More

    ಡಾ.ಕೋರೆ ದೂರದೃಷ್ಟಿ ನಾಯಕ

    ಸದಲಗಾ: ಡಾ. ಪ್ರಭಾಕರ ಕೋರೆ ಅವರು ತಮ್ಮ ದೂರದೃಷ್ಟಿ ಹಾಗೂ ಅಪೂರ್ವ ಕಾರ್ಯಕ್ಷಮತೆಯಿಂದ ಕೆಎಲ್‌ಇ ಸಂಸ್ಥೆಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದ್ದಾರೆ ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.

    ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಶಿವಾಲಯದಲ್ಲಿ ಡಾ. ಪ್ರಭಾಕರ ಕೋರೆ ಹುಟ್ಟುಹಬ್ಬ ಆಚರಣೆ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಕೋರೆ ಅವರ 73ನೇ ಜನ್ಮದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ. ಪ್ರಭಾಕರ ಕೋರೆ ಅವರು ತಮ್ಮ ಜೀವನವನ್ನು ಸಮಾಜಕ್ಕೆ ಅರ್ಪಿಸಿ ಬಡವರು, ದೀನ- ದಲಿತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.

    ಶಿಕ್ಷಣದಿಂದ ವಂಚಿತವಾಗಿದ್ದ ಮುಂಬೈ- ಕರ್ನಾಟಕ ಪ್ರದೇಶ ದಲ್ಲಿ ಕೆಎಲ್‌ಈ ಸಂಸ್ಥೆಯು ಶೈಕ್ಷಣಿಕವಾಗಿ ಆಮೂಲಾಗ್ರ ಬದಲಾ ವಣೆ ತಂದಿದೆ. ಗ್ರಾಮೀಣ ಭಾಗದ ಬಡವರು ಮತ್ತು ರೈತರ ಮಕ್ಕಳು ಅಭಿಯಾಂತ್ರಿಕ ಶಿಕ್ಷಣದ ಜತೆಗೆ ಬಿಬಿಎ, ಬಿಸಿಎ ಶಿಕ್ಷಣ ಪಡೆಯತ್ತಿದ್ದಾರೆ. ಚಿಕ್ಕೋಡಿಯ ಕಾನೂನು ಕಾಲೇಜ್‌ನಲ್ಲಿ ಶಿಕ್ಷಣ ಪಡೆದ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಜ್ಯಾದ್ಯಂತ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಭರತೇಶ ಬನವಣೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಗ್ರಾಹಕ ಇಂಧನ ಕೇಂದ್ರ ಉದ್ಘಾಟಿಸಲಾಯಿತು. ಅಂಕಲಿಯ ಕೆಎಲ್‌ಇ ಅಂಗಸಂಸ್ಥೆಗಳಲ್ಲಿ ಸಸಿ ನೆಡುವ ಕ್ರಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

    ರಕ್ತದಾನ ಶಿಬಿರ ಏರ್ಪಡಿಸುವುದರ ಜತೆಗೆ ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್, ರೋಗ ಪ್ರತಿರೋಧಕ ಶಕ್ತಿ ವೃದ್ಧಿಸುವ ಹೋಮಿಯೋಪಥಿಕ್ ಮಾತ್ರೆ ವಿತರಿಸಲಾಯಿತು. ನೀರು ಶುದ್ಧೀಕರಣ ಘಟಕ ಉದ್ಘಾಟಿಸಲಾಯಿತು. ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾದ ಬಿ.ಆರ್. ಪಾಟೀಲ, ಕಾರ್ಖಾನೆಯ ನಿರ್ದೇಶಕರಾದ ಅಣ್ಣಾಸಾಹೇಬ ಪಾಟೀಲ, ಮಲ್ಲಿಕಾರ್ಜುನ ಕೋರೆ, ಅಜಿತ ದೇಸಾಯಿ, ಮಹಾಂತೇಶ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts