More

    ಹೆರಿಗೆ ಮಾಡಿಸದೆ ಗರ್ಭಿಣಿಯ ಕಪಾಳಕ್ಕೆ ಬಾರಿಸಿದ ವೈದ್ಯೆ, ಹೊಟ್ಟೆಯಲ್ಲೇ ಮಗು ಸಾವು; ಆಶಾ ಕಾರ್ಯಕರ್ತೆ ಮೇಲೂ ಹಲ್ಲೆ?

    ಗದಗ: ಹೆರಿಗೆ ವೇಳೆ ವೈದ್ಯರ ನಿರ್ಲಕ್ಷದಿಂದ ಮಗು ಸಾವು ಎಂಬ ಆರೋಪ ಆಗಾಗ ಕೇಳಿ ಬರುತ್ತಲಿರುತ್ತದೆ. ಅಂಥ ಪ್ರಕರಣಗಳ ಪಟ್ಟಿಗೆ ಇಂದು ಇನ್ನೊಂದು ಸೇರ್ಪಡೆ ಆಗಿದೆ. ಇಲ್ಲಿ ಗರ್ಭಿಣಿಯ ಕಪಾಳಕ್ಕೆ ವೈದ್ಯೆ ಹೊಡೆದಿದ್ದು, ಮಗು ಹೊಟ್ಟೆಯಲ್ಲೇ ಸಾವಿಗೀಡಾಗಿದೆ ಎಂದೂ ಹೇಳಲಾಗಿದೆ.

    ಗದಗ ಜಿಮ್ಸ್​ನಲ್ಲಿ ಈ ಪ್ರಕರಣ ನಡೆದಿದೆ. ಹೆರಿಗೆಗೆ ಎಂದು ಬಂದಿದ್ದ ಮಹಿಳೆಯನ್ನು ಹೆರಿಗೆಗೆ ಒಳಪಡಿಸದೆ ವಿಳಂಬ ಮಾಡಲಾಗಿದೆ ಎನ್ನಲಾಗಿದೆ. ಮಾತ್ರವಲ್ಲ, ಹೆರಿಗೆ ಮಾಡಿಸದೆ ಗರ್ಭಿಣಿಯ ಕಪಾಳಕ್ಕೆ ವೈದ್ಯೆ ಬಾರಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

    ಇದನ್ನೂ ಓದಿ: ಅಂಚೆಯಲ್ಲೇ ಬರಲಿದೆ ಮಾವು; ಗ್ರಾಹಕರ ಮನೆ ಬಾಗಿಲಿಗೇ ಕಳಿಸಲಿದ್ದಾರೆ ಬೆಳೆಗಾರರು

    ಬಳಿಕ ಆಶಾ ಕಾರ್ಯಕರ್ತೆ ಮೇಲೂ ಜಿಮ್ಸ್ ಆಸ್ಪತ್ರೆ ವೈದ್ಯೆ ಹಲ್ಲೆ ಮಾಡಿರುವ ಆರೋಪವೂ ಇದೆ. ಗರ್ಭಿಣಿಯ ಹೊಟ್ಟೆಯಲ್ಲೇ ಮಗು ಸಾವಿಗೀಡಾಗಿದ್ದು, ಮಗುವಿನ ಸಾವಿಗೆ ಕಾರಣ ಏನು ಎಂಬುದನ್ನು ಕೂಡ ವೈದ್ಯರು ತಿಳಿಸಿಲ್ಲ ಎಂದು ಗರ್ಭಿಣಿಯ ಕಡೆಯವರು ಆರೋಪಿಸಿದ್ದಾರೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ವೈದ್ಯರ ನಿರ್ಲಕ್ಷ್ಯಕ್ಕೆ ಮಗು ಹೊಟ್ಟೆಯಲ್ಲೇ ಸಾವಿಗೀಡಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಮತ್ತೊಂದೆಡೆ ವೈದ್ಯೆಯ ಹಲ್ಲೆಯನ್ನು ಖಂಡಿಸಿ ಜಿಮ್ಸ್ ಆಸ್ಪತ್ರೆ ಎದುರು ನೂರಾರು ಆಶಾ ಕಾರ್ಯಕರ್ತೆಯರ ಧರಣಿ ನಡೆಸಿದ್ದು, ಜಿಮ್ಸ್ ವೈದ್ಯರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದೇ ಕಾಲಿನಲ್ಲಿ ನಿಲ್ಲಿಸಿ ಆಶಾ ಕಾರ್ಯಕರ್ತೆ ಜೊತೆ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಕೂಡ ಆರೋಪಿಸಲಾಗಿದ್ದು, ವೈದ್ಯರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

    ಮನ ‘ಮುಟ್ಟು’ವ ಕಾರ್ಯ: ಮನೆಯೊಡತಿಗೆ ಮುಟ್ಟಾದಾಗ ರಾಣಿಯಂತೆ ನೋಡಿಕೊಳ್ಳುತ್ತಿರುವ ಗಂಡ-ಗಂಡುಮಕ್ಕಳು!

    ಶಾಲಾ ಮಕ್ಕಳಿಗೆ ಎಷ್ಟು ದಿನ ರಜೆ?: ಇಲ್ಲಿದೆ ವೇಳಾಪಟ್ಟಿಯ ಪೂರ್ತಿ ವಿವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts