More

    16 ತಿಂಗಳ ಹೆಣ್ಣುಮಗುವಿನ ಮೂಗಿನ ಮೂಲಕ ಬ್ರೇನ್​ ಟ್ಯೂಮರ್ ತೆಗೆದ ವೈದ್ಯರು!

    ಚಂಡೀಗಢ: ಹದಿನಾರು ತಿಂಗಳ ಹೆಣ್ಣುಮಗುವಿನ ಮೂಗಿನ ಮೂಲಕ ಬ್ರೇನ್ ಟ್ಯೂಮರ್ ತೆಗೆಯುವ ಐತಿಹಾಸಿಕ ಶಸ್ತ್ರಚಿಕಿತ್ಸೆಯನ್ನು ಚಂಡೀಗಢದ ವೈದ್ಯರು ಕೈಗೊಂಡಿದ್ದಾರೆ. ನ್ಯೂರೋ ಎಂಡೋಸ್ಕೋಪಿ ಎಂಬ ಅಸಾಧಾರಣ ಶಸ್ತ್ರಚಿಕಿತ್ಸೆಯನ್ನು ಒಳಗೊಂಡ ಪ್ರಪಂಚದ ಅತಿಚಿಕ್ಕ ವಯಸ್ಸಿನ ಮಗುವಾದ ‘ಅಮಾಯ್ರ’ ವೈದ್ಯಕೀಯ ಆರೈಕೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.

    ಚಂಡೀಗಢದ ಪೋಸ್ಟ್​ ಗ್ರಾಜುಯೇಟ್ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆ್ಯಂಡ್ ರಿಸರ್ಚ್​ನಲ್ಲಿ ತಜವೈದ್ಯರ ತಂಡ ಈ ಐತಿಹಾಸಿಕ ಶಸ್ತ್ರಚಿಕಿತ್ಸೆ ನಡೆದಿದೆ. ನ್ಯೂರೋಸರ್ಜರಿ ವಿಭಾಗದ ಡಾ.ಎಸ್.ಎಸ್. ದಂಡಪಾಣಿ ಮತ್ತು ಡಾ. ಸುಶಾಂತ್ ಹಾಗೂ ಇಎನ್​ಟಿ ವಿಭಾಗದ ಡಾ. ರಿಜುನೀತಾ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು. ಆರು ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ 3 ಸೆಂಟಿಮೀಟರ್ ಗಾತ್ರದ ದೊಡ್ಡ ಕ್ಯಾನ್ಸರ್ ಗೆಡ್ಡೆಯನ್ನು ಹೊರತೆಗೆಯಲಾಗಿದೆ.

    ಇದನ್ನೂ ಓದಿ: ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

    ಕೆಲವು ತಿಂಗಳ ಮುನ್ನ ಉತ್ತರಾಖಂಡದ ಅಮಾಯ್ರ ಎಂಬ ಹೆಣ್ಣು ಮಗು ತನ್ನ ಪಾಡಿಗೆ ಆಡಿಕೊಂಡು ನಸುನಗು ಬೀರುತ್ತಿತ್ತು. ಆದರೆ ಒಂದೆರಡು ತಿಂಗಳಿನಿಂದ ಏನು ತೋರಿಸಿದರೂ ಸರಿಯಾಗಿ ಪ್ರತಿಕ್ರಿಯಿಸುತ್ತಿರಲಿಲ್ಲ. ಚಿಂತೆಗೊಳಗಾದ ತಾಯಿ ವೈದ್ಯರಿಗೆ ತೋರಿಸಿದಾಗ ಎಂಆರ್​ಐ ಸ್ಕ್ಯಾನ್​ ಮಾಡಿದರು. ತಲೆಬುರುಡೆಯ ಕೆಳಭಾಗದಲ್ಲಿ 3 ಸೆಂಟಿಮೀಟರ್ ಗಾತ್ರ ಕ್ರಾನಿಯೋಫಾರಿಂಗಿಯೋಮಾ (ಬ್ರೇನ್ ಟ್ಯೂಮರ್) ಇರುವುದು ತಿಳಿಯಿತು. ಇದು ದೃಷ್ಟಿಗೆ ಸಂಬಂಧಿಸಿದ ನರಗಳಿಗೆ ಮತ್ತು ಹೈಪೊಥೆಲಾಮಸ್ಸಿಗೆ ಹತ್ತಿರದಲ್ಲಿದ್ದುದರಿಂದ ಶೀಘ್ರ ಚಿಕಿತ್ಸೆಗೆ ವೈದ್ಯರು ಮುಂದಾದರು. ಶಸ್ತ್ರಚಿಕಿತ್ಸೆಯ ಮೂಲಕ ಪೂರ್ಣವಾಗಿ ಟ್ಯೂಮರ್ ತೆಗೆದ ನಂತರ ಮಗು ತೀವ್ರ ನಿಗಾ ಘಟಕದಲ್ಲಿ ಚೇತರಿಸಿಕೊಳ್ಳುತ್ತಿದೆ. ಈಗ ಶಸ್ತ್ರಚಿಕಿತ್ಸೆಯಾಗಿ ಹತ್ತು ದಿನಗಳು ಕಳೆದಿದ್ದು ಮಗುವಿನ ದೃಷ್ಟಿ ಉತ್ತಮಗೊಂಡಿದ್ದು ಸಿಟಿ ಸ್ಕ್ಯಾನ್​ನಲ್ಲಿ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

    ಸಣ್ಣಮಕ್ಕಳಲ್ಲಿ ಪುಟ್ಟ ಮೂಗಿನ ಹೊಳ್ಳೆಗಳು, ಇನ್ನೂ ಸರಿಯಾಗಿ ಬೆಳೆಯದ ಮೂಳೆಗಳು ಮತ್ತು ರಕ್ತನಾಳಗಳ ಹತ್ತಿರದ ಜೋಡಣೆಯು ಈ ರೀತಿಯ ಎಂಡೋಸ್ಕೋಪಿಕ್ ಚಿಕಿತ್ಸೆಗೆ ದೊಡ್ಡ ಸವಾಲಾಗಿರುತ್ತದೆ. ತೆಳುವಾದ ಹೈಡೆಫಿನಿಷನ್​ ಎಂಡೋಸ್ಕೋಪ್ ಮತ್ತು ಅತಿಸಣ್ಣ ಯಂತ್ರಗಳ ಉಪಯೋಗದೊಂದಿಗೆ ಈ ಶಸ್ತ್ರಚಿಕಿತ್ಸೆ ನಡೆದಿದೆ. ಈ ಥರದ ಕ್ಯಾನ್ಸರ್ ಗೆಡ್ಡೆಗಳನ್ನು ಸಾಮಾನ್ಯವಾಗಿ ತೆರೆದ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದು ನಂತರ ರೇಡಿಯೇಷನ್ ಥೆರಪಿ ನೀಡಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮೂಗಿನ ಮೂಲಕ ಎಂಡೋಸ್ಕೋಪಿ ಮಾಡಿ ತೆಗೆಯುವುದು ಆರು ವರ್ಷದ ಮೇಲಿನ ರೋಗಿಗಳಲ್ಲಿ ಆರಂಭವಾಗಿದೆ. ಈ ರೀತಿಯ ಎಂಡೊಸ್ಕೊಪಿ ಚಿಕಿತ್ಸೆಯನ್ನು ಅಮೆರಿಕದ ಸ್ಟಾಂಡ್​ಫರ್ಡ್​ನಲ್ಲಿ ಎರಡು ವರ್ಷದ ಮಗುವಿನ ಮೇಲೆ 2019ರಲ್ಲಿ ನಡೆಸಲಾಗಿತ್ತು. (ಏಜೆನ್ಸೀಸ್​)

    VIDEO | ಡಾಕೂ ಗಬ್ಬರ್ ಸಿಂಗ್​ಗೆ ಶಿಕ್ಷೆಯಾಗಿದ್ದು ಯಾಕೆ ಗೊತ್ತಾ? ಉತ್ತರಪ್ರದೇಶ ಪೊಲೀಸರ ಅನ್ವೇಷಣೆ!

    ಬ್ಯಾಂಕ್​ ಲಾಕರ್​ನಲ್ಲೂ ಹಣ ಸೇಫ್​ ಅಲ್ಲ!; ಇಲ್ಲಿಟ್ಟ ಹಣ ಏನಾಯ್ತು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts