More

  ಸತ್ಯವನ್ನೇ ಬರೆಯಿರಿ ಆದರೆ, ಸುಳ್ಳನ್ನು ಸತ್ಯವೆಂಬಂತೆ ತೋರಿಸಬೇಡಿ: ಪತ್ರಕರ್ತರಿಗೆ ರಜಿನಿಕಾಂತ್​ ಸಲಹೆ

  ಚೆನ್ನೈ: ಪತ್ರಿಕೋದ್ಯಮದ ತಟಸ್ಥ ನೀತಿಗೆ ಕರೆ ನೀಡಿದ ನಟ ಹಾಗೂ ರಾಜಕಾರಣಿ ಸೂಪರ್​ಸ್ಟಾರ್ ರಜಿನೀಕಾಂತ್​​, ಸತ್ಯವನ್ನು ವರದಿ ಮಾಡುವಂತೆ ಮಾಧ್ಯಮಗಳಿಗೆ ಸಲಹೆ ನೀಡಿದರು.

  ಮಂಗಳವಾರ ತಮಿಳು ಮ್ಯಾಗಜಿನ್​ ‘ತುಗ್ಲಕ್​’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದಶಕಗಳವರೆಗೆ ಮುದ್ರಣ ಮಾಡಿದ ಎಸ್​. ರಾಮಸ್ವಾಮಿಯಂತಹ ಪತ್ರಕರ್ತರು ದೇಶಕ್ಕೆ ಬೇಕಾಗಿದ್ದಾರೆ ಎಂದರು.

  ರಾಜಕೀಯ ಮತ್ತು ಸಮಾಜವು ಕೆಟ್ಟ ಸ್ಥಿತಿಯಲ್ಲಿ ಮುನ್ನಡೆಯುತ್ತಿರುವ ಸಮಯವಾಗಿದೆ. ಇಂತಹ ಸನ್ನಿವೇಶದಲ್ಲಿ ಮಾಧ್ಯಮಗಳು ಜನರೆಡೆಗೆ ಬಹುದೊಡ್ಡ ಜವಾಬ್ದಾರಿಯನ್ನು ಹೊಂದಿದೆ. ಆದರೆ, ಕೆಲ ಮಾಧ್ಯಮಗಳು ರಾಜಕೀಯ ಪಕ್ಷಗಳಳೆಡೆಗೆ ಪಕ್ಷಪಾತ ಧೋರಣೆ ತೆಳೆದಿವೆ. ವಿಮರ್ಶಕರು ಮತ್ತು ಪತ್ರಕರ್ತರು ಸತ್ಯವನ್ನೇ ವರದಿ ಮಾಡಬೇಕು ಎಂದು ಆಗ್ರಹಿಸಿದರು.

  ಸತ್ಯ ಸುದ್ದಿಯನ್ನು ಹಾಲಿಗೂ ಸುಳ್ಳು ಸುದ್ದಿಯನ್ನು ನೀರಿಗೆ ಹೋಲಿಕೆ ಮಾಡಿ, ಒಂದು ವೇಳೆ ಎರಡೂ ಮಿಶ್ರಣವಾದರೆ ಎರಡರ ನಡುವಿನ ವ್ಯತ್ಯಾಸ ಕಂಡುಹಿಡಿಯುವಲ್ಲಿ ಜನರು ಸಮರ್ಥರಾಗುವುದಿಲ್ಲ. ಯಾವುದು ಹಾಲು? ಮತ್ತು ಯಾವುದು ನೀರು ಎಂದು ಪತ್ರಕರ್ತರು ಮಾತ್ರ ಹೇಳಬೇಕಾಗಿದೆ. ಸತ್ಯವನ್ನು ಬರೆಯಿರಿ. ಆದರೆ, ಸುಳ್ಳನ್ನು ಸತ್ಯವೆಂಬಂತೆ ತೋರಿಸಬೇಡಿ ಎಂದು ರಜಿನಿಕಾಂತ್​ ಹೇಳಿದರು. (ಏಜೆನ್ಸೀಸ್​)

  ಸಿನಿಮಾ

  ಲೈಫ್‌ಸ್ಟೈಲ್

  ಸಿನಿಮಾ

  Latest Posts