More

    ಕರೊನಾ ಸೋಂಕಿತ ಮೃತದೇಹವನ್ನು ಎಳೆದಾಡಿದ ನಾಯಿಗಳು… ಬೆಚ್ಚಿಬಿದ್ದ ಸ್ಥಳೀಯರು!

    ಶಿವಮೊಗ್ಗ: ಇಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳ ಎಡವಟ್ಟಿನಿಂದಾಗಿ ರಾತ್ರಿಯಿಡೀ ಆತಂಕದಲ್ಲೇ ಕಾಲಕಳೆದ ಸ್ಥಳೀಯರು ಇಂದು ಬೆಳ್ಳಂಬೆಳಗ್ಗೆ ಬೀದಿಗೆ ಇಳಿದು ಆಕ್ರೋಶ ಹೊರಹಾಕಿದರು.

    ಶುಕ್ರವಾರ ಕರೊನಾಗೆ ಬಲಿಯಾದ ಗಾಂಧಿಬಜಾರ್​ನ ಕಸ್ತೂರಬಾ ರಸ್ತೆಯ 62 ವರ್ಷದ ವ್ಯಕ್ತಿಯೊಬ್ಬರ ಮೃತದೇಹವನ್ನು ರೋಟರಿ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲು ಬಂದ ಅಧಿಕಾರಿಗಳು ಸಂಪೂರ್ಣ ದಹಿಸದೇ ಅರ್ಧಕ್ಕೆ ಬಿಟ್ಟು ಹೋಗಿದ್ದರು. ಅರೆಬಂದ ಸ್ಥಿಯಲ್ಲಿದ್ದ ಮೃತದೇಹವನ್ನು ಮಧ್ಯರಾತ್ರಿ ನಾಯಿಗಳು ಎಲೆದಾಡಿದ್ದು, ಭಯಗೊಂಡ ಸ್ಥಳೀಯರು ರಾತ್ರೋರಾತ್ರಿ ಸಿಬ್ಬಂದಿಯನ್ನು ಕರೆಸಿ ಮತ್ತೊಮ್ಮೆ ಶವ ಸುಟ್ಟಿಸಿದ್ದಾರೆ. ಇದನ್ನೂ ಓದಿರಿ ಕರೊನಾ ಸೋಂಕಿತನ ಬಾಯಿಗೆ ಬಾಯಿ ಇಟ್ಟರು, ಕಿರುನಾಲಿಗೆಯನ್ನು ಬರಿಗೈಲಿ ತಿಕ್ಕಿದರು… ಬೆಚ್ಚಿಬೀಳಿಸುತ್ತೆ ಪ್ರೈಮರಿ ಕಾಂಟ್ಯಾಕ್ಟ್

    ಆಗಿದ್ದೇನು: ಶುಕ್ರವಾರ ಕರೊನಾ ಸೋಂಕಿನಿಂದ ಮೃತಪಟ್ಟವನ ಅಂತ್ಯಕ್ರಿಯೆಯನ್ನು ಸ್ಥಳೀಯರ ವಿರೋಧದ ನಡುವೆಯೂ ಮಹಾನಗರ ಪಾಲಿಕೆ ಅಧಿಕಾರಿಗಳು ರೋಟರಿ ಚಿತಾಗಾರದಲ್ಲಿ ನೆರವೇರಿಸಿದ್ದಾರೆ. ಈ ವೇಳೆ ಮೃತದೇಹವನ್ನು ಪೂರ್ಣವಾಗಿ ದಹನ ಮಾಡದೇ ಅರ್ಧಕ್ಕೆ ಬಿಟ್ಟು ಹೋಗಿದ್ದು, ನಾಯಿಗಳು ಅರೆಬೆಂದ ಶವವನ್ನು ಎಳೆದಾಡಿವೆ.

    ಕರೊನಾ ಸೋಂಕಿತ ಮೃತದೇಹವನ್ನು ಎಳೆದಾಡಿದ ನಾಯಿಗಳು... ಬೆಚ್ಚಿಬಿದ್ದ ಸ್ಥಳೀಯರು!ಇದನ್ನು ಕಂಡ ಸ್ಥಳೀಯರು ಪಾಲಿಕೆ ಪ್ರತಿಪಕ್ಷದ ನಾಯಕ ಎಚ್.ಸಿ.ಯೋಗೇಶ್ ಅವರ ಗಮನಕ್ಕೆ ತಂದಿದ್ದು, ಕೂಡಲೇ ಸ್ಥಳಕ್ಕೆ ಬಂದ ಅವರು ಪಾಲಿಕೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಚಿತಾಗಾರಕ್ಕೆ ಅಧಿಕಾರಿಗಳನ್ನು ಮಧ್ಯರಾತ್ರಿ ಸುಮಾರು 1.30ಕ್ಕೆ ಕರೆಯಿಸಿ ಅಂತ್ಯಕ್ರಿಯೆ ಪೂರ್ಣ ಗೊಳಿಸಿದರು. ಈ ವೇಳೆ ಪಿಪಿಇ ಕಿಟ್​ಗಳನ್ನು ಸಿಬ್ಬಂದಿ ಅಲ್ಲಿಯೇ ಬಿಟ್ಟು ಹೋಗುವ ಮೂಲಕ ಮತ್ತೊಂದು ಎಡವಟ್ಟು ಮಾಡಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದರು.

    ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಆಕ್ರೋಶಗೊಂಡ ರಾಜೀವ್ ಗಾಂಧಿ ಬಡಾವಣೆ ನಿವಾಸಿಗಳು ಇಂದು(ಶುಕ್ರವಾರ) ಬೆಳಗ್ಗೆ ಬಿಎಚ್ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು.

    ಬಸ್​ ನಿಲ್ದಾಣದಲ್ಲೇ ಕರೊನಾ ಶಂಕಿತನ ಶವ ಬಿಟ್ಟು ಹೋದರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts