More

    ವೈದ್ಯರ ಸೇವಾ ಅವಧಿ ವಿಸ್ತರಣೆ ; ಆಕ್ಸಿಜನ್ ಪ್ಲ್ಯಾಂಟ್ ಆಮದು

    ನವದೆಹಲಿ : ದೇಶದಲ್ಲಿ ಕರೊನಾ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ವೈದ್ಯರ ಮತ್ತು ಇತರ ಆರೋಗ್ಯ ಕಾರ್ಯಕರ್ತರ ಸೇವೆಯ ಅಗತ್ಯ ಹೆಚ್ಚಿದೆ. ಈ ನಿಟ್ಟಿನಲ್ಲಿ ರಕ್ಷಣಾ ಸಚಿವಾಲಯವು ಆರ್ಮಡ್ ಫೋರ್ಸಸ್ ಮೆಡಿಕಲ್ ಸರ್ವೀಸ್​(ಎಎಫ್​ಎಂಎಸ್​​)ನ ಶಾರ್ಟ್ ಸರ್ವೀಸ್ ಕಮಿಷನ್ಡ್ ಡಾಕ್ಟರ್​ಗಳ ಸೇವಾ ಅವಧಿಯನ್ನು ವಿಸ್ತರಿಸಿದೆ.

    ಒಟ್ಟು 238 ಅಲ್ಪಕಾಲಿಕ ನಿಯುಕ್ತಿ ಹೊಂದಿದ್ದ ವೈದ್ಯರ ಸೇವಾ ಅವಧಿಯು ಮುಗಿಯುವ ಹಂತದಲ್ಲಿತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಅವರ ಸೇವಾ ಅವಧಿಯನ್ನು ಈ ವರ್ಷದ ಡಿಸೆಂಬರ್ 31 ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: Video: ತಾನೇನು ಕಡಿಮೆ ಎಂದು ಟ್ರ್ಯಾಕ್​ಗೆ ನುಗ್ಗಿದ ಶ್ವಾನ: ಓಟಗಾರರ ನಡುವೆ ನಂಬರ್ 1 ಸ್ಥಾನ ಗಿಟ್ಟಿಸಿಯೇ ಬಿಟ್ಟಿತು!

    ಮೊಬೈಲ್ ಆಕ್ಸಿಜನ್ ಪ್ಲ್ಯಾಂಟ್​ : ದೇಶದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ನೀಗಿಸುವ ದೃಷ್ಟಿಯಿಂದ ಎಎಫ್​ಎಂಎಸ್, ಆಕ್ಸಿಜನ್ ಪ್ಲ್ಯಾಂಟ್​​ಗಳನ್ನು ಮತ್ತು ಕಂಟೇನರ್​ಗಳನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳುವ ನಿರ್ಧಾರ ಮಾಡಿದೆ. ಒಟ್ಟು 23 ಮೊಬೈಲ್ ಆಕ್ಸಿಜನ್​ ಜನರೇಷನ್ ಪ್ಲ್ಯಾಂಟ್​ಗಳನ್ನು ಜರ್ಮನಿಯಿಂದ ಏರ್​ಲಿಫ್ಟ್​ ಮಾಡಿ ಕರೊನಾ ರೋಗಿಗಳ ಶುಶ್ರೂಷೆ ಮಾಡುತ್ತಿರುವ ಆರ್ಮಿ ಆಸ್ಪತ್ರೆಗಳಲ್ಲಿ ಬಳಸಲಾಗುವುದು ಎನ್ನಲಾಗಿದೆ.

    ಪ್ರತಿಯೊಂದು ಪ್ಲ್ಯಾಂಟ್​​​ಗೆ ನಿಮಿಷಕ್ಕೆ 40 ಲೀಟರ್ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯವಿದ್ದು, ಗಂಟೆಗೆ 2,400 ಲೀಟರ್ ಉತ್ಪಾದಿಸುವುದು. ಈ ದರದಲ್ಲಿ 20 ರಿಂದ 25 ರೋಗಿಗಳಿಗೆ ನಿರಂತರ ಆಕ್ಸಿಜನ್ ಪೂರೈಕೆ ಮಾಡಬಹುದಾಗಿದೆ. ಈ ಪ್ಲ್ಯಾಂಟ್​​ಗಳನ್ನು ಸುಲಭವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಬಹುದಾಗಿದ್ದು, ಒಂದು ವಾರದೊಳಗೆ ಇವು ಭಾರತ ತಲುಪಲಿವೆ ಎನ್ನಲಾಗಿದೆ. (ಏಜೆನ್ಸೀಸ್)

    ಈ ರಾಜ್ಯದಲ್ಲಿ ಎಲ್ಲ ವಯಸ್ಕರಿಗೂ ಉಚಿತ ಕರೊನಾ ಲಸಿಕೆ !

    ಸುಪ್ರೀಂ ಕೋರ್ಟ್​​ಗೆ ಭಾವನಾತ್ಮಕ ವಿದಾಯ ಹೇಳಿದ ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts