More

    ದೇಶಿಯ ವಿಮಾನಯಾನ ಟಿಕೆಟ್​ ದರಗಳು ಫಿಕ್ಸ್​, ಬೆಂಗಳೂರಿಂದ ಎಲ್ಲೆಲ್ಲಿಗೆ ಎಷ್ಟೆಷ್ಟು ದರ ವಿವರ ಇಲ್ಲಿದೆ ನೋಡಿ

    ನವದೆಹಲಿ/ಬೆಂಗಳೂರು: ದೇಶಾದ್ಯಂತ ಮೇ 25ರಿಂದ ದೇಶಿಯ ವಿಮಾನಯಾನ ಸೇವೆಗಳು ಆರಂಭವಾಗಲಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಗಸ್ಟ್​ 24ರವರೆಗೆ ಅನ್ವಯವಾಗುವಂತೆ ಟಿಕೆಟ್​ ದರಗಳನ್ನು ನಿಗದಿಪಡಿಸಿ ಆದೇಶ ಹೊರಡಿಸಿದೆ. ಪ್ರತಿಯೊಂದು ವಿಮಾನದಲ್ಲೂ ವಿಮಾನಯಾನ ಸಂಸ್ಥೆಗಳು ಶೇ.40 ಸೀಟುಗಳ ಟಿಕೆಟ್​ಗಳನ್ನು ನಿಗದಿಪಡಿಸಿರುವ ದರಗಳಿಗಿಂತ ಕಡಿಮೆ ದರಕ್ಕೆ ಟಿಕೆಟ್​ಗಳನ್ನು ಮಾರಾಟ ಮಾಡಬೇಕಾಗುತ್ತದೆ.

    ಮಾರ್ಗಗಳ ವರ್ಗೀಕರಣ: ವಿಮಾನ ಹಾರಾಟದ ಅವಧಿಯನ್ನು ಆಧರಿಸಿ ವಿಮಾನಯಾನ ಮಾರ್ಗಗಳನ್ನು ಸರ್ಕಾರ 7 ವರ್ಗಗಳಾಗಿ ವಿಂಗಡಿಸಿದೆ. 40 ನಿಮಿಷಗಳ ಹಾರಾಟದ ಸಮಯ ಹೊಂದಿರುವ ಮಾರ್ಗಗಳನ್ನು ಕ್ಲಾಸ್​ ಎ ಎಂದು, 40 ನಿಮಿಷದಿಂದ 60 ನಿಮಿಷದ ಅವಧಿಯ ಹಾರಾಟದ ಸಮಯ ಹೊಂದಿರುವ ಮಾರ್ಗವನ್ನು ಕ್ಲಾಬ್​ ಬಿ ಎಂದು, 60ರಿಂದ 90 ನಿಮಿಷದ ಮಾರ್ಗವನ್ನು ಕ್ಲಾಸ್​ ಸಿ ಎಂದು, 90ರಿಂದ 120 ನಿಮಿಷದ ಮಾರ್ಗವನ್ನು ಕ್ಲಾಸ್​ ಡಿ ಎಂದು, 120-150 ನಿಮಿಷದ ಹಾರಾಟದ ಅವಧಿಯ ಮಾರ್ಗವನ್ನು ಕ್ಲಾಸ್​ ಇ ಎಂದು 150ರಿಂದ 180 ನಿಮಿಷದ ಮಾರ್ಗವನ್ನು ಕ್ಲಾಸ್​ ಎಫ್​ ಎಂದು ಹಾಗೂ 180ರಿಂದ 210 ನಿಮಿಷದ ಮಾರ್ಗವನ್ನು ಕ್ಲಾಸ್​ ಜಿ ಎಂದು ವರ್ಗೀಕರಿಸಿದೆ. ಆಯಾ ವರ್ಗಕ್ಕೆ ಅನುಗುಣವಾಗಿ ಕನಿಷ್ಠ 2 ಸಾವಿರ ರೂ.ಗಳಿಂದ ಗರಿಷ್ಠ 18,600 ರೂ.ವರೆಗೆ ದರಗಳನ್ನು ನಿಗದಿಪಡಿಸಿದೆ.

    ಬೆಂಗಳೂರು-ಚೆನ್ನೈ, ಬೆಂಗಳೂರು-ಕೊಚ್ಚಿ ಮತ್ತು ಬೆಂಗಳೂರು-ಮಂಗಳೂರು ಮಾರ್ಗ ಕ್ಲಾಸ್​ ಎ ಎಂದು ವರ್ಗೀಕರಣಗೊಂಡಿದ್ದು, ಕನಿಷ್ಠ 2 ಸಾವಿರ ರೂ. ಗರಿಷ್ಠ 6 ಸಾವಿರ ರೂ. ದರ ನಿಗದಿಯಾಗಿದೆ.

    ಇದನ್ನೂ ಓದಿ: ಅಂಫಾನ್ ಚಂಡಮಾರುತಕ್ಕೆ 84 ಬಲಿ: ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

    ಬೆಂಗಳೂರು-ಕ್ಯಾಲಿಕಟ್​, ಬೆಂಗಳೂರು-ಕೊಯಮತ್ತೂರು, ಬೆಂಗಳೂರು-ಗೋವಾ, ಬೆಂಗಳೂರು-ಹೈದರಾಬಾದ್​ ಮತ್ತು ಬೆಂಗಳೂರು-ತ್ರಿವೇಂಡ್ರಂ ಕ್ಲಾಸ್​ ಬಿ ಮಾರ್ಗದಲ್ಲಿ ಬರಲಿದ್ದು, ಕನಿಷ್ಠ 2,500 ರೂ. ಮತ್ತು ಗರಿಷ್ಠ 7,500 ರೂ. ದರ ನಿಗದಿಯಾಗಿದೆ.
    ಬೆಂಗಳೂರು-ಕೋಲ್ಕತಾ, ಬೆಂಗಳೂರು-ಮುಂಬೈ, ಬೆಂಗಳೂರು-ನಾಗ್ಪುರ, ಬೆಂಗಳೂರು-ಪೋರ್ಟ್​ಬ್ಲೇರ್​, ಬೆಂಗಳೂರು-ಪುಣೆ ಮತ್ತು ಬೆಂಗಳೂರು-ವೈಜಾಗ್​ ಕ್ಲಾಸ್​ ಸಿ ಮಾರ್ಗದಲ್ಲಿ ವರ್ಗೀಕರಣಗೊಂಡಿದ್ದ ಕನಿಷ್ಠ 3 ಸಾವಿರ ರೂ. ಮತ್ತು ಗರಿಷ್ಠ 9 ಸಾವಿರ ರೂ. ದರಗಳು ನಿಗದಿಯಾಗಿವೆ.

    ಕ್ಲಾಸ್​ ಡಿ ಎಂದು ವರ್ಗೀಕರಣಗೊಂಡಿರುವ ಬೆಂಗಳೂರು-ಅಹಮದಾಬಾದ್​, ಬೆಂಗಳೂರು-ಭೋಪಾಲ್​, ಬೆಂಗಳೂರು-ಭುವನೇಶ್ವರ, ಬೆಂಗಳೂರು-ಇಂದೋರ್​, ಬೆಂಗಳೂರು-ರಾಯ್ಪುರ ಮಾರ್ಗಗಳಿಗೆ ಕನಿಷ್ಠ 3,500 ರೂ.ನಿಂದ ಗರಿಷ್ಠ 10 ಸಾವಿರ ರೂ.ವರೆಗೆ ಟಿಕೆಟ್​ ದರಗಳನ್ನು ನಿಗದಿಪಡಿಸಲಾಗಿದೆ.

    ಬೆಂಗಳೂರು-ಅಮೃತಸರ, ಬೆಂಗಳೂರು-ದೆಹಲಿ, ಬೆಂಗಳೂರು-ಜೈಪುರ, ಬೆಂಗಳೂರು-ಲಖನೌ, ಬೆಂಗಳೂರು-ಪಟನಾ ಮತ್ತು ಬೆಂಗಳೂರು-ರಾಂಚಿ ಕ್ಲಾಸ್​ ಇ ವರ್ಗದ ಮಾರ್ಗಗಳಾಗಿದ್ದು, ಕನಿಷ್ಠ 4,500 ರೂ. ಮತ್ತು ಗರಿಷ್ಠ 13 ಸಾವಿರ ರೂ. ದರ ನಿಗದಿಯಾಗಿದೆ.
    ಕ್ಲಾಸ್​ ಎಫ್​ನಲ್ಲಿ ವರ್ಗೀಕರಣಗೊಂಡಿರುವ ಅಮೃತಸರ-ಬೆಂಗಳೂರು, ಬೆಂಗಳೂರು-ಅಗರ್ತಲಾ, ಬೆಂಗಳೂರು-ಚಂಡಿಗಢ, ಬೆಂಗಳೂರು-ದೆಹ್ರಾಡೂನ್​, ಬೆಂಗಳೂರು-ಗುವಾಹಟಿ, ಬೆಂಗಳೂರು-ಇಂಫಾಲಾ ಮತ್ತು ಬೆಂಗಳೂರು-ವಾರಾಣಸಿ ಮಾರ್ಗಗಳಿಗೆ ಕನಿಷ್ಠ 5,500 ರೂ.ನಿಂದ ಗರಿಷ್ಠ 15,700 ರೂ. ಟಿಕೆಟ್​ ದರಗಳನ್ನು ನಿಗದಿಪಡಿಸಲಾಗಿದೆ.

    ಇದನ್ನೂ ಓದಿ: ಬಾಲಕಿಯಿಂದಾಗಿ ಜೆಡಿಎಸ್​ ಶಾಸಕ ಸಿ.ಎಸ್​.ಪುಟ್ಟರಾಜು ಸ್ವಗ್ರಾಮ ಕಂಪ್ಲೀಟ್​ ಸೀಲ್​ ಡೌನ್​!

    ಬೆಂಗಳೂರಿನಿಂದ ಯಾವುದೇ ಭಾಗದ ಮಾರ್ಗವು ಕ್ಲಾಸ್​ ಜಿ ವರ್ಗದಲ್ಲಿ ಬರುವುದಿಲ್ಲ. ಆದರೆ, ಈ ವರ್ಗದಲ್ಲಿ ಬರುವ ದೆಹಲಿ-ಕೋಯಮತ್ತೂರು, ದೆಹಲಿ-ತಿರುವನಂತಪುರ, ದೆಹಲಿ-ಪೋರ್ಟ್​ಬ್ಲೇರ್​ ಮಾರ್ಗಗಳಿಗೆ ಕನಿಷ್ಠ 6,500 ರೂ.ನಿಂದ ಗರಿಷ್ಠ 18,600 ರೂ. ದರಗಳು ನಿಗದಿಯಾಗಿವೆ.

    ಈ ಎಲ್ಲ ದರಗಳು ಬಳಕೆದಾರರ ಅಭಿವೃದ್ಧಿ ಶುಲ್ಕ (ಯುಡಿಎಫ್​), ಪ್ರಯಾಣಿಕರ ಸೇವಾ ಶುಲ್ಕ (ಪಿಎಸ್​ಎಫ್​) ಮತ್ತು ಜಿಎಸ್​ಟಿಯನ್ನು ಹೊರತಾಗಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    ಅಂಫಾನ್ ಚಂಡಮಾರುತಕ್ಕೆ 84 ಬಲಿ: ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts