More

    ಎಚ್ಚರ! ಕರೊನಾ ಲಾಕ್‍ಡೌನ್ ಕಾರಣಕ್ಕಾಗಿ ನೀವೇ ಇ-ಟಿಕೆಟ್ ಕ್ಯಾನ್ಸಲ್ ಮಾಡಬೇಡಿ: ಐಆರ್ಸಿಟಿಸಿ ಇಂಥ ಸಲಹೆ ನೀಡಿರುವುದೇಕೆ?

    ಮುಂಬೈ: ಕರೊನಾ ಸೋಂಕು ಹರಡದಂತೆ ತಡೆಯಲು ದೇಶಾದ್ಯಂತ ಎಲ್ಲೆಡೆ ಲಾಕ್‍ಡೌನ್ ಘೋಷಣೆ ಮಾಡಿರುವ ಕಾರಣ ಈಗಾಗಲೇ ಪ್ರಯಾಣಕ್ಕಾಗಿ ರೈಲ್ವೆ ಮುಂಗಡ ಟಿಕೆಟ್ ಕಾಯ್ದಿರಿಸಿಕೊಂಡವರು ಯಾವುದೇ ಕಾರಣಕ್ಕೂ ಅವರ ಇ-ಟಿಕೆಟ್ ರದ್ದುಗೊಳಿಸುವುದು ಬೇಡ ಎಂದು ದ ಇಂಡಿಯನ್ ರೈಲ್ ಕೆಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ ‍(ಐಆರ್‍ಸಿಟಿಸಿ) ಬುಧವಾರ ಪ್ರಯಾಣಿಕರಲ್ಲಿ ಮನವಿ ಮಾಡಿದೆ.

    ರೈಲ್ವೆ ಪ್ರಯಾಣಿಕರ ಸಂದೇಹಗಳಿಗೆ ಉತ್ತರಿಸಿರುವ ಐಆರ್‍ಸಿಟಿಸಿ ವಕ್ತಾರ ಸಿದ್ಧಾರ್ಥ್ ಸಿಂಗ್, ರೈಲ್ವೆ ಪ್ಯಾಸೆಂಜರ್ ಟ್ರೇನ್‍ಗಳ ಸಂಚಾರವನ್ನು ಸ್ಥಗಿತಗೊಳಿಸಿದ ಕೂಡಲೇ ಪ್ರಯಾಣಿಕರು ಟಿಕೆಟ್ ರದ್ದತಿ, ಹಣ ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿ ಅನೇಕ ಸಂದೇಹಗಳನ್ನು, ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ರೈಲು ಸಂಚಾರವನ್ನು ರೈಲ್ವೆಯೇ ರದ್ದುಪಡಿಸಿದ್ದರೆ ಸಂಬಂಧಪಟ್ಟ ರೈಲಿನಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದವರಿಗೆ ಹಣ ತನ್ನಿಂತಾನೆ ಪೂರ್ಣವಾಗಿ ಮರುಪಾವತಿಯಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಟಿಕೆಟ್ ಕ್ಯಾನ್ಸಲೇಷನ್ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.

    ಅಷ್ಟೇ ಅಲ್ಲ, ರೈಲ್ವೆಯೇ ಪ್ಯಾಸಂಜರ್ ಟ್ರೇನುಗಳ ಸಂಚಾರವನ್ನು ರದ್ದುಗೊಳಿಸಿದ ಸಂದರ್ಭದಲ್ಲಿ ಪ್ರಯಾಣಿಕರು ಗೊತ್ತಿದ್ದೋ, ಗೊತ್ತಿಲ್ಲದೆಯೋ ಮುಂಗಡ ಕಾಯ್ದಿರಿಸಿದ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಹಣ ಪೂರ್ಣವಾಗಿ ಮರುಪಾವತಿ ಆಗಲ್ಲ. ಆಗ ಪ್ರಯಾಣಿಕರು ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts