More

    ಕರ್ನಾಟಕದಲ್ಲಿ ಪೆಟ್ರೋಲ್​-ಡೀಸೆಲ್ ಬೆಲೆ ಇಳಿಯುತ್ತಾ?

    ಬೆಂಗಳೂರು: ಬಿಜೆಪಿಯೇತರ ರಾಜ್ಯಗಳಲ್ಲಿ ಇಂಧನದ ಮೇಲಿನ ತೆರಿಗೆ ತಗ್ಗಿಸುವ ಮೂಲಕ ಪೆಟ್ರೋಲ್​-ಡೀಸೆಲ್ ದರ ಇಳಿಕೆ ಮಾಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಮನವಿ ಮಾಡಿಕೊಂಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಪೆಟ್ರೋಲ್​-ಡೀಸೆಲ್​ ಬೆಲೆ ಇಳಿಯುತ್ತಾ ಎಂಬ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿದ್ದಾರೆ. ಇಂಥ ನಿರ್ಣಯಗಳಲ್ಲಿ ರಾಜ್ಯದ ಆರ್ಥಿಕತೆಯನ್ನೂ ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ, ಆ ಆಧಾರದ ಮೇಲೆ ಮುಂದಿನ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂಬುದಾಗಿ ಅವರು ಹೇಳಿದ್ದಾರೆ.

    ಇಂಧನದ ಮೇಲಿನ ಮಾರಾಟ ತೆರಿಗೆ ಇಳಿಸುವಂತೆ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಅನುಗುಣವಾಗಿ ಕೆಲವು ರಾಜ್ಯಗಳು ತೆರಿಗೆ ಇಳಿಸಿವೆ ಎನ್ನುತ್ತ ಪ್ರಧಾನಿ ಕರ್ನಾಟಕದ ಉದಾಹರಣೆ ನೀಡಿದ್ದಾರೆ. ಅದೇ ರೀತಿ ಇತರ ರಾಜ್ಯಗಳೂ ಇಳಿಸಿದರೆ ನೆರೆರಾಜ್ಯಗಳಿಗೂ ಅನುಕೂಲವಾಗುತ್ತದೆ ಎಂದು ಸಿಎಂ ತಿಳಿಸಿದರು.

    2021ರ ನವೆಂಬರ್​ನಲ್ಲಿ ರಾಜ್ಯ ಸರ್ಕಾರ ಪೆಟ್ರೋಲ್ ಮೇಲಿನ ಸೇಲ್ಸ್​ ಟ್ಯಾಕ್ಸ್ ಶೇ. 35ರಿಂದ ಶೇ. 25.9ಕ್ಕೆ ಹಾಗೂ ಡೀಸೆಲ್ ಮೇಲಿನ ಸೇಲ್ಸ್​ ಟ್ಯಾಕ್ಸ್ ಶೇ. 24ರಿಂದ ಶೇ. 14.34ಕ್ಕೆ ಇಳಿಸಿತ್ತು. ಪರಿಣಾಮವಾಗಿ ಪೆಟ್ರೋಲ್ ಬೆಲೆ ಲೀಟರ್​ಗೆ 13.30 ಮತ್ತು ಡೀಸೆಲ್ ಬೆಲೆ 19.47 ಇಳಿಕೆ ಕಂಡಿತ್ತು.

    ಕನ್ನಡ ಚಿತ್ರವನ್ನೇಕೆ ಹಿಂದಿಗೆ ಡಬ್ ಮಾಡ್ತೀರಿ ಎಂದ ಅಜಯ್​ ದೇವಗನ್​; ನಾನು ಕನ್ನಡದಲ್ಲೇ ಪ್ರತಿಕ್ರಿಯಿಸಿದ್ದಿದ್ರೆ ಹೇಗಿರ್ತಿತ್ತು ಎಂದ ಕಿಚ್ಚ..

    ಕರ್ನಾಟಕದಲ್ಲಿದೆ ‘ನರೇಂದ್ರ ಮೋದಿ ನಿಲಯ’!; ಇಲ್ಲಿದೆ ವಿವರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts