More

    ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗದಿರಲಿ ಬಡತನ

    ಕಡೂರು: ಮನೆಯಲ್ಲಿ ಎಷ್ಟೇ ಬಡತನವಿದ್ದರೂ ಮಕ್ಕಳಿಗೆ ಶಿಕ್ಷಣ ಕೊಡಿಸಲು ಪಾಲಕರು ಹಿಂದೇಟು ಹಾಕಬಾರದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

    ಪಟ್ಟಣದ ಲಕ್ಷ್ಮೀಶ ನಗರದಲ್ಲಿ 23.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಉರ್ದು ಶಾಲೆ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, 31 ಎಕರೆ ಪ್ರದೇಶದ ನಿವಾಸಿಗಳು ಮಕ್ಕಳ ವಿದ್ಯಾಬ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಶಿಕ್ಷಕರು ಸಹ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸುವ ರೀತಿ ಶಿಕ್ಷಣ ನೀಡಬೇಕು. ಇಲ್ಲಿಗೆ ಅಂಗನವಾಡಿ ಕೇಂದ್ರ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
    ಸರ್ಕಾರಿ ಉರ್ದು ಶಾಲೆ ಕಟ್ಟಡ ದುಸ್ಥಿತಿಯಲ್ಲಿತ್ತು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ನಿಟ್ಟಿನಲ್ಲಿ ಮೂಲ ಸೌಕರ್ಯ ಕಲ್ಪಿಸುವ ಕಾರ್ಯವಾಗಬೇಕಿದೆ. ಈ ಶಾಲೆಗೆ ಮತ್ತೊಂದು ಕೊಠಡಿ ಅಗತ್ಯವಿದೆ. ಶೀಘ್ರವೇ ಅದನ್ನೂ ಈಡೇರಿಸಲಾಗುವುದು ಎಂದರು.
    ಪಟ್ಟಣದ ಲಕ್ಷ್ಮೀಶನಗರದ ವ್ಯಾಪ್ತಿಯ 31 ಎಕರೆ ಪ್ರದೇಶದಲ್ಲಿ ಕೆಲ ಅಭಿವೃದ್ಧಿ ಕಾರ್ಯಗಳಾಗಬೇಕಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಈ ಪ್ರದೇಶ ಶೈಕ್ಷಣಿಕವಾಗಿ ಹಿಂದುಳಿದಿದೆ. ಇಲ್ಲಿನ ರಸ್ತೆಗಳನ್ನು ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕಿದೆ. ಯಾರಿಗೂ ತೊಂದರೆ ಆಗದಂತೆ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದರು.
    ಪುರಸಭೆ ಸದಸ್ಯ ಭಂಡಾರಿ ಶ್ರೀನಿವಾಸ್ ಮಾತನಾಡಿ, ಈ ಶಾಲೆಯಲ್ಲಿ ಕೂಲಿಕಾರ್ಮಿಕರ ಮಕ್ಕಳೇ ಹೆಚ್ಚಾಗಿ ಕಲಿಯುತ್ತಿದ್ದಾರೆ. ಇಲಾಖೆ ಅಧಿಕಾರಿಗಳು ಇಂತಹ ಶಾಲೆಗಳನ್ನು ಗುರುತಿಸಿ ಸೌಲಭ್ಯ ಒದಗಿಸಬೇಕಿದೆ. ಪುರಸಭೆಯ ಇತಿಮಿತಿಯಲ್ಲಿ ಅನುದಾನ ದೊರಕಿಸಲಾಗುವುದು. ಈ ಭಾಗದ ಮುಖ್ಯರಸ್ತೆಯ ಕಾಂಕ್ರಿಟೀಕರಣಕ್ಕೆ ಶಾಸಕರು ಒತ್ತು ನೀಡಬೇಕು ಎಂದು ಮನವಿ ಮಾಡಿದರು.
    ಬಿಇಒ ಆರ್.ಸಿದ್ದರಾಜುನಾಯ್ಕ, ಮುಖಂಡರಾದ ಮಂಜುನಾಥ್, ಅಣ್ಣಾದೊರೆ, ರಾಜೇಶ್, ಎಂ.ಬಿ.ಮಂಜುನಾಥ್, ಧನಪಾಲ್‌ನಾಯ್ಕ, ಟಿ.ಮೂರ್ತಿ, ಆನಂದಪ್ಪ, ಜಾವುದ್ ಸಾಹೇಬ್, ಜರೀನಾ ಸಾಬ್, ಕೆ.ಎಂ. ಬಾಬು, ಕೆ.ಎಂ.ಹರೀಶ್, ಮುಖ್ಯ ಶಿಕ್ಷಕಿ ಪರ್ವೀನ ಫಾತೀಮಾ, ಬಸವರಾಜ್, ಮುನಾವರ್ ಪಾಷಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts