More

    ಡಾ.ಮೂಜಗಂ ಶ್ರೀಗಳ ಸಮಾಜ ಸೇವೆ ಅಪಾರ

    ಘಟಪ್ರಭಾ: ಹುಬ್ಬಳ್ಳಿ ಮೂರು ಸಾವಿರ ಮಠದ ಲಿಂಗೈಕ್ಯ ಡಾ.ಮೂಜಗಂ ಅವರು ಗ್ರಾಮೀಣ ಭಾಗದಲ್ಲಿ ಅಪಾರ ಸೇವೆಗೈದಿದ್ದರು. ಶಿರಢಾಣ ಗ್ರಾಮದಲ್ಲಿ ಆಂಗ್ಲ ಮಾಧ್ಯಮ ವಸತಿ ಶಾಲೆ ಹಾಗೂ ಘಟಪ್ರಭಾದಲ್ಲಿ ಜೆ.ಜಿ.ಸಹಕಾರಿ ಆಸ್ಪತ್ರೆಯನ್ನು ಉನ್ನತ ಮಟ್ಟಕ್ಕೇರಿಸಿದ್ದರು ಎಂದು ಹುಕ್ಕೇರಿಯ ವಿರಕ್ತಮಠದ ಶಿವಬಸವ ಸ್ವಾಮೀಜಿ ಹೇಳಿದ್ದಾರೆ.

    ಸಮೀಪದ ಶಿರಢಾಣ ಗ್ರಾಮದ ಡಾ. ಗಂಗಾಧರ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಡಾ.ಮೂಜಗಂ ಅವರ 17ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

    ಮೂಜಗಂ ಶ್ರೀಗಳು ಉತ್ತರ ಕರ್ನಾಟಕದಲ್ಲಿ ಪ್ರಥಮ ಮಹಿಳಾ ಕಾಲೇಜು ಸ್ಥಾಪಿಸಿ, ವಿದೇಶಕ್ಕೆ ತೆರಳಿ ಕನ್ನಡ ನಾಡಿನ ಸಂಸ್ಕೃತಿ ಹರಡಿದವರು. ಧಾರ್ಮಿಕ, ಆಧ್ಯಾತ್ಮಿಕ, ಸಾಹಿತ್ಯಿಕ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸಿ ಮಾದರಿಯಾದವರು ಎಂದರು. ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಡಾ.ಮೂಜಗಂ ಶ್ರೀಗಳ ನೂತನ ಪುತ್ಥಳಿಗೆ ಪೂಜೆ ಸಲ್ಲಿಸಿದರು.

    ಅಮರಸಿದ್ದೇಶ್ವರ ಸ್ವಾಮೀಜಿ, ನರಗುಂದ ವಿರಕ್ತಮಠದ ಶಿವಕುಮಾರ ಸ್ವಾಮೀಜಿ, ವೀರಮಹಾಂತ ಸ್ವಾಮೀಜಿ, ಅರಳಿಕಟ್ಟೆಯ ಶಿವಮೂರ್ತಿ ದೇವರು, ತೆಲಸಂಗದ ವೀರೇಶ ದೇವರು, ಚನ್ನಬಸವ ದೇವರು, ಶಿವಾನಂದ ದೇವರು ಹಾಗೂ ಶಾಲಾ ಆಡಳಿತ ಮಂಡಳಿ ನಿರ್ದೇಶಕರಾದ ಬಸವರಾಜ ಮರಡಿ, ರಾಮಣ್ಣ ಹುಕ್ಕೇರಿ, ಡಾ.ಎಸ್.ಕೆ. ಕೋಣಿನ, ಡಾ.ವಿ.ಐ.ಪತ್ತಾರ, ರಾಜು ಕತ್ತಿ ಹಾಗೂ ಪ್ರಾಚಾರ್ಯ ಸುಭಾಸ ಭರಮರಾವತ ಹಾಗೂ ಸಿಬ್ಬಂದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts