More

  ಮಿಥ್ಯಾಚಾರರ ಕಾಟ ಹೆಚ್ಚಾಯ್ತು? ತಪ್ಪಿಸುವವರಾರು?

  ‘ಹಿಂದೂ’ ಹೆಸರಿನ, ಮುಖವಾಡದ ವಿದೇಶೀ ಶಕ್ತಿಗಳು, ಮತಾಂತರಶಕ್ತಿಗಳು ಬಯಲಾಗಲು ಕಠಿಣ ಕಾನೂನು ಬೇಕು. ಕಾಡುಸುಡುವುದು, ಊರಿಗೆ ಬೆಂಕಿ ಹಚ್ಚುವುದು, ಜಾತಿಜಗಳ ತೆಗೆದು, ಕೊಲೆ, ಲೂಟಿ ಮಾಡುವುದು ಇಂಥವರನ್ನು ನೇಣಿಗೇರಿಸಬೇಕು. ‘ಜಾತಿ ಬೇಡ’ ಎನ್ನುತ್ತ, ಜಾತಿಯನ್ನೇ ಮುಂದೆ ಮಾಡುವ ಕೆಟ್ಟ ರಾಜಕಾರಣಿಗಳನ್ನು ಜೈಲಿಗೆ ಸೇರಿಸಬೇಕು.

  ‘ಮಿಥ್ಯಾಚಾರ’ ಎಂದರೆ ಕಪಟವೇಷ, ಕಪಟ ಭಾಷಣ, ಕಪಟ ಆಚರಣೆ, ಸ್ವಾರ್ಥಕ್ಕಾಗಿ ದಿನಾ ಒಂದು ವೇಷ, ಸಮಯಸಾಧಕತೆಯ ಎಲ್ಲ ಆಷಾಢಭೂತಿತನಗಳೂ ಆಗುತ್ತವೆ, ಈ ವರ್ಣನೆಯ ಅಡಿಯಲ್ಲಿ ಸಂನ್ಯಾಸಿ, ರಾಜಕಾರಣಿ, ಸಮಾಜಧುರೀಣ, ವಿದ್ಯಾಸಂಸ್ಥೆಗಳ ಮುಖಂಡ, ‘ಸೇವಾಧುರೀಣ’, ವ್ಯಾಪಾರಿ ಸಂಘಗಳ ಅಧ್ಯಕ್ಷ, ದಲ್ಲಾಳಿ, ರಾಜಕಾರ್ಯ ನಿರತನಾಗಿ ದೇಶಭಕ್ತನಾಗಿರಬೇಕಾದ ‘ದೂತ’, ರಾಯಭಾರಿ, ಸರ್ಕಾರಿ ಅಧಿಕಾರಿ, ಯಾರೆಲ್ಲ ಸೇರುತ್ತಾರೆಂಬುದು ವಿಷಾದನೀಯ, ವಿಡಂಬನೆ! ಇಂಥವರಿಂದ ಭವ್ಯಭಾರತ ಹೇಗೆ ನಿರ್ವಿುಸುತ್ತೀರಿ? ಶಿಕ್ಷಿಸಿದರೆ ‘ಡೆಮಾಕ್ರಸಿ’ ಹೋಯ್ತು ಎಂಬ ಬೊಬ್ಬೆ; ದುಷ್ಟರನ್ನು ಹತ್ತಿಕ್ಕಿದರೆ ‘ಪೊಲೀಸರ ದಬ್ಬಾಳಿಕೆ’ ಎಂಬ ಅರಚಾಟ, ಬಿಗಿ ಕಾನೂನುಗಳು ಜಾರಿಯಾದರೆ, ‘ಹಿಟ್ಲರ್’, ‘ಫ್ಯಾಸಿಸಂ’, ‘ಮಾನವಹಕ್ಕುದಮನ’ ‘ಮೂಲಭೂತ ಹಕ್ಕು ಕಸಿತ’ ಎಂಬ ಅಬ್ಬರಾರ್ಭಟ ಅಲ್ಲದೆ, ಕೋರ್ಟ್ ಹತ್ತುವುದು, ಶಿಕ್ಷೆ ಜಾರಿಯ ವಿಳಂಬ ಯತ್ನ ದಾರಿಗಳು, ‘ವೆಂಡೆಟ್ಟಾ’ ಎಂಬ ಮುಯ್ಯಿಗೆ ಮುಯ್ಯಿ, ‘ರಾಜಕೀಯ ಸೇಡಿನ’ ಆಪಾದನೆ, ಎಲ್ಲವೂ ತಲೆಕೆಳಗಾದರೆ, ಚಳವಳಿ, ‘ಬಂದ್’, ದಿನಾ ರಗಳೆ, ಅಲ್ಲಿ ಅರ್ಬನ್ ನಕ್ಸಲರು, ಕಿಡಿಗೇಡಿಗಳು, ಆಮದಾದ ಬಾಡಿಗೆಯ ಭಂಟರು, ವಿದೇಶೀ ಹಣ, ಅಲ್ಲಿನ ಕುಮ್ಮಕ್ಕು, ಅಲ್ಲಿ ಪಾಕ್ ಏಜೆಂಟರ ಪ್ರವೇಶ, ಒಳಶತ್ರುಗಳ ಮಿಳಿತ, ಅಂತೂ, ಇಂತೂ ‘ಕುಂತೀ ಮಕ್ಕಳಿಗೆ ರಾಜ್ಯವಿಲ್ಲ’ ಎಂಬ ಗಾದೆಯ ಆಚರಣೆ, ‘ಮೋದಿ ಹಠಾವೋ’ ಕೂಗುಮಾರಿ-ಕಳ್ಳಹಣ ಚಲಾವಣೆ, ಮುದ್ರಣ, ನಾನಾ ಬಗೆಯ ತೆರಿಗೆ ವಂಚನೆಗಳು-ಎಲ್ಲ ‘ಮಿಥ್ಯಾಚಾರರ ಜಾಲವೇ’. ‘ಆಚಾರ್ಯರೇ! ನಿಮಗೇನಾಗಿದೆ? ಏಕೆ ಹೀಗೆಲ್ಲ ಬರೆಯುತ್ತೀರಿ’ ಎಂದು ಕೇಳುವವರಿಗೆ ‘ನೀವು ಮೂಢರು’ ಎಂದಲ್ಲದೆ ಬೇರೇನು ಹೇಳಲಿ? ಒಂದು ಕೆಟ್ಟ ಉಪಮಾನ ಕೊಡುತ್ತೇನೆ. ತಪು್ಪ ತಿಳಿಯಬಾರದಾಗಿ ವಿನಂತಿ.

  ಹರಿದು ಬಿಸಾಡಿದ ಒಂದು ಕೆಂಪುಬಟ್ಟೆ. ಒಂದು ಬೀದಿಬದಿಯ ಗುಂಡಿಯಲ್ಲಿದೆಯೆನ್ನಿ. ಅಲ್ಲಿ ಐದಾರು ಶ್ವಾನಗಳು ಸೇರಿದರೆ? ‘ಜಾತಿಗೆ ಜಾತಿ ವೈರಿ’ ಎಂದು ಸರ್ವಜ್ಞ ವಚನ ಬರೆದಿದ್ದಾನೆ. ಆಡಿಗೆ ಆಡು, ಟಗರಿಗೆ ಟಗರು, ಕೋಳಿಗೆ ಕೋಳಿ, ಗೂಳಿಗೆ ಗೂಳಿ, ಹೀಗೆ ಎರಡು ಸೇರಿದರೆ ರಂಪ, ಯುದ್ಧ. ಕಾಗೆಯೊಂದು ವಿನಾಯ್ತಿ. ರಾಜಕಾರಣಿಗಳ ರೀತಿ ಸರ್ವಜ್ಞ ವಚನದಡಿ ಸೇರುತ್ತದೆ. ತಿಳಿದಿದೆ. ಶ್ವಾನಗಳು ಐದಾರು, ಮೊದಲೇ ಹರಿದ ಕೆಂಪು ಬಟ್ಟೆಯನ್ನು ಐದಾರು ದಿಕ್ಕುಗಳಿಗೆ ಎಳೆದಾಡುತ್ತ, ಗುರ್​ಗುಟ್ಟುತ್ತ, ಕೊನೆಗೆ ಯಾವುದಕ್ಕೂ ಏನೂ ಸಿಗದ ದುಃಸ್ಥಿತಿಗೆ ನೀವೂ ನಾವೂ ಸಾಕ್ಷಿಗಳಾಗಿರುತ್ತೇವೆ. ‘ಕೆಂಪುಬಟ್ಟೆ= ಮಾಂಸ’ ಎಂಬ ಭ್ರಮೆ. ನಾಯಿಗಳಲ್ಲಿ ಕೃತ್ಯ. ರಾಜಕಾರಣಿಗಳಲ್ಲಿ, ಜಾತೀಯ ಮಠಪತಿಗಳಲ್ಲಿ, ಅದನ್ನು ಛೂ ಬಿಡುವ, ಕೈಗೊಂಬೆಗಳಂತೆ ಆಡಿಸುವ ವಿಷಬುದ್ಧಿಯ ರಾಜಕಾರಣಿಗಳಿಗೂ ಭ್ರಮೆ! ‘ಆಧಿಕಾರ ಸಿಗುತ್ತದೆ’ ಎಂಬುದು. ‘ಎಲ್ಲರೂ ಮಂತ್ರಿಗಳಾಗಬೇಕು, ಎಲ್ಲರೂ ಡಿಸಿಎಂ ಆಗಬೇಕು, ‘ಡಿಷುಂ ಡಿಷುಂ’ ಮಾಡಬೇಕು, ಯಾರಾರನ್ನೋ ಉರುಳಿಸಬೇಕು, ಹಣ ಮಾಡಬೇಕು, ಅಧಿಕಾರ ಚಲಾಯಿಸಬೇಕು’ ಇದು ಭ್ರಮೆ.

  ‘ಡೆಲ್ಲಿ ದರ್ಬಾರ್’ ಅಂತ ಒಂದು ತಮಿಳು ಚಿತ್ರ. ಅಲ್ಲಿ ಖಳನಾಯಕ ಪ್ರಕಾಶರಾಜ ಎಂಬ, ರಾಜಕೀಯದಲ್ಲೂ ಖಳನಾಯಕ, ‘ಆಂಟಿ ನ್ಯಾಷನಲ್’, ನಂಬಿದವನಿಗೆ ಬೆನ್ನಿಗೆ ಚೂರಿ ಹಾಕಿ, ಸಿಕ್ಕಿಬಿದ್ದಾಗ ಹೇಳುವ ಅರ್ಥಗರ್ಭಿತ, ಸಾರ್ವಕಾಲಿಕ ಮಾತು-‘ಐ ವಾಂಟ್ ಮನಿ’, ಯೆಸ್, ‘ಐ ವಾಂಟ್ ಪವರ್’ ಅಂತ. ಸಿಗುವುದೇನು? ಶೋಚನೀಯ ಮರಣ! ಶಿಕ್ಷೆ ಜೈಲು ಬೇಡ. ತಪ್ಪಿಸಿಕೊಳ್ಳುತ್ತಾರೆ. ಅವನ ಕೊರಳಿಗೆ ಆತ್ಮಾಹುತಿ ಬಾಂಬು ಸರ ತೊಡಿಸಿ, ‘ಢಂ’ ಎನ್ನಿಸುವ ದೃಶ್ಯ. ಇದು ಕಾದಿದೆ, ಇಂದಿನ ಖಳರಿಗೆ, ಖೂಳರಿಗೆ, ಸಂನ್ಯಾಸಿ ವೇಷದ ಕಪಟ ರಾಜಕಾರಣಿಗಳಿಗೆ.

  ಸಾಮಾಜಿಕದಲ್ಲಿ ಕೊಳೆ, ರಾಜಕೀಯದಲ್ಲಿ ಕೆಸರು, ಮುಳ್ಳು, ವಿಷ-ಯಾವುದನ್ನು ಎಲ್ಲಿಂದ ಮೊದಲು ಸರಿ ಮಾಡುತ್ತೀರಿ? ಮೋದಿ ಏಕೆ ಇನ್ನೂ ಖಳಖೂಳರ ಬಗ್ಗೆ ಲಿಬರಲ್ ಆಗಿದ್ದಾರೆ? ಮತ್ತೊಂದು ತುರ್ತು ಸ್ಥಿತಿ ಬೇಕೆ? ‘ಬೇಡ’ ಎನ್ನಲು ಯಾರಿಗೆ ಬಾಯಿ ಇದೆ? ‘ಚಿದಂಬರಂರನ್ನು ಹೊರಗೆ ಬಿಟ್ಟಿದ್ದು ತಪ್ಪು. ಸೋನಿಯಾ, ವಾದ್ರಾ, ರಾಹುಲರ ಬೇಲ್ ವಾಪಸ್ಸು ಪಡೆಯಬೇಕು. ತುರ್ತ. ಉಳಿದ ಮಿಶ್ಜೀಫ್ ಮಾಂಗರ್ಸ್- ಶರದ್ ಪವಾರ್, ಕರ್ನಾಟಕದ ಕಿತಾಪತಿ ಕಲಿಗಳು, ಬಂಗಾಳದ ಲಂಕಿಣಿ, ಇನ್ನಿತರರ ಮೇಲೆ ಕೇಸುಗಳು ನಡೆದಿವೆ. ಒಟ್ಟಿಗೇ ಜೈಲಿಗೆ ಹಾಕಿದರೆ, ಅವರ ಹಿಂಬಾಲಕರು ದಾಂಧಲೆ ಎಬ್ಬಿಸುತ್ತಾರೆಂಬ ಭಯವಿದ್ದರೆ, ಸ್ವಾಮಿ, ಈಗ ನಡೆಯುತ್ತಿರುವುದೇನು? ಬೇರೇನು ಹೆಚ್ಚು ದಾಂಧಲೆ ಬೇಕು? ಸಿಎಎ, ಎನ್​ಸಿಆರ್ ಬರೀ ನೆಪ! ಪಾಕಿಸ್ತಾನ ಜತೆಗೆ ಸೇರಿ ಕಾಂಗ್ರೆಸ್ ನಾಯಕರು ದೇಶದ ಭದ್ರತೆಗೇ ಡೈನಮೇಟು ಇಟ್ಟು ಡಿಟೋನೆಟ್ ಮಾಡುತ್ತಿದ್ದಾರೆ! ಕಾಂಗ್ರೆಸ್, ಕಮ್ಯುನಿಸ್ಟರು ಎಲ್ಲ ಎಡಪಂಥೀಯರ ಕೈಲಿ ನೀವು ಹೊಗಳಿಸಿಕೊಳ್ಳುವುದೇನಿಲ್ಲ. ಏನು ಮಾಡಿದರೂ, ಬಿಟ್ಟರೂ, ದಾಂಧಲೆ ಮಾಡುತ್ತಿರುವವರು ಹೆಚ್ಚು ಕೊಬ್ಬಿದರೆ ಇಡೀ ಭಾರತವೇ ಈಗ ‘ಪಾಕ್’ ಆಗಲಿದೆ.

  ಕರ್ನಾಟಕದ ಬಗ್ಗೆ ಕಣ್ಣೀರು ಮಿಡಿಯುವವರಲ್ಲಿ ನಾನೂ ಒಬ್ಬ. ಮುಖ್ಯಮಂತ್ರಿಗೆ ಎಷ್ಟು ಕಿರುಕುಳ ಕೊಡುತ್ತಿದ್ದಾರೆ? ಒಳಗಿನವರು? ಹೊರಗಿನವರು? ಅಲ್ಲೆಲ್ಲ ಅಯ್ಯನವರ ‘ಅಹಿಂದ’ಕ್ಕೆ ಈಗ ಫುಲ್ ಫ್ರೀಡಮ್ ಭಾಷೆ! ಕೀಳು ಸಂಸ್ಕೃತಿಯ ಹರಿದ ನಾಲಗೆ! ಬಂಡೆಗೆ ಸಿಡಿಯಲೂ ಆಗದೆ, ಉಂಡೆಯಾಗಿರಲೂ ಇಲ್ಲದ ಸ್ಥಿತಿ! ಇಲ್ಲ ‘ಏಸು’ ಏಕೆ ಬೇಕಿತ್ತು? ಪದವಿ ಸಿಕ್ಕರೆ ಜೈಲು ತಪ್ಪಿಸಿಕೊಳ್ಳುವ ಭ್ರಾಂತಿ ಇರಬೇಕು! ಕುಲಕಳಂಕರು, ಸಮುದಾಯ ನಾಶಕರು ಕರ್ನಾಟಕಕ್ಕೆ ಬೇಕೆ? ಸಂನ್ಯಾಸಿಗಳು! ಕೆಲವರು ಒಳ್ಳೆಯ ಕೆಲಸ ಮಾಡುವವರು ಇದ್ದಾರೆಂದರೂ ಢೋಂಗಿಗಳೂ ಇದ್ದಾರೆ. ಇವರಿಗೆ ಕಾಷಾಯ ಯಾರು ಕೊಟ್ಟರು? ಪತ್ರಿಕೆಯವರು ಇವರನ್ನು seers ಎನ್ನುವುದೇಕೆ?

  ‘ಋಷಿ ದರ್ಶನಾತ್’ ಎಂಬುದು ನಿಷ್ಪತ್ತಿಯಾದರೆ, ಈ ‘ಸೀಯರ್ಸ್’ಗೆ ತ್ರಿಕಾಲಜ್ಞಾನ ಇದೆಯೇ? ತ್ರಿಕಾಲ ಭೂತಕಾಲ ಚರಿತ್ರೆ, ಭವಿಷ್ಯ ಏನಾಗಬೇಕೆಂಬ ದೃಷ್ಟಿ, ವರ್ತಮಾನ ಪ್ರಜ್ಞೆ- ಏನೂ ಇಲ್ಲದವರನ್ನು ಇನ್ನಾದರೂ ಪತ್ರಿಕಾಕರ್ತರು ‘ಕಮ್ಯುನಲ್ ಲೀಡರ್ಸ್ ‘ಜಾತಿ ಮುಖಂಡರು’ ಎಂದು ಕರೆಯಿರಿ. ಜನಾಂದೋಲನಕ್ಕೆ ಕರೆಕೊಟ್ಟು ಬಂದ್ ಮಾಡಿಸುವವರೂ, ತಮ್ಮ ಜಾತಿಯ ನಾಯಕರಿಗೆ ‘ಅದು ಕೊಡಿ-ಇದು ಕೊಡಿ’ ಎಂದು ಬೆದರಿಕೆ ಹಾಕಿ, ವೋಟುಬ್ಯಾಂಕು ತಮ್ಮ ಕೈಲಿದೆ ಎನ್ನುವವರನ್ನು ಕಾಷಾಯಮಾತ್ರದಿಂದ ಖಛಿಛ್ಟಿಠ ಎಂದರೆ ಆ ಶಬ್ದಕ್ಕೆ ಅಪಮಾನ, ಅಪವ್ಯಾಖ್ಯಾನ. ‘ಸಂನ್ಯಾಸ’ ಎಂದರೆ ‘ಮನಸ್ಸಿನ ಅಂಟು ಬಿಡುವುದು’ ಅದಕ್ಕೆ ಕಾವಿ ಬೇಕಿಲ್ಲ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಹಾಗಿದ್ದರಲ್ಲ? ಎಲ್ಲ ಸಮುದಾಯಗಳಲ್ಲೂ ನೈಜ ಸಂತರು ಉಳಿದಿದ್ದಾರೆಂದೇ ಭಾರತ ಇನ್ನೂ ಒಡೆಯದೇ ಇದೆ. ಹಾಳುಮಾಡುತ್ತಿರುವ ಸಂನ್ಯಾಸಿಗಳು, ಕಪಟ ರಾಜಕಾರಣಿಗಳು, ಮಾತೆತ್ತಿದರೆ ‘ಬಂದ್’, ದಾಂಧಲೆಗೆ ಕರೆಕೊಡುವ ಅರುಂಧತೀ ರಾಯ್ ಅಂಥವರನ್ನು ಇನ್ನೆಷ್ಟು ದಿನ ಸಹಿಸಬೇಕು? ಅರ್ಬನ್ ನಕ್ಸಲರನ್ನು ಏಕೆ ಸಹಿಸಬೇಕು. ಒಬ್ಬ ‘ಅಯ್ಯರ್’ ಎಂಬ ಹೆಸರು, ಅವನು ಕ್ರೖೆಸ್ತ; ಒಬ್ಬಳು ‘ಅಂಬಿಕೆ’ ಅವಳು ಕ್ರೖೆಸ್ತಳು, ಇನ್ನೊಬ್ಬ ಸಿಂಗ್; ಇವನೂ ಕ್ರೖೆಸ್ತ. ಜನ ಮೋಸ ಹೋಗುತ್ತಿದ್ದಾರೆ. ಯಾರೋ ಈ ಬಂಗಾಳಿ ಬೊಂಬೆಯನ್ನು ‘ನಿಮ್ಮ ಜಾತಿ, ಕುಲ ಯಾವುದು?’ ಎಂದು ಕೇಳಿದ್ದಕ್ಕೆ ಕುಪಿತಳಾಗಿ ಎಷ್ಟು ಫಜೀತಿ ಮಾಡಿದರು? ಸರಸ್ವತೀ ಪೂಜೆ, ಮೊಹರಂ ಒಟ್ಟಿಗೇ ಬಂದಾಗ, ಈಕೆ ಬೃಹತ್ ಹಿಂದೂ ದೇವತೆಯ ವಿಗ್ರಹಗಳನ್ನು ಸಮುದ್ರಕ್ಕೆ ಉತ್ಸವದಲ್ಲಿ ವಿಸರ್ಜಿಸಲು ತಡೆ ಮಾಡಿದ ಸಂದರ್ಭ ಅನೇಕರಿಗೆ ಅನುಮಾನ-‘ಈಗ ಮುಸ್ಲಿಂ ಆಗಿರಬೇಕು’ ಅಂತ. ‘ಬಂಡೆ’ ಈಗ ಹಿಂದುವೋ? ಕ್ರೖೆಸ್ತನೋ? ಯು ಮಸ್ಟ್ ನೋ ಯುವರ್ ಲೀಡರ್ಸ್. ಬೆಕ್ಕು ಸಂನ್ಯಾಸ ಘೋಷಿಸಿದ ಕತೆ ಗೊತ್ತಿದೆಯಲ್ಲ? ‘ಸೋನಿಯಾ’ ಹೆಸರಲ್ಲಿ (ಬಂಗಾರ) ಮೋಸ, ಆಕೆ ಆಂಟೋನಿಯೋ ಮೈನೋ. ಚರಿತ್ರೆಯನ್ನು ಸುಬ್ರಹ್ಮಣ್ಯ ಸ್ವಾಮಿ ಹೇಳುತ್ತಾರೆ. ಕೇಳಿ.

  ಒಂದೆರಡು ಉಪಯುಕ್ತ ಸಲಹೆಗಳನ್ನು ಇಲ್ಲಿಡುತ್ತೇನೆ. ಸ್ವಾರ್ಥಿಗಳು ವಿರೋಧಿಸಿ, ದಾಂಧಲೆ ಮಾಡಿ, ಬೊಬ್ಬೆ ಹೊಡೆದು, ನನ್ನನ್ನೂ ಬೈದಾರು. ‘ತುಕ್ಡೆ ತುಕ್ಡೆ’ ಗ್ಯಾಂಗನ್ನು ಜೈಲಿಗೆ ಹಾಕುವುದಾಗಿ ಸಚಿವ ಅಮಿತ್ ಷಾ ಘೋಷಿಸಿದ್ದಾರೆ. ಮೊದಲು, ಯಾವುದೇ ಪ್ರಾಂತದಲ್ಲಿ ಮೆಜಾರಿಟಿ ಸರ್ಕಾರ ಬಾರದಾದರೆ, ಅಪವಿತ್ರ ಮೈತ್ರಿಗಳ ಬದಲಿಗೆ, ರಾಷ್ಟ್ರಪತಿ ಆಡಳಿತ ಹಾಕಿ, ಮೆಜಾರಿಟಿ ಬರುವ ತನಕ ಹಾಗೇ ಮಾಡಲು ಕಾನೂನು ತರಬೇಕು. ಸ್ವಾಮಿ! ಎಷ್ಟು ಸಲ ಇವರನ್ನೇ ಮುಖ್ಯಮಂತ್ರಿ, ಡಿಸಿಎಂ ಮಾಡುತ್ತೀರಿ? ನೋಡಿ ನೋಡಿ ಚರಿತ್ರೆ ನಿಮಗೆ ಸಾಕಾಗಿಲ್ಲವೇ? ಕುದುರೆ ವ್ಯಾಪಾರ ಎಷ್ಟುಸಲ? ಯಾರೆಲ್ಲ? ಏನು ಇಲ್ಲಿ ಬಾರ್ಗೆನ್? ಕರ್ನಾಟಕಕ್ಕೆ ಅಯ್ಯೋ ಎನ್ನುವವರು ದೆಹಲಿಯಲ್ಲೂ ಇಲ್ಲ ಎನಿಸುತ್ತಿದೆ. ಒಂದು ರಾಷ್ಟ್ರೀಯ ಸಂಸ್ಥೆಯಲ್ಲೂ ಒಡಕೇ? ಸ್ವಾರ್ಥವೇ? ತಳಹದಿಯೇ ಭದ್ರವಿಲ್ಲವಾದರೆ ಯಾವ ಗೋಡೆ ನಿಲ್ಲುತ್ತದೆ? ಪ್ರತಿಪಕ್ಷ! ಹಾಸ್ಯಾಸ್ಪದ ಸ್ಥಿತಿ! ಪರ್ಯಾಯ ಅಧ್ಯಕ್ಷರ ನೇಮಕ ವಿಷಯದಲ್ಲಿ, ಮತಧರ್ಮ ಒಡೆದವರು ಬೇಕೆ? ಜೈಲಿಗೆ ಹೋಗಿ, ಇನ್ನೂ ಕೇಸು, ಪರಿಹಾರವಾಗದ ಒಬ್ಬರು ಬೇಕೆ? ಕರ್ನಾಟಕ ಎಷ್ಟು ಸಲ ಸಾಯಬೇಕು? ಕಿಂಗ್ ಮೇಕರ್​ಗೆ ಸುಗ್ಗಿಯ ಕಾಲದ ‘ದಾನ’ ಎಷ್ಟು ಸಲ ಕೊಡುತ್ತೀರಿ? ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ ಪದವಿಗಳಿಗೆ ಎರಡೇ ಟಮ್ರ್ ಅಂತ ಫಿಕ್ಸ್ ಮಾಡಿ. ಅಂಥವರು ಕಿತಾಪತಿ ಮಾಡದಂತೆ ಕಾನೂನು ಬರಬೇಕು. ಅವರು ಕೆಳಗಿನ ಹುದ್ದೆಗಳಿಗೆ ಸ್ಪರ್ಧಿಸುವುದು, ಸೋಲಿನ ಪ್ರಸಂಗದಲ್ಲಿ ಎದುರಾಳಿಯನ್ನು ಸೋಲಿಸುವುದು, ಇದೆಲ್ಲ ‘ತುಕ್ಡೇ’ ಗ್ಯಾಂಗಿಗೇ ಸಹಾಯ, ಒತ್ತಾಸೆ!

  ಇಲ್ಲಿ ಸಂವಿಧಾನ, ಚುನಾವಣಾ ನೀತಿ, ಎಲ್ಲ ಸುಧಾರಿಸುವುದು ತುಂಬ ಇದೆ. ಅಧಿಕಾರಕ್ಕೆ ಬಂದೂ ರಾಷ್ಟ್ರವಿರೋಧಿ ಕೃತ್ಯದಲ್ಲಿ ತೊಡಗಿದರೆ ಅಥವಾ ಒತ್ತಾಸೆಯಾಗಿ, ಭಾಗವಹಿಸಿ, ಪರೋಕ್ಷದಲ್ಲಿ ಶತ್ರುರಾಷ್ಟ್ರಕ್ಕೆ ಒದಗಿದರೆ ಅಂಥವರನ್ನು ನೇಣುಹಾಕಬೇಕು. Communal polarisation ಬೇಡವಾದರೆ, ಅದರ ಮೂಲವನ್ನೇ ಕಿತ್ತು ಸುಡಬೇಕು. ಅಲ್ಲಿ ಅಗ್ನಿ ರಾಷ್ಟ್ರಭಕ್ತಿಯೇ ಆಗಬೇಕು. ಬೇರೇನು? ‘ಹಿಂದೂ’ ಹೆಸರಿನ, ಮುಖವಾಡದ ವಿದೇಶೀ ಶಕ್ತಿಗಳು, ಮತಾಂತರಶಕ್ತಿಗಳು ಬಯಲಾಗಲು ಕಠಿಣ ಕಾನೂನು ಬೇಕು. ಕಾಡುಸುಡುವುದು, ಊರಿಗೆ ಬೆಂಕಿ ಹಚ್ಚುವುದು, ಜಾತಿಜಗಳ ತೆಗೆದು, ಕೊಲೆ, ಲೂಟಿ ಮಾಡುವುದು ಇಂಥವರನ್ನು ನೇಣಿಗೇರಿಸಬೇಕು. ‘ಜಾತಿ ಬೇಡ’ ಎನ್ನುತ್ತ, ಜಾತಿಯನ್ನೇ ಮುಂದೆ ಮಾಡುವ ಕೆಟ್ಟ ರಾಜಕಾರಣಿಗಳನ್ನು ಜೈಲಿಗೆ ಸೇರಿಸಬೇಕು.

  ಚಾಣಕ್ಯನ ಕಾಲದಂತೆ, ಅರ್ಥಶಾಸ್ತ್ರದಲ್ಲಿ ಹೇಳಿದಂತೆ, ಸಂನ್ಯಾಸಿಗಳಿಗೆ ನಿಯಮಗಳನ್ನು ಸರ್ಕಾರವೇ ವಿಧಿಸುವ ಕಾಲ ಬಂದಿದೆ. ವಿಧಿಸುವವರು ಶುದ್ಧರಾಗಿರಬೇಕು, ಮೊದಲು ಮೊಂಡ ವಿಶ್ವವಿದ್ಯಾಲಯಗಳನ್ನು ನಾಲ್ಕು ವರ್ಷ ಮುಚ್ಚಿ, ಸುಬ್ರಮಣಿಯನ್ ಸ್ವಾಮಿ ಹಾಗೆ ಹೇಳುತ್ತಿದ್ದಾರೆ. ಪರದೇಶದಲ್ಲಿ ಸ್ವದೇಶವನ್ನು ಹಳಿಯುವರನ್ನು ಗಡೀಪಾರು ಮಾಡಿ.

  ಪೋಟಾಕ್ಕಿಂತ ಹೆಚ್ಚು ಉಗ್ರ ಕಾಯಿದೆ ಬೇಕು! ರಾಯರೇ! ಕಾಶ್ಮೀರವನ್ನು ದಾರಿಗೆ ತಂದವರಿಗೆ ಕರ್ನಾಟಕ ದೊಡ್ಡದೇನಲ್ಲ. ಆಂಧ್ರ, ತೆಲಂಗಾಣಗಳೂ! ಒಬ್ಬ ರೆಡ್ಡಿ ಕ್ರೖೆಸ್ತ, ಆದರೆ ಹಿಂದೂವಾಗಿ ‘ಘರ್​ವಾಪ್ಸಿ’ ಆಗಿಯೂ ಕ್ರೖೆಸ್ತ ಹಿತಾಸಕ್ತ! ಬಯಲಾಗದೇ ಉಳಿದ ಗೋಮುಖ ವ್ಯಾಘ್ರಗಳನ್ನು ನಾವು ಹೇಗೆ ನಡೆಸಿಕೊಳ್ಳಬೇಕು? ಸಜ್ಜನಿಕೆಗೆ ್ಚಛಛಿ ಬೇಡವೆನಿರಯ್ಯ? ಹಿಂದೂ ಮುಸ್ಲಿಂ, ಕ್ರೖೆಸ್ತ ಯಾರೂ ಸರಿ.

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts