More

    ರಕ್ತದಾನಕ್ಕೆ ಜಾತಿ, ಧರ್ಮದ ಭೇದವಿಲ್ಲ

    ಶಿರಾಳಕೊಪ್ಪ : ದೇಶದ ಹಿಂದು ಮುಸ್ಲಿಂ ಎಲ್ಲರೂ ಒಂದು. ಎಲ್ಲರಲ್ಲೂ ಹರಿಯುವ ರಕ್ತದ ಬಣ್ಣ ಒಂದೇ. ನಾವೆಲ್ಲರೂ ಸಹೋದರರಂತೆ ಇರಬೇಕು ಎಂದು ಸಾದಿಯಾ ಚಾರಿಟಬಲ್ ಟ್ರಸ್ಟ ಅಧ್ಯಕ್ಷ ಅಹಮದ್ ಹುಸೇನ್ ಹಾಫೀಜ್ ಕರ್ನಾಟಕಿ ಹೇಳಿದರು.
    ಪಟ್ಟಣದಲ್ಲಿ ಶನಿವಾರ ಸಾದಿಯಾ ಎಜುಕೇಶನಲ್ ಟ್ರಸ್ಟ್, ರೋಟರಿ ಬ್ಲಡ್ ಬ್ಯಾಂಕ್ ಸಹಯೋಗದಲ್ಲಿ ಏರ್ಪಡಿಸಿದ ಸಾರ್ವಜನಿಕ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನ ಶ್ರೇಷ್ಠವಾದುದು. ನಾವೆಲ್ಲ ದೇಶ ಕಟ್ಟಬೇಕೇ ಹೊರತು ದೇಶ ಒಡೆಯುವ ಕೆಲಸ ಮಾಡಬಾರದು. ಹಾಗಾಗಿ ಎಲ್ಲರೂ ರಕ್ತದಾನಕ್ಕೆ ಮುಂದಾಗಬೇಕು ಎಂದರು.
    ಮನುಷ್ಯತ್ವವನ್ನು ಗೌರವಿಸಬೇಕು. ನಮ್ಮ ಪ್ರವಾದಿಗಳು ಜಾತಿ ಯಾವುದೆಂದು ಪರಿಗಣಿಸದೆ ಸಹಾಯ ಮಾಡಬೇಕು ಎಂದಿದ್ದಾರೆ. ನಮ್ಮ ಮದರಸಾಗಳು ಸಮಾಜಮುಖಿ ಕೆಲಸ ಮಾಡಬೇಕು. ಅದರ ಒಂದು ಭಾಗವಾಗಿ ಸಾದಿಯಾ ಎಜುಕೇಶನ್ ಟ್ರಸ್ಟ್ ರಕ್ತದಾನ ಶಿಬಿರ ಆಯೋಜಿಸಿದೆ ಎಂದರು.
    ಪುರಸಭಾ ಸದಸ್ಯ ಟಿ.ರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬ ಜನಪ್ರತಿನಿಽಯೂ ಜನರ ಭಾವನೆಗಳನ್ನು ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು. ಜನ ನಮ್ಮ ಕೆಲಸ ನೋಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಜಾತಿ ಜನಾಂಗ ಎಂದು ನೋಡದೆ ಎಲ್ಲರೂ ಒಂದು ಎಂದು ತಿಳಿದು ಕೆಲಸ ಮಾಡಿದ್ದರಿಂದ ಪಟ್ಟಣದ ಜನತೆ ೫ ಬಾರಿ ನನ್ನನ್ನು ಬೆಂಬಲಿಸಿದ್ದಾರೆ. ಸಂಸ್ಥೆಯ ಪದಾಽಕಾರಿಗಳು ಪುರಸಭೆಗೆ ಬಂದು ಟ್ರಸ್ಟ್ಗೆ ೨ ಎಕರೆ ಭೂಮಿ ಬೇಕು ಎಂದಾಗ ಸಂಸದ ರಾಘವೇಂದ್ರ ಅವರ ಸಹÀಕಾರದಿಂದ ಕೊಡಿಸಿದ್ದೇನೆ ಎಂದರು.
    ಪತ್ರಕತÀðರ ಸಂಘದ ಜಿಲ್ಲಾ ಉಪಾಧ್ಯಕ್ಷ ಹುಚ್ಚರಾಯಪ್ಪ, ಮಹಮದ್ ಆಸೀಫ್ ಮಾತನಾಡಿದರು. ಸಂತೋಷ್, ಸಿಖಂದರ ಬಾಷಾ, ಪವೀಜ್ ಅಹಮದ್, ಸಯ್ಯದ್ ಅತೀಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts