More

    ವರದಕ್ಷಿಣೆಗಾಗಿ ಯುವತಿಗೆ ಬೆಂಕಿ ಹಚ್ಚಿದ ಪಾಪಿಗಳು; ನರಳುತ್ತಲೇ ಪ್ರಾಣಬಿಟ್ಟಳು ಆಕೆ….

    ತುಮಕೂರು: ವರದಕ್ಷಿಣೆ ತರಲಿಲ್ಲ ಎಂಬ ಕಾರಣಕ್ಕೆ ಯುವತಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ತೊಂಡೆಗೆರೆ ಬಳಿ ನಡೆದಿದೆ.

    ಮೃತ ಯುವತಿ ಗೌರಮ್ಮ ಕೊರಟಗೆರೆ ತಾಲೂಕಿನ ಎಲೆರಾಂಪುರದವರು. ತೊಂಡೆಗೆರೆ ಗ್ರಾಮದ ಕುಮಾರ್​ ಎಂಬುವರ ಜತೆಗೆ ವಿವಾಹವಾಗಿತ್ತು. ವರದಕ್ಷಿಣೆಗಾಗಿ ಅವರನ್ನು ಪೀಡಿಸಲಾಗುತ್ತಿತ್ತು. ಆದರೆ ನಿನ್ನೆ ಮಧ್ಯಾಹ್ನ ಪಾಪಿಗಳು ಅವಳಿಗೆ ಬೆಂಕಿ ಇಟ್ಟು ಹತ್ಯೆ ಮಾಡಿದ್ದಾರೆ.

    ಗೌರಮ್ಮನವರ ಮೃತದೇಹ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿದೆ. ಆಕೆ ಸಾಯುವುದಕ್ಕೂ ಮೊದಲು ಪೊಲೀಸರು ಹೇಳಿಕೆಯನ್ನು ಪಡೆದಿದ್ದು, ತನಿಖೆ ಪ್ರಾರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪ್ರತಿದಿನ 10 ಸಾವಿರ ಆಹಾರ್​ ಕಿಟ್​ ವಿತರಿಸುತ್ತಿದ್ದೇನೆ ಎಂದಿದ್ರು ರೇಣುಕಾಚಾರ್ಯ; ಆದ್ರೆ ಕೋಪಗೊಂಡ ಮಾಜಿ ಶಾಸಕ ಮಾಡಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts