More

    ಒಂದು ಸಾವಿರ ಕರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ: ಡಾ.ಗಿರಿಧರ್ ಕಜೆ

    ಶಿವಮೊಗ್ಗ: ಒಂದು ಸಾವಿರ ಕರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮೂರ್ನಾಲ್ಕು ದಿನದಲ್ಲಿ ಅನುಮತಿ ಸಿಗುವ ಸಾಧ್ಯತೆ ಇದೆ ಎಂದು ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಹೇಳಿದರು.

    ನಗರದಲ್ಲಿ ಬುಧವಾರ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಈಗಾಗಲೇ 10 ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ ನೀಡಿ ಯಶಸ್ವಿಯಾಗಿದ್ದೇವೆ. ಮಧುಮೇಹ, ಟಿಬಿ, ಅಧಿಕ ರಕ್ತದೊತ್ತಡ ಸೇರಿ ಹಲವು ಲಕ್ಷಣ ಹೊಂದಿದ್ದ 23ರಿಂದ 65 ವರ್ಷದೊಳಗಿನ 10 ಸೋಂಕಿತರು ಗುಣಮುಖವಾಗಿದ್ದಾರೆ. ಇದು ಪ್ರಾಥಮಿಕ ಯಶಸ್ಸು ಅಷ್ಟೆ. ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಚಿಕಿತ್ಸೆಯನ್ನು ಎದುರು ನೋಡುತ್ತಿದ್ದೇವೆ ಎಂದರು.

    ಇದನ್ನೂ ಓದಿರಿ ಕರೊನಾ ಚಿಕಿತ್ಸೆಗೆ 5 ಲಕ್ಷ ರೂ. ಬಿಲ್​, ಅಪೋಲೋ ಆಸ್ಪತ್ರೆ ವಿರುದ್ಧ ಕ್ರಮ; ಡಾ.ಕೆ. ಸುಧಾಕರ್

    ಹೊರ ರಾಜ್ಯ ಅಥವಾ ಜಿಲ್ಲೆಗಳಿಂದ ಬಂದವರಿಗಿಂತ ಪ್ರಾಥಮಿಕ ಸಂಪರ್ಕದಿಂದ ವೇಗವಾಗಿ ಹರಡುತ್ತಿರುವ ಸೋಂಕನ್ನು ನಿಯಂತ್ರಿಸಬೇಕಿದೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ಸ್ಯಾಂಪಲ್ಸ್​ಗೆ ಒಂದು ಸಾವಿರ ಕರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆ: ಡಾ.ಗಿರಿಧರ್ ಕಜೆಬೇಡಿಕೆ ಇಟ್ಟಿದ್ದೇವೆ. ಎಷ್ಟೇ ಸೋಂಕಿತರಿದ್ದರೂ ಪ್ರಯೋಗಕ್ಕೆ ಸಿದ್ಧರಿದ್ದೇವೆ. ಜತೆಗೆ ತಾವು ಸಿದ್ಧಪಡಿಸುವ ಔಷಧದ ಹಕ್ಕನ್ನು ಸರ್ಕಾರಕ್ಕೆ ಉಚಿತವಾಗಿ ಹಸ್ತಾಂತರಿಸಲು ಸಿದ್ಧನಿದ್ದೇನೆ ಎಂದು ಗಿರಿಧರ್​ ಕಜೆ ಹೇಳಿದರು.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಸಚಿವ ಕೆ.ಎಸ್​.ಈಶ್ವರಪ್ಪ ಮಾತನಾಡಿ, ಕರೊನಾ ಸೋಂಕಿತರಿಗೆ ಆಯುರ್ವೇದ ತಜ್ಞ ಡಾ. ಗಿರಿಧರ್​ ಕಜೆ ಅವರು ಸಂಶೋಧಿಸಿದ ಔಷಧ ಕೊಡಿಸುವ ಬಗ್ಗೆ ಪ್ರಯತ್ನಿಸಲಾಗುವುದು. ಈ ಕುರಿತು ಸಿಎಂ ಬಿ.ಎಸ್​.ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲು ಅವರೊಂದಿಗೆ ಚರ್ಚಿಸುವೆ ಎಂದರು.

    ರಾತ್ರಿಯಿಡೀ ಪರದಾಡಿದ ನಟಿ ಸುಧಾರಾಣಿ, ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ; ಡಾ.ಕೆ. ಸುಧಾಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts