More

    ಪಾಲಕ್​ ಮತ್ತು ಪನ್ನೀರ್​ ಜೊತೆಗೆ ತಿನ್ನೋ ಹಾಗಿಲ್ಲ ಅಂತೆ..!

    ನವದೆಹಲಿ: ಪಾಲಕ್ ಪನ್ನೀರ್, ಚಳಿಗಾಲದಲ್ಲಿ ಜನರು ಹೆಚ್ಚಾಗಿ ಇಷ್ಟಪಡುವ ರುಚಿಯಾದ ಗ್ರೇವಿ. ಸಾಮಾನ್ಯ ಊಟದಿಂದ ಹಿಡಿದು ಪಾರ್ಟಿಯಲ್ಲೂ ಇದು ಸ್ಥಾನ ಪಡೆದಿದೆ. ಅಷ್ಟು ಜನಪ್ರಿಯ ಈ ಭಕ್ಷ್ಯ. ಇದು ಕಾಣಿಸಿಕೊಳ್ಳದ ಮೆನು ಇಲ್ಲ. ಪಾಲಕ್​ನಲ್ಲಿ ಕಬ್ಬಿಣ, ಪೊಟ್ಯಾಸಿಯಮ್, ಪ್ರೋಟೀನ್, ಫೈಬರ್ ಮತ್ತು ವಿವಿಧ ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿರುವುದರಿಂದ ಇದನ್ನು ಪೌಷ್ಟಿಕ ಆಹಾರವೆಂದು ಪರಿಗಣಿಸಲಾಗಿದೆ. ಪನ್ನೀರ್ ಕೂಡ ಪ್ರೋಟೀನ್, ಕ್ಯಾಲ್ಸಿಯಂನ ಖಜಾನೆ. ಇದು ಮಧುಮೇಹ ಇರುವವರಿಗೆ ಒಳ್ಳೆಯದು. ಪಾಲಕ್ ಮತ್ತು ಪನ್ನೀರ್ ಎರಡೂ ನಿಮ್ಮ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು. ಇವೆರಡೂ ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ.

    ಆದಾಗ್ಯೂ ಪೌಷ್ಟಿಕತಜ್ಞರ ಪ್ರಕಾರ, ಪಾಲಕ್ ಮತ್ತು ಪನ್ನೀರ್ ಒಟ್ಟಿಗೆ ತಿನ್ನಬಾರದಂತೆ! ಪೌಷ್ಟಿಕತೆ ತಜ್ಞ ನ್ಮಾಮಿ ಅಗರ್ವಾಲ್ ತಮ್ಮ ಇತ್ತೀಚಿನ ಇನ್​ಸ್ಟಾಗ್ರಾಂ ಪೋಸ್ಟ್‌ನಲ್ಲಿ ಪಾಲಕ್ ಮತ್ತು ಪನೀರನ್ನು ಯಾಕೆ ಒಟ್ಟಿಗೆ ತಿನ್ನಬಾರದು ಎಂದು ವಿವರಿಸಿದ್ದಾರೆ. ‘ಕೆಲವು ಆಹಾರಗಳು ಪ್ರತ್ಯೇಕವಾಗಿ ಆರೋಗ್ಯಕರವಾಗಿರುತ್ತವೆ. ಆದರೆ ಅವನ್ನು ಒಟ್ಟಿಗೆ ತಿಂದಾಗ ಪೌಷ್ಟಿಕಾಂಶದ ಪ್ರಯೋಜನವನ್ನು ಕಡಿಮೆ ಮಾಡಬಹುದು. ಪಾಲಕ್‌ನಲ್ಲಿ ಕಬ್ಬಿಣ ಮತ್ತು ಪನೀರ್‌ನ ಕ್ಯಾಲ್ಸಿಯಂ ಹೆಚ್ಚಾಗಿ ಕಂಡು ಬರುತ್ತದೆ. ಇವನ್ನು ಜೊತೆಯಾಗಿ ಸೇವಿಸಿದರೆ ಪರಸ್ಪರ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುವುದಿಲ್ಲ’ ಎಂದು ನ್ಮಾಮಿ ವಿವರಿಸಿದ್ದಾರೆ.

    ಪಾಲಾಕ್ ಮತ್ತು ಪನೀರ್ ಏಕೆ ಒಟ್ಟಿಗೆ ತಿನ್ನಬಾರದು?

    ಪಾಲಕ್​ ಪನ್ನೀರ್​ ಸರಿಯಾದ ಕಾಂಬಿನೇಶನ್ ಅಲ್ಲ. ಏಕೆ? ಆರೋಗ್ಯಕರವಾಗಿ ತಿನ್ನುವುದು ಎಂದರೆ ಸರಿಯಾದ ಆಹಾರ ಪದಾರ್ಥಗಳನ್ನು ತಿನ್ನುವುದು ಎಂದರ್ಥವಲ್ಲ. ಸರಿಯಾದ ಆಹಾರ ಪದಾರ್ಥಗಳನ್ನು ಸರಿಯಾದ ಕಾಂಬಿನೇಷನ್​ನಲ್ಲಿ ತಿನ್ನಬೇಕು. ಒಟ್ಟಿಗೆ ತಿಂದಾಗ ಒಂದಕ್ಕೊಂದು ವಿರುದ್ಧವಾಗಿ ಕೆಲವು ಪೋಷಕಾಂಶಗಳನ್ನು ಶರೀರ ಹೀರಿಕೊಳ್ಳುವುದಕ್ಕೆ ಕಷ್ಟ ಆಗುತ್ತದೆ. ಅಂತಹ ಒಂದು ಕಾಂಬಿನೇಷನ್​ ಈ ಕಬ್ಬಿಣ ಮತ್ತು ಕ್ಯಾಲ್ಸಿಯಂ. ಪಾಲಕ್ ಸೊಪ್ಪಿನಲ್ಲಿ ಕಬ್ಬಿಣ ಮತ್ತು ಪನ್ನೀರ್​ನಲ್ಲಿ ಕ್ಯಾಲ್ಷಿಯಂ ಸಮೃದ್ಧವಾಗಿದೆ. ಈ ಎರಡು ಆಹಾರ ಪದಾರ್ಥಗಳನ್ನು ಒಟ್ಟಿಗೆ ಸೇವಿಸಿದರೆ ಕ್ಯಾಲ್ಸಿಯಂ ಕಬ್ಬಿಣದ ಜೊತೆ ಸೇರಿ ಶರೀರದಲ್ಲಿ ಸೇರಿಕೊಳ್ಳುವುದಿಲ್ಲ. ಆದ್ದರಿಂದ, ನಾವು ಪಾಲಕ್​ ಅಥವಾ ಪನ್ನೀರ್​ನ ಲಾಭ ಪಡೆಯಬೇಕು ಎಂದಾದರೆ ಅವೆರಡನ್ನೂ ಬೇರೆ ಬೇರೆಯಾಗಗಿ ತಿನ್ನಬೇಕು.​

    ಆಯುರ್ವೇದ ಏನು ಹೇಳುತ್ತೆ?

    ಆಯುರ್ವೇದಲ್ಲಿ ವಿರುದ್ಧ ಆಹಾರದ ಪರಿಕಲ್ಪನೆ ಇದೆ. ಆಯುರ್ವೇದ ಬಾಳೆಹಣ್ಣು ಮತ್ತು ಹಾಲಿನಂತಹ ಕೆಲವು ಪದಾರ್ಥಗಳ ಸಂಯೋಜನೆಯನ್ನು ನಿಷೇಧಿಸುತ್ತದೆ. ಅವುಗಳನ್ನು ಒಟ್ಟಿಗೆ ಸೇವಿಸುವುದರಿಂದ ವಿಪಾಕ ಎಂಬ ಶಕ್ತಿಯನ್ನು ಬಿಡುಗಡೆ ಆಗಬಹುದು. ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಮೀನು ಮತ್ತು ಹಾಲು, ಜೇನುತುಪ್ಪ ಮತ್ತು ತುಪ್ಪವನ್ನು ಸಮಾನ ಪ್ರಮಾಣದಲ್ಲಿ ಸಂಯೋಜಿಸುವುದು, ಮೊಸರು ಮತ್ತು ಚೀಸ್ ಅನ್ನು ಸಹ ವಿರುದ್ಧ ಆಹಾರ ಎಂದು ಪರಿಗಣಿಸಲಾಗುತ್ತದೆ. ಪಾಲಕ್​ ಮತ್ತು ಪನ್ನೀರ್​ ಕೂಡ ಇದೇ ಸಾಲಿನಲ್ಲಿ ಸೇರುತ್ತದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts