More

    ಮಹಿಳೆ ಹೊಟ್ಟೆಯಿಂದ 25 ಕೆಜಿ ತೂಕದ ಅಂಡಾಶಯ ಗಡ್ಡೆ ಹೊರತೆಗೆದ ವೈದ್ಯರು

    ತಿಪಟೂರು: ಮಹಿಳೆ ಹೊಟ್ಟೆಯಲ್ಲಿದ್ದ 25 ಕೆಜಿ ತೂಕದ ಅಂಡಾಶಯ ಗಡ್ಡೆಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯುವಲ್ಲಿ ಕುಮಾರ್ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.

    ದೀರ್ ಕಾಲದ ಹೊಟ್ಟೆನೋವಿನಿಂದ ಬಳಲುತ್ತಿದ್ದ ತುರುವೇಕೆರೆ ನಿವಾಸಿ ಲಕ್ಷ್ಮೀದೇವಿ (35) ಮಾ.17ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಬುಧವಾರ ಹಲವು ಗಂಟೆ ಶಸ್ತ್ರ ಚಿಕಿತ್ಸೆ ನಡೆಸಿದ ಡಾ.ಶ್ರೀಧರ್ (ಕುಮಾರ್) ಮತ್ತು ತಂಡ, ಗಡ್ಡೆ ಹೊರತೆಗೆದು ರೋಗಿಯ ಪ್ರಾಣ ಉಳಿಸಿದೆ. ವೈದ್ಯಕೀಯ ಭಾಷೆಯಲ್ಲಿ ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್ (ಪಿಒಸಿಎಸ್) ಎಂದು ಕರೆಯಲಾಗುವ ಈ ಗಡ್ಡೆ 25 ಕೆ.ಜಿ ತೂಕವಿತ್ತು. ಸೂಕ್ತ ಸಮಯದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದ್ದರಿಂದ ರೋಗಿಯ ಜೀವ ಉಳಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.

    ರೋಗದ ಹಿನ್ನೆಲೆ: ನಾಲ್ಕು ವರ್ಷಗಳಿಂದ ಅಂಡಾಶಯದಲ್ಲಿ ಗಡ್ಡೆ ಬೆಳೆಯುತ್ತಿದ್ದರೂ, ಲಕ್ಷ್ತ್ಯ್ಮಿದೇವಿಗೆ ದೇಹದಲ್ಲಾಗುತ್ತಿರುವ ಬದಲಾವಣೆ ಬಗ್ಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಆದರೆ ನಾಲ್ಕು ದಿನಗಳ ಹಿಂದೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡ ತಕ್ಷಣ ಕೆಲವರ ಸಲಹೆ ಮೇರೆಗೆ ನಗರದ ಕುಮಾರ್ ಆಸ್ಪತ್ರೆಗೆ ದಾಖಲಾಗಿ ಶಸಚಿಕಿತ್ಸೆ ಮಾಡಿಸಿಕೊಂಡಿದ್ದಾರೆ.

    ಮಹಿಳೆ ಹೊಟ್ಟೆಯಲ್ಲಿದ್ದ ಓವರಿಯನ್ ಗಡ್ಡೆ ತಿರುಗಿದ್ದರಿಂದ ರೋಗಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡು ಚಿಕಿತ್ಸೆಗೆ ಆಗಮಿಸಿದ್ದರು. ಗಡ್ಡೆ ತಿರುಚಿಕೊಳ್ಳದೆ ಇದ್ದಿದ್ದರೆ ಸಮಸ್ಯೆ ರೋಗಿಯ ಗಮನಕ್ಕೆ ಬರುತ್ತಿರಲಿಲ್ಲ. ಬೇರೆಡೆ ಲಕ್ಷಾಂತರ ವೆಚ್ಚವಾಗುವ ಈ ಶಸ್ತ್ರ ಚಿಕಿತ್ಸೆಯನ್ನು ರೋಗಿಯ ಆರ್ಥಿಕ ಹಿನ್ನೆಲೆ ಗಮನಿಸಿ ಕಡಿಮೆ ವೆಚ್ಚದಲ್ಲಿ ಮಾಡಲಾಗಿದೆ.
    ಡಾ. ಶ್ರೀಧರ್  , ಕುಮಾರ್ ಆಸ್ಪತ್ರೆ ವೈದ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts