More

    ಪ್ರಧಾನಿಯೇ ನನ್ನನ್ನು ಒಂದು ಗಂಟೆ ಕಾಯಿಸಿದ್ದು, ನನ್ನ ಜೊತೆ ಏಕೆ ನಿಮ್ಮ ಜಗಳ: ಮಮತಾ ಬ್ಯಾನರ್ಜಿ ಪ್ರಶ್ನೆ

    ಕೊಲ್ಕತ್ತ: ಯಾಸ್ ಚಂಡಮಾರುತದಿಂದಾದ ಹಾನಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಕೊಲ್ಕತ್ತದಲ್ಲಿ ನಡೆಸಿದ ಸಭೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನಡೆದುಕೊಂಡ ರೀತಿಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಮಮತಾ ಅವರು ಪ್ರಧಾನಿ ಸಭೆಯನ್ನು ರಾಜಕೀಯಗೊಳಿಸಲು ನೋಡಿದ್ದಾರೆ ಎಂದು ಆರೋಪಿಸಲಾಗಿದೆ.

    ಈ ಬಗ್ಗೆ ಮಾತನಾಡಿರುವ ಮಮತಾ ಬ್ಯಾನರ್ಜಿ ಅವರು, ಮಾಧ್ಯಮಗಳು ಈ ವಿಷಯದಲ್ಲಿ ಪಕ್ಷತಾತಿತನದಿಂದ ನಡೆದುಕೊಂಡಿವೆ ಎಂದು ಹರಿಹಾಯ್ದಿದ್ದಾರೆ. ನನಗೆ ಅವಮಾನ ಮಾಡಲು ಬರಬೇಡಿ. ನಾನು ಬಂಗಾಳದಲ್ಲಿ ದೊಡ್ಡ ವಿಜಯ ಸಾಧಿಸಿದ್ದೇನೆ. ನೀವೇಕೆ (ಬಿಜೆಪಿ) ಹೀಗೆ ನಡೆದುಕೊಳ್ಳುತ್ತಿದ್ದೀರಾ? ನೀವು ಏನೆಲ್ಲಾ ಮಾಡಿದರೂ ಬಂಗಾಳ ಗೆಲ್ಲಲು ಆಗಲಿಲ್ಲ. ನನ್ನ ಜೊತೆ ಏಕೆ ನಿಮ್ಮ ಜಗಳ ಎಂದು ಪ್ರಶ್ನಿಸಿದ್ದಾರೆ.

    ನಾನು ಸಭೆಗೆ ಸಮಯಕ್ಕೆ ಸರಿಯಾಗಿ ಹೋಗಿದ್ದೆ. ಆದರೆ, ಅದಾಗಲೇ ಮೋದಿ ಅವರು ಸೌಜನ್ಯಕ್ಕೂ ನನಗೆ ಎದುರು ನೋಡದೇ, ತಮ್ಮ ಅಧಿಕಾರಿಗಳು ಹಾಗೂ ರಾಜ್ಯಪಾಲರೊಡನೆ ಸಭೆ ಆರಂಭಿಸಿದ್ದರು. ನಾನು ಹಾಗೂ ನಮ್ಮ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಸುಮಾರು ಒಂದು ಗಂಟೆ ಹೊರಗೆ ಕಾಯ್ದು ಕುಳಿತೇವು. ಬೇಕು ಅಂತಲೇ ಪ್ರಧಾನಿ ಹೀಗೆ ಮಾಡಿದ್ದು ಎಂದು ಮಮತಾ ಆರೋಪಿಸಿದ್ದಾರೆ.

    ಇದನ್ನೂ ಓದಿ: ಆಗಷ್ಟೇ ಹುಟ್ಟಿದ ಮಗುವಿಗೂ ಕರೊನಾ ಸೋಂಕು!; ಆದರೆ ಅಮ್ಮ ಕೋವಿಡ್ ನೆಗೆಟಿವ್!

    ನಿನ್ನೆ ಪ್ರಧಾನಿ ನಡೆಸಿದ ಸಭೆಗೆ ಮಮತಾ ಅವರು ಒಂದು ಗಂಟೆ ವಿಳಂಬವಾಗಿ ಬಂದಿದ್ದರು. ಅಲ್ಲದೇ ಅವರನ್ನು ವಿಮಾನ ನಿಲ್ದಾಣಕ್ಕೆ ಸ್ವಾಗತಿಸಲು ತೆರಳದೇ ಶಿಷ್ಟಾಚಾರ ಪಾಲಿಸಿರಲಿಲ್ಲ. ಬಳಿಕ ಸಭೆಯಲ್ಲಿ ಕೇವಲ 15 ನಿಮಿಷ ಪಾಲ್ಗೊಂಡು ಸಭೆ ಮಧ್ಯೆ ತೆರಳಿದ್ದರು. ಇದರಿಂದ ಪ್ರಧಾನಿ ಮೋದಿ ಅವರಿಗೆ ತೀವ್ರ ಇರಿಸು ಮುರಿಸು ಉಂಟಾಗಿತ್ತು. ಅಲ್ಲದೇ ಮಮತಾ ಅವರ ಈ ನಡೆ ಬಿಜೆಪಿ ಟಿಎಂಸಿ ರಾಜಕೀಯ ಕೆಸರೆರಚಾಟಕ್ಕೆ ಸಾಕ್ಷಿಯಾಗಿದೆ.

    ಬಂಗಾಳ ಮಾಜಿ ಸಿಎಂ ಬುದ್ಧದೇಬ್ ಭಟ್ಟಾಚಾರ್ಜಿಗೆ ಕರೊನಾ ಚಿಕಿತ್ಸೆ

    ಮತ್ತೆ ಏರಿತು ಪೆಟ್ರೋಲ್-ಡೀಸೆಲ್ ದರ : ಈ ಮಹಾನಗರದಲ್ಲಿ ದಾಟಿತು ಶತಕ !

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts