More

    ಆನೆಗೆ ಸ್ಫೋಟಕ ತುಂಬಿದ್ದ ಅನಾನಸ್​ ತಿನ್ನಿಸಿದವರ ರಾಜ್ಯದಲ್ಲಿ ಮತ್ತೊಂದು ವಿಕೃತಿ

    ತಿರುವನಂತಪುರ: ಗರ್ಭಿಣಿ ಆನೆಗೆ ಸ್ಫೋಟಕ ಇರಿಸಿದ್ದ ಅನಾನಸ್​ ತಿನ್ನಿಸಿ, ಸಾಯಿಸಿದ ಕೇರಳ ರಾಜ್ಯದಲ್ಲಿ ಇದೀಗ ಸಾಕುನಾಯಿಯೊಂದರ ಬಾಯಿಗೆ ಇನ್ಸುಲೇಷನ್​ ಟೇಪ್​ನ ಎರಡ್ಮೂರು ಪದರ ಸುತ್ತಿ ವಿಕೃತಿ ಮೆರೆಯಲಾಗಿದೆ.

    ಮೂರು ವರ್ಷದ ಈ ನಾಯಿಯನ್ನು ಪ್ರಾಣಿಗಳ ಕ್ಷೇಮಾಭಿವೃದ್ಧಿ ಸೇವೆಗಳ ಸಂಘಟನೆ ಸದಸ್ಯರು ರಕ್ಷಿಸಿ, ಟೇಪ್​ ಅನ್ನು ತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಹಲವು ಪದರಗಳಲ್ಲಿ ಇನ್ಸುಲೇಷನ್​ ಟೇಪ್​ ಅನ್ನು ಸುತ್ತಿದ್ದರಿಂದ ಬಾಯಿ ತೆರೆಯಲಾಗದೆ, ಏನನ್ನೂ ತಿಂದು, ಕುಡಿಯಲು ಸಾಧ್ಯವಾಗದೆ ಪರದಾಡುತ್ತಿತ್ತು. ಹಲವು ದಿನಗಳಿಂದ ಹಸಿವಿನಿಂದ ಕಂಗಾಲಾಗಿದ್ದ ಈ ನಾಯಿಯ ಮೂಳೆಗಳು ಕಾಣಿಸಲಾರಂಭಿಸಿದ್ದವು.

    ಇದನ್ನೂ ಓದಿ: ಬೆಂಗಳೂರಿನ ಬನಶಂಕರಿಯಲ್ಲಿ ಚಿರತೆ ಕಾಣಿಸಿಕೊಂಡಿತಾ? ನಿಜಾನಾ, ಸುಳ್ಳಾ?

    ತ್ರಿಶೂರು ಜಿಲ್ಲೆಯ ಒಲೂರು ಎಂಬಲ್ಲಿ ರಸ್ತೆಯಲ್ಲಿ ದಿಕ್ಕುದೆಸೆಯಿಲ್ಲದ ತಿರುಗಾಡುತ್ತಿದ್ದ ಈ ನಾಯಿಯನ್ನು ಅನುಕಂಪಗೊಂಡ ಜನರು, ಅದರ ರಕ್ಷಣೆಗೆ ಮುಂದಾದಾಗ ಟೇಪ್​ ಅನ್ನು ತೆಗೆಸಿಕೊಳ್ಳಲು ಸಹಕರಿಸಿತು. ಟೇಪ್​ ಅನ್ನು ತೆಗೆಯುವಾಗ ಅದರ ಮೂತಿಯ ಚರ್ಮ ಕೂಡ ಕಿತ್ತುಕೊಂಡು ಬಂದಿತು ಎನ್ನಲಾಗಿದೆ.

    ಟೇಪ್​ ತೆಗೆದು, ನೀರನ್ನು ಕೊಡುತ್ತಲೇ ಅದು ಎರಡು ಲೀಟರ್​ನಷ್ಟು ನೀರು ಕುಡಿದಿದೆ. ಅದಕ್ಕೆ ಒಂದಷ್ಟು ಆಹಾರ ಕೊಟ್ಟು, ಹೆಚ್ಚಿನ ಚಿಕಿತ್ಸೆಗಾಗಿ ಪಶುಚಿಕಿತ್ಸಾಲಯಕ್ಕೆ ದಾಖಲಿಸಲಾಗಿದೆ. ಇದೀಗ ಅದು ಚೇತರಿಸಿಕೊಳ್ಳುತ್ತಿದೆ.

    ನಾಯಿಯ ಕತ್ತಿನ ಸುತ್ತ ಬೆಲ್ಟ್​ ಅನ್ನು ಕಟ್ಟಲಾಗಿತ್ತು. ಇದನ್ನು ಗಮನಿಸಿದಾಗ ಇದೊಂದು ಸಾಕು ನಾಯಿ ಇರಬೇಕು ಎನಿಸುತ್ತದೆ. ಆದ್ದರಿಂದ, ಈ ನಾಯಿಯನ್ನು ತಾವೇ ಸಾಕಿಕೊಳ್ಳಲು ಸ್ಥಳೀಯರೊಬ್ಬರು ನಿರ್ಧರಿಸಿದ್ದಾರೆ.

    ನೋಡಿದಿರಾ… ಶ್ವೇತವರ್ಣದ ಮಯೂರ ನಾಟ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts