More

    ರೋಗ ಹರಡುವ ವೈರಸ್​ಅನ್ನು ಶಸ್ತ್ರವಾಗಿ ಬಳಸಲು ಚೀನಾ ಚಿಂತನೆ ನಡೆಸುತ್ತಿತ್ತು ಎನ್ನುವ ದಾಖಲೆ ಪತ್ತೆ

    ಸಿಡ್ನಿ : ಮಾನವರಲ್ಲಿ ರೋಗ ಹರಡುವ ವೈರಸ್​ಅನ್ನು ಕೃತಕವಾಗಿ ನಿರ್ಮಿಸಿ ಯುದ್ಧಾಸ್ತ್ರದಂತೆ ಬಳಸಬಹುದಾದ ‘ಆನುವಂಶಿಕ ಶಸ್ತ್ರಾಸ್ತ್ರಗಳ ಹೊಸ ಯುಗ’ದ ಬಗ್ಗೆ ಚೀನಾದ ವಿಜ್ಞಾನಿಗಳು ಮತ್ತು ಆರೋಗ್ಯ ಅಧಿಕಾರಿಗಳು ಚರ್ಚಿಸಿರುವ ಕುರಿತಾದ ದಾಖಲೆಗಳು ಲಭ್ಯವಾಗಿವೆ. ಚೀನಾದಲ್ಲಿ ಕರೊನಾ ಸಾಂಕ್ರಾಮಿಕ ರೋಗ ಉದ್ಭವವಾದ ಕೆಲವು ವರ್ಷಗಳ ಮುಂಚೆ, 2015 ರಲ್ಲಿ, ಬರೆಯಲಾಗಿರುವ ಈ ದಾಖಲೆಯು ಹಲವು ಪ್ರಶ್ನೆಗಳನ್ನು ಎತ್ತಿದೆ ಎಂದು ವೀಕೆಂಡ್ ಆಸ್ಟ್ರೇಲಿಯನ್ ಜರ್ನಲ್​ ಪ್ರಕಟಿಸಿದೆ ಎನ್ನಲಾಗಿದೆ.

    ‘ದ ಅನ್ನಾಚುರಲ್ ಆರಿಜಿನ್ ಆಫ್​ ಸಾರ್ಸ್​ ಅಂಡ್​​ ನ್ಯೂ ಸ್ಪೀಷೀಸ್ ಆಫ್​ ಮ್ಯಾನ್​ಮೇಡ್ ವೈರಸಸ್ ಆ್ಯಸ್​ ಜೆನೆಟಿಕ್ ವೆಪನ್ಸ್​​’ ಎಂಬ ಶೀರ್ಷಿಕೆಯುಳ್ಳ ಈ ದಸ್ತಾವೇಜು, ಮೂರನೇ ವಿಶ್ವ ಯುದ್ಧವನ್ನು ಜೈವಿಕ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡಲಾಗುವುದು. ಮತ್ತು ಕರೊನಾ ಸಾಂಕ್ರಾಮಿಕದ ಹೊಡೆತಕ್ಕೆ ಐದು ವರ್ಷಗಳ ಮೊದಲು ಚೀನಾದ ವಿಜ್ಞಾನಿಗಳು ಸಾರ್ಸ್​ ಕರೋನ ವೈರಸ್​​ಗಳ ಶಸ್ತ್ರಾಸ್ತ್ರೀಕರಣದ ಬಗ್ಗೆ ಹೇಗೆ ಚರ್ಚಿಸುತ್ತಿದ್ದರೆಂಬುದನ್ನು ಬಹಿರಂಗಪಡಿಸುತ್ತದೆ ಎನ್ನಲಾಗಿದೆ.

    ಇದನ್ನೂ ಓದಿ: ಫೇಸ್​​ಬುಕ್​ನಲ್ಲಿ ಫೇಕ್ ವಿಡಿಯೋ ಬಗ್ಗೆ ಮಹಿಳೆಯ ವಿಚಾರಣೆ

    ಚೀನಾದ ವಿಜ್ಞಾನಿಗಳು ಕರೊನಾ ವೈರಸ್​​ನ ವಿವಿಧ ರೂಪಾಂತರಿಗಳಿಗೆ ನೀಡಬಹುದಾದ ಮಿಲಿಟರಿ ಅಪ್ಲಿಕೇಶನ್ ಬಗ್ಗೆ ಆಲೋಚನೆ ನಡೆಸುತ್ತಿದ್ದರು ಎಂದು ತಿಳಿದುಬರುತ್ತದೆ. ಜಗತ್ತಿನಲ್ಲಿ ಈಗ ಹರಡಿರುವ ಕರೊನಾ ವೈರಸ್​ ಮಿಲಿಟರಿ ಬಳಕೆಗಾಗಿ ತಯಾರಿಸಿದ್ದ ಜೀವಾಣುವಿನ ಆಕಸ್ಮಿಕ ಬಿಡುಗಡೆಯಾಗಿರಬಹುದು ಎಂಬ ಪ್ರಶ್ನೆ ಎತ್ತುತ್ತದೆ. ಅಷ್ಟೇ ಅಲ್ಲ, ಚೀನಾ ತನ್ನ ದೇಶದಲ್ಲಿ ಕರೊನಾ ವೈರಸ್ ಹುಟ್ಟಿದ್ದು ಹೇಗೆಂದು ಹೊರದೇಶೀಯರು ತನಿಖೆ ನಡೆಸುವುದರ ವಿರುದ್ಧ ನಿಂತಿದ್ದು ಏಕೆ ಎಂಬುದಕ್ಕೆ ಇದು ಉತ್ತರ ನೀಡಿದೆ ಎಂದು ಆಸ್ಟ್ರೇಲಿಯನ್ ಸ್ಟ್ರಾಟಜಿಕ್ ಪಾಲಿಸಿ ಇನ್ಸ್​​ಟಿಟ್ಯೂಟ್​ನ ಕಾರ್ಯನಿರ್ವಾಹಕ ನಿರ್ದೇಶಕರಾದ ಪೀಟರ್​ ಜೆನ್ನಿಂಗ್ಸ್ ಹೇಳಿದ್ದಾರೆ.

    ಕರೊನಾ ವೈರಸ್​ಗಳು ಮಾನವರಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ರೋಗಗಳನ್ನು ಸಾಧಾರಣ ನೆಗಡಿಯಿಂದ ಹಿಡಿದು ಸಿವಿಯರ್ ಅಕ್ಯೂಟ್​ ರೆಸ್ಪಿರೇಟರಿ ಸಿಂಡ್ರೋಮ್​(ಸಾರ್ಸ್​) ಉಂಟುಮಾಡಬಲ್ಲ ವೈರಸ್​ ಫ್ಯಾಮಿಲಿ. ಈ ಫ್ಯಾಮಿಲಿಯ ಸಾರ್ಸ್​​-ಕೋವ್​-2 ಎಂಬ ವೈರಸ್​​ನಿಂದ ಡಿಸೆಂಬರ್​ 2019 ರಲ್ಲಿ ಜಗತ್ತಿನಲ್ಲಿ ಕರೊನಾ ಸಾಂಕ್ರಾಮಿಕ ಆರಂಭವಾಯಿತು. ಇದುವರೆಗೆ 157 ಮಿಲಿಯನ್ ಕರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ವಿಶ್ವದಾದ್ಯಂತ 3.28 ಮಿಲಿಯನ್ ಸಾವುಗಳು ಸಂಭವಿಸಿವೆ ಎಂದು ಜಾನ್ಸ್​ ಹಾಪ್​​ಕಿನ್ಸ್​ ಯೂನಿವರ್ಸಿಟಿಯ ಇತ್ತೀಚಿನ ಅಧ್ಯಯನ ತಿಳಿಸಿದೆ. (ಏಜೆನ್ಸೀಸ್)

    ಪ್ರಾಣ ಕೈಗೆ ನೀಡಿದವರಿಗೆ ನಂಬಿಕೆದ್ರೋಹ… 7 ಜನರಿಗೆ ಮಾರಣಾಂತಿಕ ಚುಚ್ಚುಮದ್ದು ನೀಡಿದ ನರ್ಸ್​!

    “ಸರ್, ಐ ಕಾಂಟ್ ಲಿವ್ ವಿಥೌಟ್ ಸ್ಮೋಕಿಂಗ್” ಎಂದು ಸಮಜಾಯಿಷಿ ನೀಡಿದ ವಾಹನಸವಾರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts