More

    ಬಜೆಟ್‌ನಲ್ಲಿ ನೇಕಾರರಿಗಿಲ್ಲ ಮನ್ನಣೆ

    ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
    ಜವಳಿ ಇಲಾಖೆಯ ಕಲ್ಯಾಣ ಕಾರ್ಯಕ್ರಮಗಳಿಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿಲ್ಲ. ಈ ಬಾರಿಯ ಬಜೆಟ್‌ನಲ್ಲಿ ನೇಕಾರರ ಹಲವು ಬೇಡಿಕೆಗಳು ಈಡೇರುವ ಭರವಸೆಗಳು ಹುಸಿಯಾಗಿವೆ ಎಂದು ನೇಕಾರರ ಮಹಾಮಂಡಳ ಪ್ರಧಾನ ಕಾರ್ಯದರ್ಶಿ ಬಿ.ಜಿ.ಹೇಮಂತರಾಜು ಬೇಸರ ವ್ಯಕ್ತಪಡಿಸಿದರು.
    ನಗರದ ನೇಕಾರರ ಹೋರಾಟ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ರಾಜ್ಯದ 12 ಜಿಲ್ಲೆಗಳ ನೇಕಾರರ ಮಹಾಮಂಡಳದ ವತಿಯಿಂದ ಜವಳಿ ಖಾತೆ ಸಚಿವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದರು.
    ಚುನಾವಣೆ ಪೂರ್ವದಲ್ಲಿ ಸಿದ್ದರಾಮಯ್ಯ ಹೇಳಿದಂತೆ ನೇಕಾರಿಕೆಗೆ 20 ಎಚ್‌ಪಿವರೆಗೆ ಉಚಿತ ವಿದ್ಯುತ್ ನೀಡಬೇಕು. ಇಂಧನ ಹೊಂದಾಣಿಕೆ ಸೇರಿ ವಿವಿಧ ಶುಲ್ಕಗಳನ್ನು ವಿಧಿಸುವ ಮೂಲಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ದರವನ್ನು ಏರಿಕೆ ಮಾಡಿರುವುದನ್ನು ಪರಿಷ್ಕರಣೆ ಮಾಡಬೇಕು. ಸಹಕಾರ ಸಂಘ ಹಾಗೂ ಬಿಡಿಸಿಸಿ ಬ್ಯಾಂಕ್‌ಗಳ ಮೂಲಕ ನೇಕಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಬೇಡಿಕೆ ಇಟ್ಟಿದ್ದೇವೆ. ಅಧಿವೇಶನ ಮುಗಿದ ನಂತರ ನೇಕಾರರ ಸಭೆ ನಡೆಸುವುದಾಗಿ ಜವಳಿ ಸಚಿವರು ಭರವಸೆ ನೀಡಿದ್ದಾರೆ ಎಂದರು.

    ನೇಕಾರರಿಗೆ ವಂಚನೆ ದೊಡ್ಡಬಳ್ಳಾಪುರದ ನೇಕಾರರು ನೇಯುತ್ತಿರುವ ಸೀರೆಗಳಿಗೆ ಹಾಕಿರುವ ಬಂಡವಾಳದಲ್ಲಿ ಶೇ.100 ರಿಂದ ಶೇ.150 ನಷ್ಟದಲ್ಲಿ ಮಾರಾಟ ಮಾಡುವಂಥ ಸ್ಥಿತಿ ಎದುರಾಗಿದೆ. ನಮ್ಮ ಸೀರೆಗಳನ್ನು ಧರ್ಮಾವರಂ, ಕಾಂಚಿಪುರಂ, ಸೇಲಂ, ಕೋಲ್ಕತ ಸೇರಿ ಹಲವು ಭಾಗಗಳಿಗೆ ಕಳುಹಿಸಲಾಗುತ್ತಿತ್ತು. ವಿಶ್ವಾಸದ ಮೇಲೆ ವ್ಯಾಪಾರ ನಡೆಯುತ್ತಿತ್ತು. ಇದನ್ನು ದುರುಪಯೋಗಪಡಿಸಿಕೊಂಡಿರುವ ಧರ್ಮಾವರಂನ ಕೆಲವರು ಇಲ್ಲಿನ ನೇಕಾರರಿಂದ ಲಕ್ಷಾಂತರ ರೂ. ಮೌಲ್ಯದ ಸೀರೆ ತರಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts