More

    ಭಾರತದಲ್ಲಿ ಹೀಟ್​ ವೇವ್​ ಬರಲಿದೆಯಾ? ಹವಾಮಾನಕ್ಕೂ ಬ್ಯಾಂಕ್​ಗೂ ಏನಪ್ಪಾ ಸಂಬಂಧ?!

    ನವದೆಹಲಿ: ಕಳೆದ ಕೆಲವು ದಶಕಗಳಲ್ಲಿ ಭಾರತದಾದ್ಯಂತ ಸಾವಿರಾರು ಸಾವುಗಳಿಗೆ ಕಾರಣವಾದ ಹೀಟ್​ ವೇವ್​ ಆತಂಕಕಾರಿಯಾಗಿ ಹೆಚ್ಚಾಗುತ್ತಿದೆ. ಶೀಘ್ರದಲ್ಲೇ ದೇಶದಲ್ಲಿ ಮನುಷ್ಯನ ದೇಹ ಸಹಿಸಲಾಗದಷ್ಟು ಶಾಖ ಹೆಚ್ಚಾಗಲಿದೆ ಎಂದು ವಿಶ್ವ ಬ್ಯಾಂಕ್​ ಒಕ್ಕೂಟ ವರದಿ ಮಾಡಿದೆ. ಬ್ಯಾಂಕ್​ಗೂ ಹವಾಮಾನಕ್ಕೂ ಏನಪ್ಪಾ ಸಂಬಂಧ ಎಂಬ ಪ್ರಶ್ನೆ ಎದ್ದಿರಬಹುದು. ಅದಕ್ಕೆ ಉತ್ತರ ಇಲ್ಲಿದೆ .

    “ಭಾರತದ ಏರ್​ ಕಂಡೀಷನಿಂಗ್​ ವಲಯದಲ್ಲಿನ ಹೂಡಿಕೆಯ ಅವಕಾಶಗಳು” ಎಂಬ ಶೀರ್ಷಿಕೆಯ ವಿಶ್ವ ಬ್ಯಾಂಕ್ ವರದಿ ಪ್ರಕಾರ ದೇಶದಲ್ಲಿ ತಾಪಮಾನ ಹೆಚ್ಚಾಗಿದೆ. ಈ ಪರಿಸ್ಥಿತಿ ಇನ್ನೂ ದೀರ್ಘಕಾಲದವರೆಗೆ ಇರಲಿದೆ ಎಂದು ವರದಿ ಹೇಳಿದೆ.

    ‘2022ರ ಏಪ್ರಿಲ್​ನಲ್ಲಿ ಭಾರತದಲ್ಲಿ ಸೆಖೆ ವಿಪರರೀತವಾಗಿ ಹೆಚ್ಚಾಗಿತ್ತು. ನವದೆಹಲಿಯಲ್ಲಿ ತಾಪಮಾನ 46 ಡಿಗ್ರಿ ಸೆಲ್ಸಿಯಸ್​ಗೆ ಏರಿತ್ತು. ಮಾರ್ಚ್‌ ತಿಂಗಳಿನಲ್ಲಿ ಅತೀ ಹೆಚ್ಚು ತಾಪಮಾನ ದಾಖಲಾಗಿತ್ತು” ಎಂದು ವರದಿ ಹೇಳಿದೆ.

    ಕೇರಳ ಸರ್ಕಾರದ ಜೊತೆ ಸೇರಿ ವಿಶ್ವಬ್ಯಾಂಕ್ ಆಯೋಜಿಸಿರುವ ಎರಡು ದಿನಗಳ “ಭಾರತದ ಹವಾಮಾನ ಮತ್ತು ಅಭಿವೃದ್ಧಿ ಪಾಲುದಾರರ ಸಭೆ”ಯಲ್ಲಿ ಸಂಪೂರ್ಣ ವರದಿಯನ್ನು ಬಿಡುಗಡೆ ಮಾಡಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts