More

    ಸಾಹಿತ್ಯ ಅಧ್ಯಯನದಿಂದ ಆತ್ಮೋನ್ನತಿ

    ಬಾಳೆಹೊನ್ನೂರು: ಆರೋಗ್ಯ ಪೂರ್ಣ ಸಮಾಜ ನಿರ್ವಣಕ್ಕೆ ಉತ್ತಮ ಸಾಹಿತ್ಯ ಚಿಂತನೆ ಅವಶ್ಯ ಎಂದು ಡಾ. ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಶ್ರೀ ರಂಭಾಪುರಿ ಪೀಠದಲ್ಲಿ ಶ್ರಾವಣ ಗುರುವಾರದ ತಪೋನುಷ್ಠಾನದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಮೂರು ಸಾಹಿತ್ಯ ಕೃತಿಗಳನ್ನು ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು.

    ಸಾಹಿತ್ಯ ಮನಸ್ಸನ್ನು ಅರಳಿಸುವಂತೆ ಇರಬೇಕು. ಚಿತ್ತವನ್ನು ಬೆಳಗಿ ಹೃದಯವನ್ನು ಪರಿಶುದ್ಧಗೊಳಿಸುವ ತನ್ಮೂಲಕ ಆತ್ಮೋನ್ನತಿಗೆ ಕಾರಣವಾಗುವಂಥದ್ದೇ ನಿಜವಾದ ಸಾಹಿತ್ಯ. ಶುದ್ಧ ಮನಸ್ಸು, ಸದ್ಗುಣ, ಆದರ್ಶ ಸ್ನೇಹ ಮತ್ತು ಸಮಾಧಾನ ಇವು ಮನಷ್ಯನ ನಿಜವಾದ ಆಸ್ತಿ ಎಂದರು.

    ಪುಸ್ತಕಗಳನ್ನು ಓದುವುದು ಮುಖ್ಯವಲ್ಲ. ಅದರಲ್ಲಿರುವ ವಿಷಯ ಗ್ರಹಿಸಿ ಜೀವನದಲ್ಲಿ ಅಳವಡಿಸಿಕೊಂಡು ನಡೆದರೆ ಜೀವನ ಸಾರ್ಥಕವಾಗುತ್ತದೆ. ದೇವರ ಮುಂದೆ ಹಚ್ಚುವ ದೀಪ ದೇವರಿಗೆ ಬೆಳಕು ಕೊಡುವುದಕ್ಕಾಗಿ ಅಲ್ಲ. ಮನುಷ್ಯನಲ್ಲಿರುವ ಅಜ್ಞಾನ ಕಳೆದು ಜ್ಞಾನ ಸಂಪಾದಿಸುವುದಕ್ಕಾಗಿ. ನೀರು, ಅನ್ನ, ಗಾಳಿ ಮನುಷ್ಯನಿಗೆ ಎಷ್ಟು ಮುಖ್ಯವೋ ಹಾಗೆಯೇ ಆದರ್ಶ ವ್ಯಕ್ತಿಯಾಗಿ ಬಾಳಲು ಸಾಹಿತ್ಯ, ಸಂಸ್ಕೃತಿ ಅರಿವು ಮುಖ್ಯ ಎಂದು ಹೇಳಿದರು.

    ಸಿದ್ಧಾಂತ ಶಿಖಾಮಣಿಯಲ್ಲಿ ಏಕದೇವೋಪಾಸನೆ, ಸಿದ್ಧಾಂತ ಶಿಖಾಮಣಿ- ಭಗವದ್ಗೀತೆ, ಶ್ರೀ ರಂಭಾಪುರೀಶ್ವರ ಸಂದೇಶ ಎಂಬ ಸಾಹಿತ್ಯ ಕೃತಿಗಳನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.

    ಸೋನಪೇಟೆ ಹಿರೇಮಠದ ಶ್ರೀ ನಂದಿಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಬ್ಯಾಡಗಿ ಶ್ರೀ ಸಿದ್ದಲಿಂಗ ಸ್ವಾಮೀಜಿ, ಬೆಂಗಳೂರಿನ ಉದಯ-ಸತೀಶ, ದಾರುಕಾರಾಧ್ಯ ಶಾಸ್ತ್ರಿಗಳು, ಚನ್ನವೀರಯ್ಯ ಚಿಗರಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts