More

    ಮಾರಕ ಇಂಜೆಕ್ಷನ್​ ನೀಡಿ ಮಾಲೀಕನಿಂದ ನಾಯಿಯ ಜೀವಂತ ಸಮಾಧಿ: ನಡೆಯಿತು ಪವಾಡ..!

    ಮಾಸ್ಕೋ: ಮನುಷ್ಯತ್ವವೇ ಇಲ್ಲದ ಮಾಲೀಕನೊಬ್ಬ ತನ್ನ ಸಾಕು ನಾಯಿಗೆ ಮಾರಣಾಂತಿಕ ಚುಚ್ಚುಮದ್ದು ನೀಡಿ ಜೀವಂತ ಸಮಾಧಿ ಮಾಡಿದ ಘಟನೆ ರಷ್ಯಾದಲ್ಲಿ ನಡೆದಿದ್ದು, ಯಾವ ದೇವರ ಕೃಪೆಯೋ? ಅದೇನೋ ಪವಾಡವೋ? ದಿಟ್ಟ ಶ್ವಾನವು ಸಮಾಧಿಯನ್ನೇ ಅಗೆದು ತನ್ನಷ್ಟಕ್ಕೆ ತಾನೇ ಅಪಾಯದಿಂದ ಪಾರಾಗಿದೆ.

    ಸಮಾಧಿಯಿಂದ ಹೊರ ಬಂದು ರಸ್ತೆ ಬದಿಯಲ್ಲಿ ಸಹಾಯದ ನಿರೀಕ್ಷೆಯಲ್ಲಿದ್ದ ಕಿರ್ಯುಶಾ ಹೆಸರಿನ 7 ವರ್ಷದ ಜರ್ಮನ್​ ಶೆಫರ್ಡ್​ ಶ್ವಾನವನ್ನು ದಕ್ಷಿಣ ರಷ್ಯಾದ ಹೆದ್ದಾರಿಯಲ್ಲಿ ಮೋಟರಿಸ್ಟ್​ ಒಲ್ಗಾ ಲ್ಯಾಸ್ಟ್​ಸೆವಾ (39) ಎಂಬುವರು ನೋಡಿ ರಕ್ಷಿಸಿದ್ದಾರೆ.

    ತುಂಬಾ ದಣಿದಿದ್ದ ಶ್ವಾನಕ್ಕೆ ಮೊದಲು ಸ್ವಲ್ಪ ಆಹಾರ ನೀಡಿ ಸಂತೈಸಿದ ಒಲ್ಗಾ, ಬಳಿಕ ಕಾರಿನ ಹಿಂಬದಿಯ ಸೀಟಿನಲ್ಲಿ ಕೂರಿಸಿ ಮನೆಗೆ ತೆರಳಿದರು. ಘಟನಾ ಸ್ಥಳದಿಂದ ಸುಮಾರು 93 ಕಿ.ಮೀ ದೂರದ ಉಖ್ತಾ ನಗರದ ಶ್ವಾನ ರಕ್ಷಣಾ ಕೇಂದ್ರಕ್ಕೆ ಶ್ವಾನವನ್ನು ಹಸ್ತಾಂತರಿಸಿದರು. ದಾರಿಯುದ್ದಕ್ಕೂ ಶ್ವಾನ ನಿದ್ರಿಸುತ್ತಾ ವಿಶ್ರಾಂತಿ ಪಡೆಯಿತು.

    ಇದನ್ನೂ ಓದಿ: ಮೋದಿ ಸರ್ಕಾರದಲ್ಲಿ ಮಿತ್ರಪಕ್ಷಗಳ ಸಂಖ್ಯೆ ಇಳಿಕೆ!: ಅಠವಳೆ ಬಿಟ್ಟು ಉಳಿದೆಲ್ಲ ಸಚಿವರು ಬಿಜೆಪಿಯವರು

    ಬಳಿಕ ಶ್ವಾನ ರಕ್ಷಣಾ ಕೇಂದ್ರ ಶ್ವಾನದ ಫೋಟೋಗಳನ್ನು ಪ್ರಚಾರ ಮಾಡಲು ಆರಂಭಿಸಿತು. ಬಳಿಕ ಅದರ ಮಾಲೀಕ ಸಂಪರ್ಕಕ್ಕೆ ಬಂದು ಶ್ವಾನವೂ ಅನಾರೋಗ್ಯಕ್ಕೀಡಾಗಿದ್ದರಿಂದ ಸಾಯಿಸಲು ಯತ್ನಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಡ್ರಗ್ಸ್​ ಇಂಜೆಕ್ಟ್​ ಮಾಡಿ ಉಖ್ತಾ ಮತ್ತು ಸ್ಕೈಟೈವ್ಕರ್​ ನಡುವಿನ ರಿಮೋಟ್​ ಏರಿಯಾದಲ್ಲಿ ಜೀವಂತ ಸಮಾಧಿ ಮಾಡಿದ್ದಾಗಿ ಹೇಳಿದ್ದಾರೆ.

    ಇದೀಗ ತಪ್ಪಿನ ಅರಿವಾಗಿ ಮಾಲೀಕ ಕ್ಷಮೆ ಕೋರಿದ್ದಾರೆಂದು ಶ್ವಾನ ರಕ್ಷಣಾ ಕೇಂದ್ರ ತಿಳಿಸಿದೆ. ಶ್ವಾನವನ್ನು ಪರೀಕ್ಷಿಸಿದಾಗ ಯಾವುದೇ ಗಂಭೀರ ವೈದ್ಯಕೀಯ ಸಮಸ್ಯೆ ಇಲ್ಲದಿರುವುದು ಮತ್ತು ಆರೋಗ್ಯವಾಗಿರುವುದು ಕಂಡುಬಂದಿದೆ. ಇನ್ನು ಶ್ವಾನವನ್ನು ರಕ್ಷಿಸಿ ಮಾನವೀಯತೆ ಪ್ರದರ್ಶಿಸಿದ ಒಲ್ಗಾರಿಗೆ ರಕ್ಷಣಾ ಕೇಂದ್ರ ಧನ್ಯವಾಗಳನ್ನು ತಿಳಿಸಿದೆ. (ಏಜೆನ್ಸೀಸ್​)

    VIDEO| ಕಂಠಪೂರ್ತಿ ಕುಡಿದು ದಂಪತಿಯಿಂದ ಕಾರು ಚಾಲನೆ: ನಸುಕಿನ ಜಾವವೇ ನಡೆಯಿತು ಭೀಕರ ಅಪಘಾತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts