More

    ಮತ್ತೊಂದು ಮಹಾಘಟಬಂಧನದ ಗುಟುರು; ಎಂಟನೇ ಸಲ ಸಿಎಂ ಆಗಲಿದ್ದಾರಾ ನಿತೀಶ್ ಕುಮಾರ್?

    ಬಿಹಾರ: ಬಿಜೆಪಿಯೊಂದಿಗೆ ಮೈತ್ರಿಯನ್ನು ಕಳೆದುಕೊಂಡಿರುವ ಜನತಾದಳ ಸಂಯುಕ್ತದ ನಾಯಕ ನಿತೀಶ್​ ಕುಮಾರ್​ ಎಂಟನೇ ಸಲ ಮುಖ್ಯಮಂತ್ರಿ ಆಗಲಿದ್ದಾರಾ ಎಂಬ ಕುತೂಹಲ ಇದೀಗ ಗರಿಗೆದರಿದೆ. ಅವರು ಮತ್ತೊಮ್ಮೆ ಮಹಾಘಟಬಂಧನದ ಗುಟುರು ಹಾಕಿರುವುದೇ ಇಷ್ಟಕ್ಕೆಲ್ಲ ಕಾರಣ.

    ಬಿಜೆಪಿ ಜತೆಗಿನ ಕೆಲವೊಂದು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ, ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾ ದಳ ಬಿಜೆಪಿಯಿಂದ ಬೇರ್ಪಟ್ಟಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್​ ಕುಮಾರ್​ ರಾಜೀನಾಮೆ ಕೂಡ ನೀಡಿದ್ದಾರೆ. ಇದರ ಬೆನ್ನಿಗೇ ಅವರೀಗ ಮಹಾಘಟಬಂಧನದ ಗುಟುರು ಹಾಕಿದ್ದಾರೆ.

    ನನ್ನ ಬಳಿ ಏಳು ಇತರ ಪಕ್ಷಗಳ 164 ಶಾಸಕರ ಬೆಂಬಲವಿದ್ದು, ಎಲ್ಲರೂ ಒಂದಾಗಿ ಮಹಾಘಟಬಂಧನ ಆಗಿಸಿಕೊಂಡು ಸರ್ಕಾರ ರಚಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಅವರು ಅಂದುಕೊಂಡಂತೆಯೇ ಆದಲ್ಲಿ ಅವರು ಎಂಟನೇ ಸಲ ಮುಖ್ಯಮಂತ್ರಿ ಆದಂತಾಗುತ್ತದೆ.

    2000ನೇ ಇಸವಿಯ ಮಾರ್ಚ್​ನಲ್ಲಿ ಮೊದಲ ಸಲ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ನಿತೀಶ್ ಕುಮಾರ್, 2005ರ ನವೆಂಬರ್​ನಲ್ಲಿ 2ನೇ ಸಲ, 2010ರ ನವೆಂಬರ್​ನಲ್ಲಿ 3ನೇ ಸಲ, 2015ರ ಫೆಬ್ರವರಿಯಲ್ಲಿ 4ನೇ ಸಲ, 2015ರ ನವೆಂಬರ್​ನಲ್ಲಿ 5ನೇ ಸಲ, 2017ರ ಜುಲೈನಲ್ಲಿ 6ನೇ ಸಲ, 2020ರ ನವೆಂಬರ್​ನಲ್ಲಿ 7ನೇ ಬಾರಿ ಅವರು ಮುಖ್ಯಮಂತ್ರಿ ಆಗಿದ್ದರು. ಇದೀಗ ಎಂಟನೇ ತಿಂಗಳಲ್ಲಿ ಇನ್ನೊಮ್ಮೆ ಸಿಎಂ ಆಗುವ ಅವಕಾಶ ಒದಗಿಬಂದರೆ 22 ವರ್ಷಗಳಲ್ಲಿ 8 ಸಲ ಬಿಹಾರದ ಮುಖ್ಯಮಂತ್ರಿ ಆದಂತಾಗುತ್ತದೆ.

    ಪತಿ ವಯಸ್ಸು 75, ಪತ್ನಿಗೆ 70; ಮದ್ವೆಯಾದ 54 ವರ್ಷಗಳ ಬಳಿಕ ಆಯ್ತು ಮೊದಲ ಮಗು!

    ಮುಖ್ಯಮಂತ್ರಿ ಬದಲಾವಣೆ ವಿಚಾರ: ಸಿಎಂ ರಾಜಕೀಯ ಕಾರ್ಯದರ್ಶಿ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts