More

    ಕರೊನಾ ಅಲರ್ಟ್​! ಬೆಕ್ಕಿಗೆ ಮುತ್ತು ಕೊಡುವ ಮುನ್ನ ಇದನ್ನೊಮ್ಮೆ ಓದಿ…

    ಷಿಕಾಗೊ: ಈಗಾಗಲೇ ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಬೆಕ್ಕುಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಅದರ ಮುಂದುವರೆದಿರುವ ಭಾಗವಾಗಿ, ಇದೀಗ ಪ್ರಾಣಿಗಳ ಮೇಲೆ ಕರೊನಾ ಎಫೆಕ್ಟ್​ ಬಗ್ಗೆ ಅಧ್ಯಯನ ಮುಂದುವರೆದಿದೆ.

    ಕರೊನಾ ವೈರಸ್‌ ಮನುಷ್ಯರಿಂದ ಬೆಕ್ಕುಗಳಿಗೆ ಹಾಗೂ ಬೆಕ್ಕುಗಳಿಂದ ಮನುಷ್ಯರಿಗೆ ಹರಡುವ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಸಂಶೋಧಕರಿಗೆ ಸಿಕ್ಕಿಲ್ಲ. ಆದರೆ ಈ ಸೋಂಕು ಹೇಗೆ, ಯಾವಾಗ, ಯಾವ ರೀತಿಯಲ್ಲಿ ಮನುಷ್ಯ ಹಾಗೂ ಪ್ರಾಣಿಗಳ ದೇಹವನ್ನು ಹೊಕ್ಕುತ್ತಿವೆಯೋ ಎಂಬ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಇದುವರೆಗೆ ವಿಜ್ಞಾನಿಗಳಿಗೆ ಸಾಧ್ಯವಾಗಿಲ್ಲ ಎನ್ನುವುದೂ ಸತ್ಯವಾದ ಮಾತೇ.

    ಇದನ್ನೂ ಓದಿ: ಐದು ಬಾಲಕಿಯರ ವಿರುದ್ಧ ಕಂಪ್ಲೇಂಟ್​ ಕೊಟ್ಟ ಎಂಟರ ಪೋರ! ಕಾರಣ ಕೇಳಿ ನಕ್ಕೂ ನಕ್ಕೂ ಸುಸ್ತಾದ ಪೊಲೀಸರು…

    ಇದೀಗ ಅಮೆರಿಕದ ಸಂಶೋಧಕರು ಬಹುದೊಡ್ಡ ಎಚ್ಚರಿಕೆಯನ್ನು ನೀಡಿದ್ದಾರೆ. ಅದೇನೆಂದರೆ, ಹೆಚ್ಚಿನವರಿಗೆ ತಮ್ಮ ಮುದ್ದು ಪ್ರಾಣಿಗಳನ್ನು ಮುದ್ದಾಡುವ ಆಸೆ. ಅದರ ಬಾಯಿಗೆ ತಮ್ಮ ಬಾಯನ್ನಿಟ್ಟು ಕಿಸ್​ ಕೊಡುವವರು ತುಂಬಾ ಮಂದಿ. ಆದರೆ ಕರೊನಾ ವೈರಸ್​ನ ಈ ದಿನಗಳಲ್ಲಿ ದಯವಿಟ್ಟು ಈ ರೀತಿ ಮಾಡಬೇಡಿ ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

    ಅದಕ್ಕೆ ಕಾರಣ ನೀಡಿರುವ ಅವರು, ಅನೇಕ ಸಂದರ್ಭಗಳಲ್ಲಿ ಮನುಷ್ಯರಿಗೆ ಕರೊನಾ ಸೋಂಕು ಇದ್ದರೂ ಅದು ಅಷ್ಟು ಸುಲಭದಲ್ಲಿ ಕಾಣಿಸುವುದಿಲ್ಲ. ಅದು ಖಚಿತವಾಗಲು ಕೆಲ ಸಮಯ ಬೇಕಾಗಬಹುದು. ಆದರೆ ಈ ಅವಧಿಯಲ್ಲಿ ಯಾವುದೇ ಸಾಕು ಪ್ರಾಣಿಗಳಿಗೆ ಅದರಲ್ಲಿಯೂ ಹೆಚ್ಚಾಗಿ ಬೆಕ್ಕುಗಳ ಮುಖದ ಮೇಲೆ ಕಿಸ್​ ಕೊಡುವುದರಿಂದ ಕರೊನಾ ವೈರಾಣುಗಳು ಬೆಕ್ಕುಗಳಿಗೆ ತಗಲುವ ಎಲ್ಲಾ ಸಾಧ್ಯತೆಗಳು ಇವೆ.

    ಇದನ್ನೂ ಓದಿ: ಸೋಂಕಿತ ಮನುಷ್ಯರನ್ನು ನಿಭಾಯಿಸಲಾಗದೇ ತತ್ತರಿಸಿರುವ ಅಮೆರಿಕಕ್ಕೆ ಇನ್ನೊಂದು ಶಾಕ್‌: ಹುಲಿಯಾಯ್ತು, ಈಗ ಬೆಕ್ಕಿನಲ್ಲಿ ಕಾಣಿಸಿಕೊಂಡಿದೆ ಮಹಾಮಾರಿ!

    ಒಮ್ಮೆ ಒಂದು ಬೆಕ್ಕಿಗೆ ಸೋಂಕು ತಗುಲಿದರೆ, ಅದು ಸುಲಭದಲ್ಲಿ ಇನ್ನಿತರ ಬೆಕ್ಕುಗಳಿಗೂ ತಗುಲುತ್ತದೆ. ಇದು ಈಗಾಗಲೇ ಪ್ರಯೋಗಾಲಯಗಳಿಂದ ತಿಳಿದು ಬಂದಿದೆ ಎಂದಿದ್ದಾರೆ ವಿಜ್ಞಾನಿಗಳು. ಈ ಕುರಿತು ಯೂನಿರ್ಸಿಟಿ ಆಫ್‌ ವಿಸ್ಕನ್‌ಸಿನ್‌ ಸ್ಕೂಲ್‌ ಆಫ್‌ ವೆಟರ್ನರಿ ಮೆಡಿಸಿನ್‌ನ ಸಂಶೋಧಕರು ಹಾಗೂ ಪೀಟರ್‌ ಹಾಫ್‌ಮನ್‌ ಪ್ರಯೋಗಾಲಯದಲ್ಲಿ ನಡೆಸಿರುವ ಪರೀಕ್ಷೆಗಳಿಂದ ದೃಢಪಟ್ಟಿದೆ. ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್‌ ಮೆಡಿಸಿನ್‌ನಲ್ಲಿ ಪ್ರಯೋಗದ ಫಲಿತಾಂಶ ಪ್ರಕಟಗೊಳಿಸಲಾಗಿದೆ.

    ಈ ಬಗ್ಗೆ ಪ್ರಕಟಣೆ ನೀಡಿರುವ ಅಮೆರಿಕದ ಪಶುವೈದ್ಯಕೀಯ ಸಂಘ “ಸಾಕು ಪ್ರಾಣಿಗಳಿಗೆ ಮುತ್ತು ನೀಡುವುದು, ಮುದ್ದಾಡುವುದನ್ನು ನಿಲ್ಲಿಸಿ ಹಾಗೂ ನೆಲ ಸ್ವಚ್ಛವಾಗಿಡುವ ಮೂಲಕ ಪ್ರಾಣಿಗಳಿಗೆ ವೈರಸ್‌ ಸೋಂಕು ಹರಡುವ ಸಾಧ್ಯತೆಯನ್ನು ತಪ್ಪಿಸಿ’ ಎಂದು ಹೇಳಿದೆ.

    ಇದನ್ನೂ ಓದಿ: ಪರ ಊರುಗಳಿಂದ ಕರೊನಾ ಸೋಂಕು ಹೊತ್ತು ತಂದವರಿಂದ ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಆಪತ್ತು!

    ಇದರ ಬಗ್ಗೆ ನಡೆಸಿರುವ ಪ್ರಯೋಗದ ವರದಿಯನ್ನು ಜನರ ಮುಂದಿಟ್ಟಿರುವ ಸಂಶೋಧಕರು “ಕರೊನಾ ಸೋಂಕಿತನ ಸಂಪರ್ಕಕ್ಕೆ ಬಂದಿರುವ ಮೂರು ಬೆಕ್ಕುಗಳಿಗೆ ಸೋಂಕು ಹರಡಿದೆ. ಸೋಂಕಿತ ಬೆಕ್ಕನ್ನು ಆರೋಗ್ಯವಾಗಿರುವ ಮತ್ತೊಂದು ಬೆಕ್ಕಿನೊಂದಿಗೆ ಬಿಡಲಾಗಿತ್ತು. ಐದು ದಿನಗಳಲ್ಲಿಯೇ ಆರೋಗ್ಯಕರ ಬೆಕ್ಕುಗಳೂ ಸೋಂಕಿಗೆ ಒಳಗಾಗಿವೆ.

    ಆದರೆ ಸೋಂಕು ಇದ್ದರೂ ಸೀನು, ಕೆಮ್ಮು, ಅಧಿಕ ದೇಹದ ಉಷ್ಣಾಂಶ ಅಥವಾ ತೂಕ ಕಡಿಮೆಯಾಗುವುದು ಇಂಥ ಯಾವುದೇ ಲಕ್ಷಣಗಳು ಬೆಕ್ಕುಗಳಲ್ಲಿ ಕಂಡು ಬಂದಿಲ್ಲ. ಆದರೆ ಪರೀಕ್ಷೆಯಲ್ಲಿ ಮಾತ್ರ ಕರೊನಾ ಪಾಸಿಟಿವ್​ ಬಂದಿದೆ. ಆದ್ದರಿಂದ ವಿನಾಕಾರಣ ಕರೊನಾ ಗಲಾಟೆ ಮುಗಿಯುವವರೆಗೆ ಬೆಕ್ಕುಗಳನ್ನು ಅತಿಯಾಗಿ ಮುದ್ದಿಸುವುದನ್ನು ಮಾಡಬೇಡಿ ಎಂದಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts