More

    ಶ್ವಾನಕ್ಕೆ ಅನ್ನ ಹಾಕುತ್ತಿದ್ದ ಬಾಲಕರೇ ಶ್ವಾನ ಸಂಭೋಗಿಯನ್ನು ಹಿಡಿದುಕೊಟ್ಟರು

    ಥಾಣೆ : ಪ್ರಾಣಿ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೆ ದಿನೇ ಹೆಚ್ಚಾಗುತ್ತಲೇ ಇವೆ. ಅಹಿತಕರ ಘಟನೆಯಲ್ಲಿ 40 ವರ್ಷದ ಕಾಮಪೀಪಾಸುವೊಬ್ಬ ಮಹಾರಾಷ್ಟ್ರದ ಥಾಣೆಯಲ್ಲಿ ಬೀದಿನಾಯಿಯೊಂದಿಗೆ ಸಂಭೋಗ ನಡೆಸಿ ಸಿಕ್ಕಿಬಿದ್ದಿದ್ದಾನೆ.
    ಮಂಗಳವಾರ ಸಂಜೆ 4: 30 ಗಂಟೆಗೆ ಇಲ್ಲಿಯ ವ್ಯಾಗ್ಲೆ ಎಸ್ಟೇಟ್‌ ಸಮೀಪ ಸೇತುವೆಯೊಂದರ ಮೇಲೆ ಈ ಘಟನೆ ನಡೆದಿದೆ. ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಅದಿತಿ ನಾಯರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಆರೋಪಿ ಬಂಧಿಸಲಾಗಿದೆ.
    ಪೊಲೀಸರು ನೀಡಿದ ಮಾಹಿತಿ ಪ್ರಕಾರ, ವಾಗ್ಲೆ ಎಸ್ಟೇಟ್ ರಸ್ತೆ ಸಮೀಪ ವಾಸಿಸುತ್ತಿರುವ ಆರೋಪಿ ಕಸಗೂಡಿಸುವ ಕೆಲಸ ಮಾಡಿ ಜೀವನ ಸಾಗಿಸುತ್ತಾನೆ. ಮಂಗಳವಾರ ಆರೋಪಿ ಪ್ರಾಣಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.

    ಇದನ್ನೂ ಓದಿ:ಸ್ನಾತಕೊತ್ತರ ಪದವೀಧರರೆ? ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ನಲ್ಲಿದೆ 55 ಸಾವಿರ ರೂ. ಸಂಬಳದ ಉದ್ಯೋಗ

    ಬೀದಿ ನಾಯಿಗಳಿಗೆ ಪ್ರತಿನಿತ್ಯ ಅನ್ನಹಾಕುವ ಕೆಲ ಹುಡುಗರು ಈ ಘಟನೆ ಕಂಡು ತಕ್ಷಣವೇ ನಾಯರ್‌ಗೆ ಮಾಹಿತಿ ನೀಡಿದ್ದಾರೆ. ನಾಯರ್ ಆರೋಪಿಯ ಕುರಿತು ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾರೆ.
    ಆದರೆ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲು ಪೊಲೀಸರು ಆರಂಭದಲ್ಲಿ “ಹಿಂಜರಿದಿದ್ದರು. ನಂತರ ನಾಯರ್, ಥಾಣೆ ಪೊಲೀಸ್ ಆಯುಕ್ತ ವಿವೇಕ್ ಫನಸಲ್ಕರ್ ಅವರನ್ನು ಸಂಪರ್ಕಿಸಿದ್ದಾರೆ. ಫನ್ಸಲ್ಕರ್, ಸಂಬಂಧಪಟ್ಟ ಪೊಲೀಸರಿಗೆ ತಕ್ಷಣವೇ ಈ ಕುರಿತು ಕಾರ್ಯನಿರ್ವಹಿಸಲು ಖಡಕ್ಕಾಗಿ ಹೇಳಿದ್ದಾರೆ.
    ಬುಧವಾರ ಅಪರಾಧಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಪ್ರಕಾಶ್ ನಿಲೇವಾಡ್ ತಿಳಿಸಿದ್ದಾರೆ.

    ಚೀನಾ ಯುದ್ಧನೆಲೆಗಳ ಮೇಲೆ ಭಾರತದ ಉಪಗ್ರಹದ ಕಣ್ಣು; ಹಲವೆಡೆ ಭಾರಿ ಚಟುವಟಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts