More

    ಅ. 25ರ ಭಾಗಶಃ ಸೂರ್ಯ ಗ್ರಹಣದ ಸಮಯದಲ್ಲಿ ಏನು ಮಾಡ್ಬೇಕು? ಏನು ಮಾಡ್ಬಾರ್ದು? ಇಲ್ಲಿದೆ ಮಾಹಿತಿ…

    ನವದೆಹಲಿ: ದೀಪಾವಳಿ ಹಬ್ಬದ ನಡುವೆಯೇ ಮಂಗಳವಾರ (ಅ.25) ಭಾಗಶಃ ಸೂರ್ಯಗ್ರಹಣ ಸಂಭವಿಸಲಿದೆ. ಈ ಗ್ರಹಣವು ಭಾರತದ ಹೆಚ್ಚಿನ ನಗರಗಳಲ್ಲಿ ಗೋಚರಿಸುತ್ತದೆ. ಈ ವರ್ಷದ ಎರಡನೇ ಮತ್ತು ಕೊನೆಯ ಸೂರ್ಯ ಗ್ರಹಣ ಇದಾಗಿದೆ. ಯುರೋಪ್, ಈಶಾನ್ಯ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾದಾದ್ಯಂತ ಗ್ರಹಣ ಸಂಪೂರ್ಣ ಗೋಚರಿಸಲಿದೆ. ಭಾರತದಲ್ಲಿ ನವದೆಹಲಿ, ಬೆಂಗಳೂರು, ಕೋಲ್ಕತ್ತ, ಚೆನ್ನೈ, ಉಜ್ಜಯಿನಿ, ವಾರಣಾಸಿ ಮತ್ತು ಮಥುರಾ ನಗರಗಳಲ್ಲಿ ಭಾಗಶಃ ಗ್ರಹಣ ಹೆಚ್ಚಾಗಿ ಗೋಚರಿಸಲಿದೆ.

    ಪ್ರಾಚೀನ ಕಾಲದಿಂದಲೂ ಗ್ರಹಣದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂಬುದನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಭಾರತದಲ್ಲಿ ಅ.25ರಂದು ಸಂಜೆ 4.20 ರಿಂದ 6.30ರವರೆಗೂ ಗ್ರಹಣ ಸಂಭವಿಸಲಿದ್ದು, ಹಿಂದು ನಂಬಿಕೆಗಳ ಪ್ರಕಾರ ಸೂರ್ಯಗ್ರಹಣದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಎಂಬುದರ ಪಟ್ಟಿ ಈ ಕೆಳಕಂಡಂತಿದೆ.

    ಏನು ಮಾಡಬೇಕು?
    1. ಸೂರ್ಯ ಗ್ರಹಣದ ಸಮಯದಲ್ಲಿ ಶಿವನ ಮಂತ್ರಗಳನ್ನು ಪಠಿಸುವುದು ಒಳ್ಳೆಯದು
    2. ಸೂರ್ಯ ಗ್ರಹಣ ಮುಗಿದ ಬಳಿಕ ಸ್ನಾನ ಮಾಡಬೇಕು
    3. ಸೂರ್ಯ ಗ್ರಹಣ ಪೂರ್ತಿಯಾದ ಬಳಿಕ ಇಡೀ ಮನೆಯನ್ನು ಶುಚಿಗೊಳಿಸಬೇಕು
    4. ಗ್ರಹವನ್ನು ಸೂತಕದ ಅವಧಿ ಎಂದು ಪರಿಗಣಿಸಲಾಗಿದ್ದು, ಈ ಸಮಯದಲ್ಲಿ ಗರ್ಭಿಣಿಯರು ಎಲ್ಲಿಯೂ ಹೋಗದೇ ಮನೆಯೊಳಗೆ ಉಳಿಯಬೇಕು
    5. ಸೂರ್ಯ ಗ್ರಹಣ ಪ್ರಾರಂಭವಾಗುವ ಮೊದಲು ಜನರು ಗರಿಕೆ ಅಥವಾ ತುಳಸಿ ಎಲೆಗಳನ್ನು ನೀರಿನಲ್ಲಿ ಮತ್ತು ಎಲ್ಲಾ ಆಹಾರಗಳಲ್ಲಿ ಹಾಕಬೇಕು.

    ಏನು ಮಾಡಬಾರದು?
    1. ಯಾವುದೇ ರಕ್ಷಣಾ ಸಾಧನವಿಲ್ಲದೆ ಸೂರ್ಯನನ್ನು ನೇರವಾಗಿ ಅಥವಾ ಬರಿಗಣ್ಣಿನಿಂದ ನೋಡಬಾರದು
    2. ಸೂರ್ಯ ಗ್ರಹಣದ ಅವಧಿಯಲ್ಲಿ ಅಡುಗೆ ಮತ್ತು ಊಟ ಮಾಡಬಾರದು
    3. ಸೂರ್ಯ ಗ್ರಹಣದ ಅವಧಿಯಲ್ಲಿ ಯಾವುದೇ ಹರಿತವಾದ ವಸ್ತುಗಳನ್ನು ಬಳಸಬೇಡಿ
    4. ಸೂರ್ಯ ಗ್ರಹಣ ಕಾಲದಲ್ಲಿ ಮಲಗುವುದು ಒಳ್ಳೆಯದಲ್ಲ

    ಭಕ್ತರಿಗೆ ದರ್ಶನಾವಕಾಶ ಇರುವುದಿಲ್ಲ
    ಸೂರ್ಯ ಗ್ರಹಣ ಸಂಭವಿಸುವ ದಿನವಾದ ಅ.25ರಂದು ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ಸೇವೆಗಳನ್ನು ಬಂದ್ ಮಾಡಲಾಗಿದ್ದು, ಭಕ್ತರಿಗೆ ದರ್ಶನಾವಕಾಶ ಇರುವುದಿಲ್ಲ. ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ 25ರ ಮಧ್ಯಾಹ್ನ 2.30ರಿಂದ ರಾತ್ರಿ 7.30ರವರೆಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಯಾವುದೇ ಸೇವೆ ನಡೆಯುವುದಿಲ್ಲ. ಭೋಜನ ಪ್ರಸಾದವೂ ಇರುವುದಿಲ್ಲ. 26ರ ಬೆಳಗ್ಗೆ 9 ಗಂಟೆ ನಂತರ ದೇವರ ದರ್ಶನ, ಸೇವೆಗಳು ಆರಂಭಗೊಳ್ಳಲಿವೆ. ಉಡುಪಿ ಶ್ರೀಕೃಷ್ಣಮಠದಲ್ಲಿ 25ರಂದು ಸೇವೆ ಹಾಗೂ ಭೋಜನ ವ್ಯವಸ್ಥೆ ಇರುವುದಿಲ್ಲ. ಭಕ್ತರು ದೇವರ ದರ್ಶನ ಮಾಡಲು ಯಾವುದೇ ನಿರ್ಬಂಧವಿಲ್ಲ.

    ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅಂದು ಮಧ್ಯಾಹ್ನದ ಪೂಜೆ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ನಂತರ ರಾತ್ರಿ 7.30ರವರೆಗೆ ದೇವರ ದರ್ಶನಕ್ಕೆ ಅವಕಾಶವಿದೆ. ಯಾವುದೇ ಸೇವೆಗಳು ಇರುವುದಿಲ್ಲ. ಗ್ರಹಣ ಮೋಕ್ಷ ಬಳಿಕ ರಾತ್ರಿ 7.30ರ ನಂತರ ಮಹಾಪೂಜೆ ನಡೆಯಲಿದೆ. ಹಾಸನದ ಹಾಸನಾಂಬೆ ದೇವಿ ದರ್ಶನ ಇರುವುದಿಲ್ಲ, ಬೇಲೂರು ಚನ್ನಕೇಶವ ದೇವಸ್ಥಾನವನ್ನು ಮುಚ್ಚಲಾಗುತ್ತದೆ.

    ಮೇಲುಕೋಟೆ ಚಲುವನಾರಾಯಣಸ್ವಾಮಿ, ಶ್ರೀರಂಗಪಟ್ಟಣದ ನಿಮಿಷಾಂಬ ದೇಗುಲವನ್ನು ಸೂರ್ಯಗ್ರಹಣದ ವೇಳೆ ಮುಚ್ಚಲಾಗುತ್ತದೆ. ಮಂತ್ರಾಲಯದಲ್ಲಿ ದರ್ಶನಕ್ಕೆ ಅವಕಾಶವಿದೆ. ಆದರೆ, ಪೂಜೆ ನಡೆಯುವುದಿಲ್ಲ. ಹೊರನಾಡು ಅನ್ನಪೂರ್ಣೆಶ್ವರಿ ದೇವಸ್ಥಾನಕ್ಕೆ ಪ್ರವೇಶ ಇದ್ದು, ಪ್ರಸಾದ ಇರುವುದಿಲ್ಲ. ಸಿಗಂದೂರೇಶ್ವರಿ ದೇವಸ್ಥಾನದಲ್ಲಿ ಭಕ್ತರಿಗೆ ಪ್ರವೇಶ ಇರುವುದಿಲ್ಲ.

    ಏಷ್ಯಾಕಪ್​ ಟೂರ್ನಿಗೆ ಪಾಕಿಸ್ತಾನಕ್ಕೆ ಹೋಗ್ತೀರಾ? ರೋಹಿತ್​ ಶರ್ಮ ಕೊಟ್ಟ ಉತ್ತರ ಹೀಗಿತ್ತು…

    ರೋಜ್​ಗಾರ್​ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ: 75 ಸಾವಿರ ಮಂದಿಗೆ ನೇಮಕಾತಿ ಪತ್ರ ವಿತರಣೆ

    ಮಡಿಕೇರಿಯಲ್ಲಿ ಚಿತ್ರನಟ ಚೇತನ್​ ವಿರುದ್ಧ ದೂರು ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts