More

    ಪ್ರಶಾಂತ್ ನೀಲ್ ಜತೆ ವಿಜಯ್ ಸಿನಿಮಾ?

    ಬೆಂಗಳೂರು: ‘ಕೆಜಿಎಫ್’ ಚಿತ್ರದ ನಂತರ ನಿರ್ದೇಶಕ ಪ್ರಶಾಂತ್ ನೀಲ್​ಗೆ ಎಲ್ಲ ಭಾಷೆಯ ಚಿತ್ರರಂಗಗಳಿಂದಲೂ ಬೇಡಿಕೆ ಹೆಚ್ಚಾಗಿರುವುದು ಗೊತ್ತಿರುವ ವಿಚಾರ. ಈಗಾಗಲೇ ತೆಲುಗು, ತಮಿಳಿನ ಹಲವು ನಿರ್ವಪಕರು ಅವರ ಜತೆ ಕೆಲಸ ಮಾಡುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಇದೀಗ ನಿರ್ವಪಕ ದಿಲ್​ರಾಜು, ವಿಜಯ್ ಸಿನಿಮಾ ನಿರ್ವಣಕ್ಕಿಳಿದಿದ್ದಾರೆ. ಆ ಬಿಗ್ ಬಜೆಟ್ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರಂತೆ!

    ತೆಲುಗಿನ ಹಲವು ಸ್ಟಾರ್ ಹೀರೋಗಳ ಜತೆಗೆ ಪ್ರಶಾಂತ್ ನೀಲ್ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳೂ ಈ ಹಿಂದಿನಿಂದಲೂ ಕೇಳಿಬಂದಿದ್ದವು. ಅದರಂತೆ ಪ್ರಭಾಸ್ ಜತೆಗೆ ‘ಸಲಾರ್’ ಸಿನಿಮಾದಲ್ಲಿ ಬಿಜಿಯಾಗಿದ್ದಾರವರು. ಹೀಗಿರುವಾಗಲೇ ಇದೀಗ ಹೊಸದಾಗಿ ಪ್ರಶಾಂತ್ ಹೆಸರು ವಿಜಯ್ ಚಿತ್ರದೊಂದಿಗೆ ತಳುಕು ಹಾಕಿಕೊಂಡಿದೆ. ಸದ್ಯ ವಿಜಯ್ 65ನೇ ಸಿನಿಮಾ ಶೂಟಿಂಗ್​ನಲ್ಲಿದ್ದಾರೆ. ಇದಾದ ಬಳಿಕ 66ನೇ ಚಿತ್ರವನ್ನು ಬೇರೆಯವರು ನಿರ್ವಿುಸಿ- ನಿರ್ದೇಶಿಸಲಿದ್ದು, 67ನೇ ಚಿತ್ರವನ್ನು ದಿಲ್​ರಾಜು ನಿರ್ಮಾಣ ಮಾಡಿದರೆ, ಪ್ರಶಾಂತ್ ನೀಲ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಇದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿಯೇ ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾ ಮಾಡುವ ಪ್ಲಾನ್ ನಡೆಯುತ್ತಿದ್ದು, ಪ್ರಶಾಂತ್ ನೀಲ್, ವಿಜಯ್ ಮತ್ತು ದಿಲ್​ರಾಜು ಈಗಾಗಲೇ ಚಿತ್ರದ ಬಗ್ಗೆ ಒಂದು ಹಂತದ ಚರ್ಚೆ ನಡೆಸಿದ್ದಾರಂತೆ. ಒಂದು ವೇಳೆ ಇದು ಅಧಿಕೃತವಾದರೆ, ವಿಜಯ್ ಅಭಿಮಾನಿಗಳಿಗೆ ಈ ವಿಚಾರ ಹಬ್ಬವೇ ಸರಿ.

    ಬಿಗ್​ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು ಮದುವೆ ವಿವಾದ ತಾರಕಕ್ಕೇರಿದ ಬೆನ್ನಲ್ಲೇ ಮಹತ್ವದ ಫೋಟೋಗಳು ವೈರಲ್​

    ಏರ್​ಪೋರ್ಟ್​ನಲ್ಲಿ ಕ್ಯಾಬ್​ ಚಾಲಕನಿಂದ ಆತ್ಮಹತ್ಯೆ ಯತ್ನ; ಕಾರಣದ ಸುಳಿವು ನೀಡಿತು ಚಾಲಕರ ಈ ಆಕ್ರೋಶ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts