More

    ಡಾ. ರಾಜ್ ಮೊಮ್ಮಗನ ಸಿನಿಮಾ ರೆಡಿ … ಸಖತ್​ ಮಾಸ್​ ಲುಕ್​ನಲ್ಲಿ ಧೀರೇನ್​

    ಡಾ. ರಾಜಕುಮಾರ್ ಮೊಮ್ಮಗ ಯುವ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೆ ಸಜ್ಜಾದರೆ, ಮತ್ತೊಬ್ಬ ಮೊಮ್ಮಗ ಧೀರೇನ್ (ಪೂರ್ಣಿಮಾ ರಾಜಕುಮಾರ್ ಮತ್ತು ರಾಮ್‌ಕುಮಾರ್ ಮಗ) ಅಭಿನಯದ ಮೊದಲ ಚಿತ್ರ ಸದ್ದಿಲ್ಲದೆ ಮುಗಿದು ಈಗ ಬಿಡುಗಡೆಯ ಹಂತಕ್ಕೆ ಬಂದಿದೆ.

    ಹೌದು, 2018ರಲ್ಲೇ ಪ್ರಾರಂಭವಾಗಿದ್ದ ಧೀರೇನ್ ಅಭಿನಯದ ಮೊದಲ ಚಿತ್ರ ಇದೀಗ ಮುಗಿದಿದೆ. ಲಾಕ್‌ಡೌನ್ ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಬಿಡುಗಡೆಯಾಗಿರುತಿತ್ತೇನೋ? ಆದರೆ, ಲಾಕ್‌ಡೌನ್‌ನಿಂದಾಗಿ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದ್ದು, ಇವೆಲ್ಲಾ ಮುಗಿದ ನಂತರ ಬಿಡುಗಡೆಯಾಲಿದೆ. ಈ ಮಧ್ಯೆ ಚಿತ್ರದ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ರಫ್​ ಆ್ಯಂಡ್ ಟಫ್​ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಧೀರೇನ್ ಕುರಿತು ಅಭಿಮಾನಿಗಳಿಂದ ಪ್ರಶಂಸೆ ಕೇಳಿಬರುತ್ತಿದೆ.

    ಚಿತ್ರದಲ್ಲೊಂದು ಮಹತ್ತರ ಬದಲಾವಣೆಯಾಗಿರುವುದು ಗೊತ್ತಿರಬಹುದು. ಚಿತ್ರ ಲಾಂಚ್ ಆದಾಗ, ಚಿತ್ರಕ್ಕೆ ‘ದಾರಿ ತಪ್ಪಿದ ಮಗ’ ಎಂಬ ಹೆಸರಿತ್ತು. ಸುಮಾರು ಆರು ತಿಂಗಳ ಹಿಂದೆಯೇ  ‘ಶಿವ 143’ ಎಂದು ಮರುನಾಮಕರಣವಾಗಿತ್ತು. ಈಗ ಅದೇ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ‘ಶಿವ 143’ ಚಿತ್ರದಲ್ಲಿ ಧೀರೇನ್‌ಗೆ ನಾಯಕಿಯಾಗಿ ಮಾನ್ವಿತಾ ಕಾಮತ್ ನಟಿಸಿದ್ದು, ಮಿಕ್ಕಂತೆ ಚಿಕ್ಕಣ್ಣ, ಅವಿನಾಶ್, ಸಾಧು ಕೋಕಿಲ, ಚರಣ್ ರಾಜ್ ಮುಂತಾದವರು ನಟಿಸಿದ್ದಾರೆ. ಚಿತ್ರವನ್ನು ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸಿದ್ದು, ‘ರ‌್ಯಾಂಬೋ 2’ ಖ್ಯಾತಿಯ ಅನಿಲ್ ನಿರ್ದೇಶನ ಮಾಡಿದ್ದಾರೆ. ಇನ್ನು ಅರ್ಜುನ್ ಜನ್ಯ ಸಂಗೀತ ಈ ಚಿತ್ರಕ್ಕಿದೆ.

    ಧರಿಸೋ ಬಟ್ಟೆ ನೋಡಿ ಯಾರನ್ನೂ ಜಡ್ಜ್​ ಮಾಡಬೇಡಿ; ನೆಟ್ಟಿಗರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ನಟಿ ಅನಿತಾ ಭಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts