More

    ಎಕ್ಸಿಟ್ ಪೋಲ್: ಡಿಎಂಕೆ ತೆಕ್ಕೆಗೆ ತಮಿಳುನಾಡು; ಸಿಎಂ ಆಗ್ತಾರಾ ಕರುಣಾನಿಧಿ ಪುತ್ರ ಸ್ಟಾಲಿನ್?

    ನವದೆಹಲಿ: ಪಂಚರಾಜ್ಯಗಳ ಮತದಾನಕ್ಕೆ ಗುರುವಾರ ತೆರೆ ಬಿದ್ದ ಬೆನ್ನಲ್ಲೇ ವಿವಿಧ ಸಂಸ್ಥೆಗಳು ನಡೆಸಿದ ಮತದಾನೋತ್ತರ ಸಮೀಕ್ಷೆಗಳ ಫಲಿತಾಂಶಗಳು ಹೊರಬಿದ್ದಿವೆ. ತಮಿಳುನಾಡಿನಲ್ಲಿ ಕಳೆದೆರಡು ಅವಧಿಗಳಿಂದ ಅಧಿಕಾರದಲ್ಲಿದ್ದ ಎಐಎಡಿಎಂಕೆಯನ್ನು ಅಲ್ಲಿನ ಮತದಾರರು ತಿರಸ್ಕರಿಸಿದ್ದಾರೆ ಎಂಬುದು ಬಹುತೇಕ ಎಲ್ಲ ಸಮೀಕ್ಷೆಗಳಿಂದ ದೃಢಪಟ್ಟಿದೆ. ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪುತ್ರ, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಮುಂದಿನ ಮುಖ್ಯಮಂತ್ರಿಯಾಗುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತಿವೆ. ಅವರ ನೇತೃತ್ವದ ಡಿಎಂಕೆಯು ಈಗ ಆಡಳಿತದಲ್ಲಿರುವ ಎಐಎಡಿಎಂಕೆ ಪಕ್ಷದ ವಿರುದ್ಧ ಹೆಚ್ಚು ಸ್ಥಾನಗಳನ್ನು ಗೆದ್ದು ಗದ್ದುಗೆ ಹಿಡಿಯಲಿದೆ ಎಂದಿವೆ ಸಮೀಕ್ಷೆಗಳು.

    ರಾಜ್ಯದಲ್ಲಿ ಸ್ಟಾಲಿನ್ ಸಿಎಂ ಗದ್ದುಗೆ ಏರಲಿರುವುದು ಇದೇ ಮೊದಲ ಸಲವಾಗಲಿದೆ. ಪ್ರತಿ ಬಾರಿ ಸಾರ್ವತ್ರಿಕ ಚುನಾವಣೆ ಎದುರಾದಾಗಲೂ ಒಮ್ಮೆ ಡಿಎಂಕೆ, ಇನ್ನೊಮ್ಮೆ ಎಐಎಡಿಎಂಕೆ ಪಕ್ಷಗಳನ್ನು ಅಲ್ಲಿನ ಜನ ಆರಿಸುತ್ತ ಬಂದಿದ್ದರು. ಆದರೆ ಕಳೆದ ಬಾರಿ ಮಾತ್ರ ಮಾಜಿ ಸಿಎಂ ಜಯಲಲಿತಾ ಸಾವಿನ ಹಿನ್ನೆಲೆಯಲ್ಲಿ ಸತತ ಎರಡನೇ ಬಾರಿಗೆ ಎಐಎಡಿಎಂಕೆ ಅಧಿಕಾರಕ್ಕೆ ಬಂದಿತ್ತು. ಆದರೆ, ಜಯಲಲಿತಾ ನಿಧನದ ಬಳಿಕ ಪಕ್ಷದಲ್ಲಿ ಆಂತರಿಕ ಗುಂಪುಗಾರಿಕೆ ಹೆಚ್ಚಾಗಿದ್ದರ ಪರಿಣಾಮ ಈ ಸಲ ಮತ್ತೆ ಮೊದಲಿನಂತೆ ಅಧಿಕಾರಾರೂಢ ಪಕ್ಷವನ್ನು ದೂರವಿಡಲು ಮತದಾರ ನಿರ್ಧರಿಸಿದ್ದಾನೆ ಎಂಬುದು ಸಮೀಕ್ಷೆಗಳ ಅಭಿಮತ.

    ಪಶ್ಚಿಮ ಬಂಗಾಳದಲ್ಲಿ ಮತ್ತೆ ದೀದಿಯದ್ದೇ ದರ್ಬಾರ್​! ಆದರೆ 3ರಿಂದ 115ಕ್ಕೇರಿದ ಬಿಜೆಪಿ ಬಲ!

    ಕರೊನಾ ಪಂಥಾಹ್ವಾನ ಎದುರಿಸಲು ಕಮಲ್‌ ಪಂತ್:‌ ಡಿಜಿಪಿ ಆಗಿ ಬಡ್ತಿ ಸಿಕ್ಕರೂ ಕಮಿಷನರ್‌ ಆಗಿಯೇ ಮುಂದುವರಿಕೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts