More

    ವಸತಿ ಶಾಲೆ ಘಟನೆ ಬಗ್ಗೆ ಆತಂಕ ಬೇಡ, ಮಕ್ಕಳಲ್ಲಿ ವಿಶ್ವಾಸ ಮೂಡಿಸಲು ಸಹಕರಿಸಿ

    ಕಡೂರು: ವಸತಿ ಶಾಲೆಯಲ್ಲಿ ನಡೆದ ಘಟನೆ ಬಗ್ಗೆ ಪಾಲಕರು ವಿಚಲಿತರಾಗಿ ಆತಂಕಪಡುವ ಅವಶ್ಯಕತೆ ಇಲ್ಲ, ಶಾಲೆ ಮಕ್ಕಳಲ್ಲಿ ವಿಶ್ವಾಸ ಮೂಡಿಸಲು ಪಾಲಕರು ಸಹಕರಿಸಬೇಕಿದೆ ಎಂದು ಬಿಸಿಎಂ ಇಲಾಖೆ ಉಪ ನಿರ್ದೇಶಕ ವೈ. ಸೋಮಶೇಖರ್ ಹೇಳಿದರು.
    ತಾಲೂಕಿನ ಅಂಚೆಚೋಮನಹಳ್ಳಿಯ ಕುಪ್ಪಾಳು ಮೂರಾರ್ಜಿ ವಸತಿ ಶಾಲೆಯಲ್ಲಿ ಶನಿವಾರ ನಡೆದ ಪಾಲಕರ ಸಭೆಯಲ್ಲಿ ಮಾತನಾಡಿ, ಇಂತಹ ಅಹಿತಕರ ಘಟನೆಗಳಿಂದ ಪಾಲಕರಲ್ಲಿ ಆಕ್ರೋಶ ಮೂಡುವುದು ಸಹಜ. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ಮೇಲೆ ಪಾರದರ್ಶಕವಾಗಿ ಕಾನೂನು ಕ್ರಮವಾಗಲಿದೆ ರಾಜಿಯಾಗುವ ಪ್ರಶ್ನೆ ಉದ್ಬವಿಸುವುದಿಲ್ಲ. ಪಾಲಕರ ಪ್ರತಿಯೊಂದು ಸಲಹೆಗಳನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗುತ್ತದೆ ಎಂದರು.
    ಈ ಶಾಲೆಯ ಪ್ರಾಚಾರ್ಯರನ್ನು ವರ್ಗಾವಣೆ ಮಾಡಲಾಗಿದೆ. ಡಿ ಗ್ರೂಪ್ ನೌಕರರನ್ನೂ ಬಿಡುಗಡೆಗೊಳಿಸಲಾಗಿದೆ. ಇಲ್ಲಿ ವ್ಯಕ್ತವಾದ ಕೊರತೆಗಳನ್ನು ಪರಿಹರಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಪಾಲಕರು ವಿದ್ಯಾರ್ಥಿಗಳ ಜತೆ ಸಂಪರ್ಕದಲ್ಲಿರುವ ಬಗ್ಗೆ ಸೂಚನೆ ನೀಡಲಾಗಿದೆ. ಇಲ್ಲಿನ ಪ್ರಾಚಾರ್ಯರ ಕಾರ್ಯವೈಖರಿ ಬಗ್ಗೆ ಹಾಗೂ ಶಾಲೆ ಸಮಗ್ರ ವರದಿಯೊಂದಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ. ಮುಂದಿನ ಕ್ರಮವನ್ನು ಹಿರಿಯ ಅಧಿಕಾರಿಗಳ ಹಂತದಲ್ಲಿ ಇಲಾಖೆ ವಿಚಾರಣೆ ನಡೆಸಿ ಕೈಗೊಳ್ಳುತ್ತಾರೆ ಎಂದರು.
    ವಸತಿ ಶಿಕ್ಷಣ ಸಂಸ್ಥೆ ಜಿಲ್ಲಾ ಸಮನ್ವಯಾಧಿಕಾರಿ ನಾಗೇಶ್, ಮಲ್ಲೇನಹಳ್ಳಿ ಹಾಗೂ ಯಗಟಿ ವಸತಿ ಶಾಲೆ ಪ್ರಾಚಾರ್ಯರಾದ ಶಿವಕುಮಾರ್, ಗಂಗಾಧರ್‌ನಾಯ್ಕ, ಮೇಲ್ವಿಚಾರಕಿ ಗೀತಾಂಜಲಿ ಹಾಗೂ ಶಾಲೆ ಭೋದಕ ವರ್ಗದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts