More

    ಡಬಲ್ ರೂಪಾಂತರಿ ಕರೊನಾ ವೈರಸ್​​ಅನ್ನು ‘ಇಂಡಿಯನ್ ವೇರಿಯಂಟ್’ ಅನ್ನಬೇಡಿ : ಸರ್ಕಾರ

    ನವದೆಹಲಿ : ಕೆಲವು ಮಾಧ್ಯಮಗಳ ವರದಿಗಳಲ್ಲಿ ಡಬಲ್​ ಮ್ಯೂಟಂಟ್​ ಅಥವಾ ಬಿ.1.617 ಕರೊನಾ ರೂಪಾಂತರಿ ವೈರಸ್​ಅನ್ನು ಇಂಡಿಯನ್ ವೇರಿಯೆಂಟ್​ ಎನ್ನುತ್ತಿದ್ದಾರೆ. ಆದರೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್​ಒ) ಈ ಶಬ್ದಗಳನ್ನು ಬಳಸಿಲ್ಲದಿರುವುದರಿಂದ ಇದು ಅಸಮಂಜಸ ಎಂದು ಕೇಂದ್ರ ಸರ್ಕಾರ ಹೇಳಿದೆ.

    “ಡಬ್ಲ್ಯೂಎಚ್​ಒ ಬಿ.1.617 ಅನ್ನು ವೇರಿಯೆಂಟ್ ಆಫ್​ ಗ್ಲೋಬಲ್ ಕನ್​​ಸರ್ನ್​ ಎಂದು ವಿಂಗಡಿಸಿರುವ ಸುದ್ದಿಯನ್ನು ವರದಿ ಮಾಡುವಾಗ ಕೆಲವು ಮಾಧ್ಯಮಗಳು ಅದನ್ನು ‘ಇಂಡಿಯನ್ ವೇರಿಯೆಂಟ್​’ ಎಂದು ಕರೆದಿವೆ. ಈ ವರದಿಗಳು ಯಾವುದೇ ಆಧಾರವನ್ನು ಹೊಂದಿಲ್ಲ” ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿಕೆ ನೀಡಿದೆ. ಡಬ್ಲ್ಯೂಎಚ್​​ಒ ಈ ಬಗ್ಗೆ ಪ್ರಕಟಿಸಿದ 32 ಪುಟಗಳ ದಾಖಲೆಯಲ್ಲಿ ಎಲ್ಲೂ ಈ ಶಬ್ದಪ್ರಯೋಗ ಮಾಡಿಲ್ಲ. ವಸ್ತುತಃ ಒಮ್ಮೆಯೂ ಇಂಡಿಯನ್ ಎಂಬ ಪದಪ್ರಯೋಗ ಕೂಡ ಮಾಡಿಲ್ಲ ಎಂದು ಸಚಿವಾಲಯ ಹೇಳಿದೆ.

    ಇದನ್ನೂ ಓದಿ: ಪಡಿತರ ಪಡೆಯಲು ಈ ತಿಂಗಳು ಹಲವು ಸೌಲಭ್ಯ ; ಬೆರಳಚ್ಚು ಕಡ್ಡಾಯವಲ್ಲ !

    ಡಬ್ಲ್ಯೂಎಚ್​​ಒ ಕೂಡ ಈ ಬಗ್ಗೆ ಸ್ಪಷ್ಟನೆ ಜಾರಿಗೊಳಿಸಿದ್ದು, ಸಂಸ್ಥೆಯು ರೂಪಾಂತರಿಗಳನ್ನು ಅವು ಮೊದಲು ವರದಿಯಾದ ದೇಶಗಳ ಹೆಸರಿಟ್ಟು ಕರೆಯುವುದಿಲ್ಲ. ಬದಲಿಗೆ ವೈಜ್ನಾನಿಕ ಹೆಸರುಗಳಿಂದ ಕರೆಯುತ್ತದೆ. ಅದನ್ನೇ ನೀವೂ ಮಾಡಿ ಎಂದು ಕೆಲವು ಸುದ್ದಿಸಂಸ್ಥೆಗಳನ್ನು ಟ್ಯಾಗ್ ಮಾಡಿ ಟ್ವೀಟ್​ ಮಾಡಿದೆ.

    ನಿನ್ನೆ ಪ್ರಕಟವಾದ ಡಬ್ಲ್ಯೂಎಚ್​​ಒನ ವರದಿಯಲ್ಲಿ, ಸಾರ್ಸ್​-ಕೋವ್​-2ನ ಬಿ.1.617 ವೇರಿಯೆಂಟ್​ ಮೊದಲು ಭಾರತದಲ್ಲಿ ಅಕ್ಟೋಬರ್ 2020 ರಲ್ಲಿ ಕಂಡುಬಂತು. ಅದು ಅಧಿಕ ಹರಡುವಿಕೆ ಹೊಂದಿದ್ದು 44 ದೇಶಗಳಲ್ಲಿ ಕಂಡುಬಂದಿದೆ ಎಂದು ಹೇಳಿತ್ತು. ಇದನ್ನು ಜಾಗತಿಕ ಮಟ್ಟದಲ್ಲಿ ಕಾಳಜಿ ವಹಿಸಬೇಕಾದ ರೂಪಾಂತರಿ(ವೇರಿಯೆಂಟ್​ ಆಫ್ ಕನ್​​ಸರ್ನ್​) ಎಂದು ವಿಂಗಡಿಸುತ್ತಿದ್ದೇವೆ ಎಂದು ಹೇಳಿತ್ತು. ಈ ಪಟ್ಟಿಯಲ್ಲಿ ಈಗಾಗಲೇ ಇಂಗ್ಲೆಂಡ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಮೊದಲು ವರದಿಯಾದ ವೈರಸ್ ರೂಪಾಂತರಿಗಳು ಸೇರಿವೆ. (ಏಜೆನ್ಸೀಸ್)

    ಪ್ರಾಣ ಕೈಗೆ ನೀಡಿದವರಿಗೆ ನಂಬಿಕೆದ್ರೋಹ… 7 ಜನರಿಗೆ ಮಾರಣಾಂತಿಕ ಚುಚ್ಚುಮದ್ದು ನೀಡಿದ ನರ್ಸ್​!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts