More

    ಕರೊನಾ ವದಂತಿಗಳದ್ದೇ ಕಾರುಬಾರು; ಇದಕ್ಕೆಲ್ಲ ಕಿವಿಗೊಡಲೇಬೇಡಿ

    ನವದೆಹಲಿ: ಕರೊನಾ ವೈರಸ್​ ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದೆ. ಅದಕ್ಕಿಂತ ಹೆಚ್ಚು ಭಯ ಸೃಷ್ಟಿಸಿರುವುದು ವದಂತಿಗಳು. ಹೀಗೆ ಮಾಡಿದರೆ ಕರೊನಾ ಬಂದುಬಿಡುತ್ತದೆ, ಇದನ್ನು ತಿಂದರೆ ಹೋಗುತ್ತದೆ, ಅದನ್ನು ಕುಡಿದರೆ ಹೋಗುತ್ತದೆ ಹೀಗೆ ಅನೇಕ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲ ಅಮಾಯಕರು ಅದನ್ನೇ ಸತ್ಯವೆಂದು ನಂಬಿಕೊಂಡಿದ್ದಾರೆ ಕೂಡ. ಆದರೆ ಕರೊನಾ ಬಗೆಗೆ ಸತ್ಯಾಂಶಗಳಿಗಿಂತ ಸುಳ್ಳು ಸುದ್ದಿಗಳೇ ಹೆಚ್ಚಾಗಿದ್ದು, ಅದರ ಬಗ್ಗೆ ಗಮನ ಕೊಡದೆ ಸೂಕ್ತ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಎಂದು ಅನೇಕ ವೈದ್ಯಕೀಯ ಸಂಸ್ಥೆಗಳು ತಿಳಿಸಿವೆ.

    ಬಿಸಿ ನೀರು ಸೇವನೆಯಿಂದ ಕರೊನಾವನ್ನು ತಡೆಗಟ್ಟಬಹುದು. ಗಂಟಲಿನಲ್ಲಿ ಉಪ್ಪು ಮಿಶ್ರಿತ ಬಿಸಿ ನೀರನ್ನು ಹಾಕಿಕೊಂಡು ಗುಳುಗುಳು ಮಾಡಿ ಉಗಿದರೆ ಕರೊನಾ ಶ್ವಾಸಕೋಶಕ್ಕೆ ಹೋಗದೆ ಗಂಟಲಿನಿಂದ ಹೊರಬಂದುಬಿಡುತ್ತದೆ, ತಂಪಾದ ಖಾದ್ಯ ಮತ್ತು ಪಾನೀಯಗಳನ್ನು ಸೇವನೆ ಮಾಡದೇ ಇರುವುದರಿಂದ ಕರೊನಾ ತಡೆಗಟ್ಟಬಹುದು ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದನ್ನು ಯುನಿಸೆಫ್​ ತಿಳಿಸಿದೆ ಎಂದು ಸಹ ಹೇಳಲಾಗಿತ್ತು. ಇದೀಗ ಈ ಸುದ್ದಿಯ ಬಗ್ಗೆ ಯುನಿಸೆಫ್​ ಮಾತನಾಡಿದ್ದು, ಇದೊಂದು ಸುಳ್ಳು ಸುದ್ದಿ, ನಾವು ಈ ರೀತಿಯ ಹೇಳಿಕೆಯನ್ನು ನೀಡಿಲ್ಲ ಎಂದು ತಿಳಿಸಿದೆ.

    ಮಾಂಸಹಾರಿ ಊಟ ಸೇವನೆಯಿಂದ ವೈರಸ್​ ಹರಡುತ್ತದೆ ಎನ್ನುವ ಮಾಹಿತಿಯೂ ಸಹ ಅನೇಕರು ನೀಡಲಾರಂಭಿಸಿದ್ದರು. ಆದರೆ ಅದೂ ಸಹ ಸುಳ್ಳು ಸುದ್ದಿ, ಯಾವುದೇ ಆಹಾರವನ್ನು ಬೇಯಿಸಿದ ನಂತರ ಅದರಲ್ಲಿ ವೈರಸ್​ ಇರುವುದಿಲ್ಲ ಎಂದು ಪ್ರಸಿದ್ಧ ವೈದ್ಯಕೀಯ ಸಂಸ್ಥೆಯಾಗಿರುವ ಎಐಐಎಮ್​ಎಸ್​ ತಿಳಿಸಿದೆ.

    ಕೈಗಳಲ್ಲಿ ವೈರಸ್​ ಕೇವಲ 5ರಿಂದ 10 ನಿಮಿಷಗಳ ಕಾಲ ಮಾತ್ರ ಇರಲು ಸಾಧ್ಯ. ಲವಂಗ, ಬೆಳ್ಳುಳ್ಳಿ ತಿನ್ನುವುದರಿಂದ ವೈರಸ್​ ಹರಡುವುದನ್ನು ತಡೆಗಟ್ಟಬಹುದು. ಅರಿಶಿಣ ಮಿಶ್ರಿತ ನೀರು ಕುಡಿಯುವದರಿಂದ ವೈರಸ್​ ಬಾರದಿರುವಂತೆ ನೋಡಿಕೊಳ್ಳಬಹುದು. ಮದ್ಯಪಾನ ಕರೊನಾ ಇಂದ ಕಾಪಾಡುತ್ತದೆ. ಗೋಮೂತ್ರ ಸೇವನೆಯಿಂದ ಕರೊನಾ ವೈರಸ್​ ದೂರಾಗುತ್ತದೆ ಹೀಗೆ ಅನೇಕ ರೀತಿಯ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದ್ದು ಈ ಎಲ್ಲಾ ಮಾಹಿತಿಗಳು ತಪ್ಪು ಮಾಹಿತಿಗಳಾಗಿವೆ ಎನ್ನುವುದನ್ನು ವೈದ್ಯರು ತಿಳಿಸಿದ್ದಾರೆ.

    ದೆಹಲಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದವರು ಶನಿವಾರದಂದು ಗೋಮೂತ್ರ ಸೇವೆನೆಗೆಂದೇ ಕಾರ್ಯಕ್ರಮವೊಂದನ್ನು ನಡೆಸಿದ್ದು, ಗೋಮೂತ್ರ ಸೇವನೆಯಿಂದ ಕರೊನಾ ಮಾತ್ರವಲ್ಲ ಯಾವ ರೋಗವೂ ಮನುಷ್ಯನಿಗೆ ಬರುವುದಿಲ್ಲ ಎಂದು ಹೇಳಿದ್ದರು. ಹಾಗೆಯೇ ಅನೇಕರು ಬಿಸಿಲಿನಲ್ಲಿ ಕುಳಿತರೆ ಕರೊನಾ ಬರಲ್ಲ ಎನ್ನುವ ಮಾತುಗಳನ್ನೂ ಸಹ ಆಡಿದ್ದರು. ಇದೆಲ್ಲವೂ ತಪ್ಪು ನಂಬಿಕೆಗಳೆಂದು ವೈದ್ಯರು ಹೇಳಿದ್ದಾರೆ.

    ಕರೊನಾ ಬಗ್ಗೆ ವದಂತಿಗಳನ್ನು ಹರಡುವ ಬದಲು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕಿದೆ. ನಿಮ್ಮ ಕೈಗಳನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳುವುದು, ಮಾಸ್ಕ್​ ಧರಿಸುವುದು, ಜನರಿಂದ ಆದಷ್ಟು ದೂರವಿರುವುದನ್ನು ಬಿಟ್ಟರೆ ಕರೊನಾವನ್ನು ಬೇರಾವ ರೀತಿಯಲ್ಲೂ ತಡೆಗಟ್ಟಲು ಸಾಧ್ಯತೆ ಇಲ್ಲವೆಂದು ತಿಳಿಸಲಾಗಿದೆ. (ಏಜೆನ್ಸೀಸ್​)

    ಸೇಲಂ ಅಂತರ್ಜಾತಿ ಮದುವೆ ಪ್ರಕರಣ: ಕಿಡ್ನಾಪ್ ಆಗಿದ್ದ ಯುವತಿ ಮಾತು ಕೇಳಿ ಪೊಲೀಸರಿಗೆ ಮಾತ್ರವಲ್ಲ ಪತಿಗೂ ಶಾಕ್​!

    ಕರೊನಾ ಸಾವು ಆರು ಸಾವಿರ; ಭಾರತದಲ್ಲಿ 109ಕ್ಕೆ ಏರಿದ ಸೋಂಕಿತರ ಸಂಖ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts