More

    ಚಿಮೂ ಹೆಸರಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಕೊಟ್ಟೂರುಸ್ವಾಮಿ ಮಠದ ಜಗದ್ಗುರು ಡಾ.ಸಂಗನಬಸವ ಸ್ವಾಮೀಜಿ ಹೇಳಿಕೆ

    ಹೊಸಪೇಟೆ: ಕನ್ನಡ ಮಾಧ್ಯಮ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಡಾ.ಚಿದಾನಂದ ಮೂರ್ತಿ ಹೆಸರಲ್ಲಿ ಎರಡರಿಂದ ಐದು ಸಾವಿರ ರೂ.ವರೆಗೆ ಪ್ರೋತ್ಸಾಹಧನ ವಿತರಿಸಲಾಗುವುದು ಎಂದು ಕೊಟ್ಟೂರುಸ್ವಾಮಿ ಮಠದ ಜಗದ್ಗುರು ಶ್ರೀ ಡಾ.ಸಂಗನಬಸವ ಸ್ವಾಮೀಜಿ ಹೇಳಿದರು.

    ನಗರದ ಶ್ರೀ ಕೊಟ್ಟೂರುಸ್ವಾಮಿ ಮಠದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಡಾ.ಎಂ.ಚಿದಾನಂದ ಮೂರ್ತಿ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಚಿದಾನಂದ ಮೂರ್ತಿ ಅವರು ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಕನ್ನಡಿಗರು ಕನ್ನಡ ಭಾಷಾಭಿಮಾನ ಬೆಳೆಸಿಕೊಂಡು ಮಕ್ಕಳನ್ನು ಕನಿಷ್ಠ ನಾಲ್ಕನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೆ ಓದಿಸಲು ಸಂಕಲ್ಪ ಮಾಡಬೇಕು. ಅದರಿಂದ ಸಂಶೋಧಕ ಚಿದಾನಂದಮೂರ್ತಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ ಎಂದರು.

    ಕನ್ನಡ ವಿವಿ ಲಲಿತಕಲಾ ನಿಕಾಯದ ಡೀನ್ ಡಾ.ಕೆ.ರವೀಂದ್ರನಾಥ ಮಾತನಾಡಿ, ಸಂಶೋಧಕ ಚಿದಾನಂದ ಮೂರ್ತಿ ಅಗಲಿಕೆಯಿಂದ ಡಿ.ಎನ್.ನರಸಿಂಹ ರಾವ್ ಅವರ ಕೊನೆಯ ಕೊಂಡಿ ಕಳಚಿಹೋಗಿದೆ. ಅವರ ಸಂಶೋಧನೆ ಬಗ್ಗೆ ಭಿನ್ನಾಭಿಪ್ರಾಯ ಇರಲಿಲ್ಲ ಎಂದು ತಿಳಿಸಿದರು.

    ವಿಜಯನಗರ ಕಾಲೇಜಿನ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ, ಕನ್ನಡ ವಿವಿ ಕುಲಸಚಿವ ಡಾ.ಎ.ಸುಬ್ಬಣ್ಣ ರೈ ಮಾತನಾಡಿದರು. ಗರಗ ನಾಗಲಾಪುರ ಶ್ರೀ ಒಪ್ಪತ್ತೇಶ್ವರ ಮಠದ ಶ್ರುೀ ಮರಿಮಹಾಂತ ಸ್ವಾಮೀಜಿ, ಹಾಲಕೆರೆ ಶ್ರೀ ಅನ್ನದಾನೇಶ್ವರ ಸಂಸ್ಥಾನಮಠದ ಉತ್ತರಾಧಿಕಾರಿ ಶ್ರೀ ಮುಪ್ಪಿನಬಸವಲಿಂಗ ದೇವರು, ಪರ್ವತ ದೇವರು, ನಾಗಿನಾಥ ದೇವರು, ವಿಜಯಪ್ರಭು ದೇವರು, ದರೂರು ಶ್ರೀ ಸಂಗನಬಸವವೇಶ್ವರ ವಿರಕ್ತಮಠದ ಕೊಟ್ಟೂರು ದೇಶಿಕರು ಇತರರಿದ್ದರು.

    ಹಂಪಿಯಲ್ಲಿ ಶೌಚಗೃಹ ನಿರ್ಮಾಣಕ್ಕೂ ಎಎಸ್‌ಐ ಅವಕಾಶ ನೀಡುತ್ತಿರಲಿಲ್ಲ. ಆದರೆ, ಮಠದ ಕೋರಿಕೆ ಮೇರೆಗೆ ಹಂಪಿ ಸಂಸ್ಕೃತಿ ಬಿಂಬಿಸುವ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದೆ. ಕಾಮಗಾರಿ ಶೀಘ್ರ ಆರಂಭಿಸಲಾಗುವುದು. ಈ ಕಟ್ಟಡದಲ್ಲಿ ಹಂಪಿಗೆ ಸಂಬಂಧಿಸಿದ ಐತಿಹಾಸಿಕ ಮಾಹಿತಿಗಳು ಇರಲಿವೆ.
    | ಡಾ.ಸಂಗನಬಸವ ಸ್ವಾಮೀಜಿ ಕೊಟ್ಟೂರುಸ್ವಾಮಿ ಮಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts