More

    ಆಶಸ್ ಸರಣಿಯ 2ನೇ ಟೆಸ್ಟ್‌ನಲ್ಲಿ ಆಸೀಸ್‌ಗೆ ವಾರ್ನರ್, ಲಬುಶೇನ್ ಆಸರೆ

    ಅಡಿಲೇಡ್: ಎಡಗೈ ಆರಂಭಿಕ ಡೇವಿಡ್ ವಾರ್ನರ್ (95 ರನ್, 167 ಎಸೆತ, 11 ಬೌಂಡರಿ) ಮತ್ತು ಮಾರ್ನಸ್ ಲಬುಶೇನ್ (95*ರನ್, 275 ಎಸೆತ, 7 ಬೌಂಡರಿ) ದಿಟ್ಟ ಬ್ಯಾಟಿಂಗ್ ನಿರ್ವಹಣೆಯ ನೆರವಿನಿಂದ ಆಸ್ಟ್ರೇಲಿಯಾ ತಂಡ ಆಶಸ್ ಸರಣಿಯ 2ನೇ ಹಾಗೂ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಬೃಹತ್ ಮೊತ್ತದತ್ತ ಮುನ್ನಡೆದಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ಆಸೀಸ್ ದಿನದಂತ್ಯಕ್ಕೆ 2 ವಿಕೆಟ್‌ಗೆ 221 ರನ್ ಪೇರಿಸಿದೆ. ಶತಕದತ್ತ ಮುನ್ನಡೆದಿರುವ ಲಬುಶೇನ್ ಜತೆಗೆ ಹಂಗಾಮಿ ನಾಯಕ ಸ್ಟೀವನ್ ಸ್ಮಿತ್ (18*) 2ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

    ಆರಂಭಿಕ ಮಾರ್ಕಸ್ ಹ್ಯಾರಿಸ್ (3) ವಿಕೆಟ್ ಬೇಗನೆ ಕಳೆದುಕೊಂಡು ಆಸೀಸ್ ಆರಂಭಿಕ ಆಘಾತ ಎದುರಿಸಿತ್ತು. ಆಗ ಜತೆಗೂಡಿದ ವಾರ್ನರ್-ಲಬುಶೇನ್ 2ನೇ ವಿಕೆಟ್‌ಗೆ 176 ರನ್ ಜತೆಯಾಟವಾಡಿದರು. ಆದರೆ ಶತಕದಿಂದ ಕೇವಲ 95 ರನ್ ದೂರವಿದ್ದಾಗ ವಾರ್ನರ್, ಸ್ಟೋಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಇದರಿಂದ ಸರಣಿಯಲ್ಲಿ ಸತತ 2ನೇ ಬಾರಿ ಶತಕವಂಚಿತರಾದರು. ಮೊದಲ ಟೆಸ್ಟ್‌ನಲ್ಲಿ ವಾರ್ನರ್ 94 ರನ್‌ಗೆ ಔಟಾಗಿದ್ದರು.

    ಆಸ್ಟ್ರೇಲಿಯಾ: 89 ಓವರ್‌ಗಳಲ್ಲಿ 2 ವಿಕೆಟ್‌ಗೆ 221 (ಹ್ಯಾರಿಸ್ 3, ವಾರ್ನರ್ 95, ಲಬುಶೇನ್ 95*, ಸ್ಮಿತ್ 18*, ಬ್ರಾಡ್ 34ಕ್ಕೆ 1, ಸ್ಟೋಕ್ಸ್ 50ಕ್ಕೆ 1).

    ಪ್ಯಾಟ್ ಕಮ್ಮಿನ್ಸ್ ಕ್ವಾರಂಟೈನ್, ಕೊನೇಕ್ಷಣದಲ್ಲಿ ಸ್ಟೀವನ್ ಸ್ಮಿತ್ ನಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts