಯ. ಪ್ರತಿಷ್ಠಾನದ ಕಾರ್ಯದಿಂದ ಗೌಡರ ಹುಟ್ಟೂರಾದ ಮಸರೂರು ರಂಗಾಯಣ ಚಟುವಟಿಕೆಗಳ ತಾಣವಾಗಲಿ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts