More

    ಬ್ಲ್ಯಾಕ್​ಮೇಲ್​ಗೆ ಬಗ್ಗಲ್ಲ; ಮಾತು ನಿಲ್ಲಿಸಿ, ಬೇಕಿದ್ರೆ ವರಿಷ್ಠರಿಗೆ ದೂರು ಕೊಡಿ..

    ಬೆಂಗಳೂರು: ‘ಸಚಿವ ಸ್ಥಾನ ಸಿಗದವರು ಇಲ್ಲಸಲ್ಲದ ಆರೋಪ ಮಾಡುವುದನ್ನು ನಿಲ್ಲಿಸಲಿ. ಬೇಕಿದ್ದರೆ ದೆಹಲಿಗೆ ಹೋಗಿ ವರಿಷ್ಠರಿಗೆ ದೂರು ಸಲ್ಲಿಸಿ, ನಿಮ್ಮನ್ನು ಯಾರೂ ತಡೆಯುವುದಿಲ್ಲ. ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ, ಬ್ಲಾ್ಯಕ್​ವೆುೕಲ್ ತಂತ್ರಕ್ಕೂ ಮಣಿಯುವುದಿಲ್ಲ’- ಇದು ಸಚಿವ ಸ್ಥಾನ ವಂಚಿತ ಅತೃಪ್ತ ಶಾಸಕರಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ನೀಡಿರುವ ತಿರುಗೇಟು.

    ಏಳು ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಿ 24 ತಾಸು ಕಳೆದರೂ ಆರೋಪ, ಟೀಕೆ-ಟಿಪ್ಪಣಿ ಮುಂದುವರಿಸಿರುವ ಅತೃಪ್ತರ ನಡೆಯಿಂದ ಅಸಮಾಧಾನಗೊಂಡಿರುವ ಯಡಿಯೂರಪ್ಪ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತ ಆಕ್ರೋಶ ಹೊರಹಾಕಿದರು. ‘ನಾನು ಯಾರನ್ನೂ ಕಡೆಗಣಿಸಿಲ್ಲ. ಇತಿಮಿತಿಯೊಳಗೆ ಸಚಿವ ಸಂಪುಟ ವಿಸ್ತರಣೆಯಾಗಿದೆ. ಸಚಿವ ಸ್ಥಾನ ಸಿಕ್ಕಿಲ್ಲವೆಂದು ಹಾದಿಬೀದಿಯಲ್ಲಿ ನಿಂತು ಮಾತನಾಡುವುದು ಸರಿಯಲ್ಲ. ನಿಮ್ಮಲ್ಲಿರುವುದು ಅತೃಪ್ತಿಯೋ ಅಥವಾ ಅಸಮಾಧಾನವೋ ಗೊತ್ತಿಲ್ಲ. ಮನಸ್ಸಿಗೆ ಬಂದಂತೆ ಆರೋಪ, ಹೇಳಿಕೆ ನೀಡಿ ಪಕ್ಷದ ಶಿಸ್ತು, ವರ್ಚಸ್ಸಿಗೆ ಧಕ್ಕೆ ತರಬಾರದು. ಏನಾದರೂ ದೂರುಗಳಿದ್ದರೆ ವರಿಷ್ಠರಿಗೆ ಸಲ್ಲಿಸಿ, ಅವರೇ ಎಲ್ಲವನ್ನು ನೋಡಿಕೊಳ್ಳುತ್ತಾರೆ’ ಎಂದು ಸಿಎಂ ಸವಾಲಿನ ಧ್ವನಿಯಲ್ಲಿ ಹೇಳಿದರು.

    ಆಶೀರ್ವಾದ ಇದೆ

    ‘ಅದೇನು ಸಿಡಿ, ಮತ್ತೇನಿದೆಯೋ ಅದನ್ನೂ ವರಿಷ್ಠರಿಗೆ ಕೊಡಿ. ಯಾವುದೇ ಬೆದರಿಕೆಗೆ ಬಗ್ಗುವುದಿಲ್ಲ, ಹಾದಿಬೀದಿ ಯಲ್ಲಿ ನಿಂತು ಮಾತನಾಡಿದರೆ ಕೆಲವರು ಸಚಿವ ಸ್ಥಾನ ಸಿಗುತ್ತದೆ ಅಂದು ಕೊಂಡಿದ್ದಾರೆ. ಅಂತಹವು ಏನೂ ನಡೆಯುವುದಿಲ್ಲ’ಎಂದು ಬಿಎಸ್​ವೈ ತಿರು ಗೇಟು ನೀಡಿದರು. ಸಚಿವ ಸ್ಥಾನ ಸಿಗದ ಶಾಸಕರು ದೆಹಲಿಗೆ ಹೋಗಿ ದೂರು ನೀಡಿದರೆ ಸರಿ-ತಪ್ಪನ್ನು ವರಿಷ್ಠರೇ ನಿರ್ಧರಿಸುತ್ತಾರೆ ಎಂದರು. ಕೇಂದ್ರ ನಾಯಕರ ಆಶೀರ್ವಾದ ನನ್ನ ಮೇಲಿದ್ದು, ಯಾರೂ ಏನನ್ನೂ ಮಾಡಿಕೊಳ್ಳಲಾಗದು. ಬಸನಗೌಡ ಪಾಟೀಲ್ ಅಂತಹವರು ಎಲ್ಲ ಪಕ್ಷದಲ್ಲೂ ಇರುತ್ತಾರೆ. ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಅವರು ಕಡ್ಡಿ ಮುರಿದಂತೆ ಹೇಳಿದರು.

    ಪುರುಸೊತ್ತಿಲ್ಲ: ಅತ್ತ ದಾವಣಗೆರೆಯಲ್ಲೂ ಇದೇ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಅಭಿವೃದ್ಧಿ ಕುರಿತು ಚಿಂತಿಸುತ್ತಿರುವ ತಮಗೆ ಆರೋಪಗಳ ಬಗ್ಗೆ ತಲೆ ಕೆಡಿಸಿಕೊಳ್ಳುವಷ್ಟು ಪುರುಸೊತ್ತಿಲ್ಲ ಎಂದರು.

    ‘ನನ್ನ ಇತಿಮಿತಿಯಲ್ಲಿ ಸಾಧ್ಯವಾದ ಮಟ್ಟಿಗೆ ಮಂತ್ರಿಮಂಡಲ ವಿಸ್ತರಣೆ ಮಾಡಿದ್ದೇನೆ. ಪಕ್ಷದ ವರಿಷ್ಠರ ಅಪೇಕ್ಷೆಯಂತೆ ಒಂದು ಸ್ಥಾನ ಖಾಲಿ ಉಳಿಸಿಕೊಂಡಿದ್ದೇನೆ. ಯಾರು ಏನೇ ಹೇಳಿದರೂ ಕೇಂದ್ರ ನಾಯಕರು ಹೇಳಿದಂತೆ ಇನ್ನುಳಿದ ಎರಡೂಕಾಲು ವರ್ಷದ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ವಿಶೇಷ ಗಮನ ಕೊಡುವೆ. ಅದನ್ನು ಯಾರೂ ತಡೆಯಲು ಸಾಧ್ಯವಿಲ್ಲ’ ಎಂದರು. ಈ ತಿಂಗಳ ಅಂತ್ಯಕ್ಕೆ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದೆ. ಮಾರ್ಚ್​ನಲ್ಲಿ ಬಜೆಟ್ ಅಧಿವೇಶನ ಮಾಡಲಿದ್ದೇವೆ. ಹಣಕಾಸಿನ ಇತಿಮಿತಿಯಲ್ಲಿ ರೈತಪರವಾದ ಒಳ್ಳೆಯ ಬಜೆಟ್ ಕೊಡಲು ಪ್ರಯತ್ನ ಮಾಡುವೆ ಎಂದು ಹೇಳಿದರು.

    ಈ ವಿಷಯದಲ್ಲಿ ಬೆಂಗಳೂರು ದೇಶದಲ್ಲೇ 2ನೇ ಹಾಗೂ ಜಗತ್ತಿನಲ್ಲೇ 6ನೇ ಕೆಟ್ಟ ನಗರ!

    ‘ನಿಮ್ಮ ಪೊಲಿಟಿಕಲ್ ಸ್ಟ್ರೋಕ್​ಗೆ ಟ್ರೀಟ್​ಮೆಂಟ್ ಕೊಟ್ಟಿದ್ದೇ ಬಿಎಸ್​ವೈ…’ ವಿಶ್ವನಾಥ್​ಗೆ ಹಿಗ್ಗಾಮುಗ್ಗಾ ತರಾಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts