More

    ರಾಜ್ಯದಲ್ಲಿ ಮತ್ತೆ ಲಾಕ್​ಡೌನ್?!; ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದ್ದೇನು?​

    ಬೆಂಗಳೂರು: ದೇಶ ಮಾತ್ರವಲ್ಲದೆ ರಾಜ್ಯದಲ್ಲೂ ಕರೊನಾ ಸೋಂಕಿನ ಪ್ರಕರಣಗಳು ವಿಪರೀತವಾಗಿದ್ದು, ಮತ್ತೆ ಲಾಕ್​ಡೌನ್​ ಆಗಲಿದೆಯೇ ಎಂಬ ಪ್ರಶ್ನೆಗಳು ಎಲ್ಲೆಡೆ ಹರಿದಾಡಲಾರಂಭಿಸಿದ್ದು, ಅದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸ್ಪಷ್ಟನೆಯನ್ನೂ ನೀಡಿದ್ದಾರೆ.

    ರಾಜ್ಯದಲ್ಲಿ ಕರೊನಾ ಪ್ರಕರಣಗಳು ವ್ಯಾಪಕವಾಗಿ ಹೆಚ್ಚಾಗುತ್ತಿದ್ದು, ಭಾನುವಾರ ಅದು 10 ಸಾವಿರವನ್ನು ದಾಟಿದೆ. ಹೀಗಾಗಿ ಜನರು ಅವರ ಒಳಿತಿಗಾಗಿ ಸರ್ಕಾರದ ಸೂಚನೆಗಳಿಗೆ ಸ್ಪಂದಿಸುವುದು ಅಗತ್ಯ. ಒಂದು ವೇಳೆ ಜನತೆ ಸಹಕರಿಸದಿದ್ದರೆ ನಾವು ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗುತ್ತದೆ. ಅಗತ್ಯವಾದರೆ ರಾಜ್ಯದಲ್ಲಿ ಮತ್ತೆ ಲಾಕ್​ಡೌನ್​ ವಿಧಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ.

    ಕೋವಿಡ್​ ನಿಯಂತ್ರಣ ಸಲುವಾಗಿ ಜನರೆಲ್ಲ ಮಾಸ್ಕ್​ ಧರಿಸಬೇಕು, ದೈಹಿಕ ಅಂತರ ಕಾಪಾಡಬೇಕು, ಸ್ಯಾನಿಟೈಸರ್​ ಬಳಸಬೇಕು ಎಂಬುದಾಗಿ ಕಿವಿಮಾತನ್ನೂ ಸಿಎಂ ಬಿಎಸ್​ವೈ ಹೇಳಿದ್ದಾರೆ. ಬೀದರ್​ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಯವರು ಈ ವಿಷಯವನ್ನು ತಿಳಿಸಿದರು.

    ಇದನ್ನೂ ಓದಿ: ಪ್ರಿಯ ಬೆಂಗಳೂರಿಗರೇ.. ಮನೆಯ ಹೆಂಗಸರ ಮಾತು ಕೇಳಿ: ಎಡಿಜಿಪಿ ಭಾಸ್ಕರ್ ರಾವ್ 

    ಮತ್ತೊಂದೆಡೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ನಾನು ಇಲ್ಲವೇ ಮುಖ್ಯಮಂತ್ರಿ ಇಬ್ಬರೂ ಲಾಕ್​ಡೌನ್​ಗೆ ಬಗ್ಗೆ ಒಲವು ಹೊಂದಿಲ್ಲ. ಸರ್ಕಾರಕ್ಕೆ ಕೂಡ ಲಾಕ್​ಡೌನ್ ಜಾರಿಗೊಳಿಸುವ ಇಂಗಿತವಿಲ್ಲ. ಆದರೆ ಜನರು ಕೋವಿಡ್​ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮೂಲಕ ನಮ್ಮನ್ನು ಅಂಥ ಅನಿವಾರ್ಯತೆಗೆ ತಳ್ಳಬಾರದು ಎಂದು ಹೇಳಿದ್ದಾರೆ.

    ನೀನ್​ ಚೆನ್ನಾಗಿರು ದೇವ್ರು.. ನಿನ್​ ಹೆಂಡ್ತಿ-ಮಕ್ಳು ಚೆನ್ನಾಗಿರ್ಲಿ; ಮುಷ್ಕರನಿರತ ಸಾರಿಗೆ ನೌಕರರಿಂದ ಗಾಂಧಿಗಿರಿ

    ಅಭಿಮಾನಿಗಳು ದೇವರಾದ ಕಥೆ: ಇಂದು ಡಾ.ರಾಜ್​ಕುಮಾರ್ ಅವರ 15ನೇ ಪುಣ್ಯಸ್ಮರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts