More

    ಶುಗರ್ ಚೆಕ್‌ ಮಾಡಿಸಿಕೊಳ್ಳಲು ಬಂದಿದ್ದ ವೃದ್ಧ ಸಾವು; ವೈದ್ಯರು ಹೇಳೋದೇನು?

    ದೇವನಹಳ್ಳಿ: ವೃದ್ಧರೊಬ್ಬರಿಗೆ ಮೈಗೆ ಹುಷಾರಿಲ್ಲದ ಕಾರಣ ಮಗಳು ತನ್ನ ತಂದೆಯನ್ನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳು. ಈ ವೇಳೆ ಆಸ್ಪತ್ರೆಯಲ್ಲಿ ವೃದ್ದನಿಗೆ ಶುಗರ್ ಲೇವಲ್ ಜಾಸ್ತಿಯಿದ್ದು, ಚಿಕಿತ್ಸೆ ನೀಡುತ್ತಿದ್ದಂತೆ ವೃದ್ಧ ಸಾವನ್ನಪ್ಪಿದ್ದಾರೆ. ಇದರಿಂದ ರೊಚ್ಚಿಗೆದ್ದ ವೃದ್ದನ ಕುಟುಂಬಸ್ಥರು ಸರ್ಕಾರಿ ಆಸ್ಪತ್ರೆಯಲ್ಲಿ ಪಿಠೋಪಕರಣಗಳು ಪುಸ್ತಕಗಳನ್ನು ಬಿಸಾಡಿ ರಂಪಾಟ ಮಾಡಿದ್ದಾರೆ. ಜತೆಗೆ ವೃದ್ದನ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿದ್ದರು.

    ಟಿಹೆಚ್ಒ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ‌ ವಿರುದ್ಧ ಸರಿಯಾಗಿ ಚಿಕಿತ್ಸೆ ನೀಡದೆ ಬಡ ರೋಗಿಗಳ ಜೊತೆ ಚೆಲ್ಲಾಟ ವಾಡ್ತಿದ್ದಾರೆ ಅಂತಾ ಮೃತ ವೃದ್ಧನ ಮಗಳು ಆರೋಪಿಸಿದ್ದು ಆಸ್ವತ್ರೆಯ ದಾಖಲಾತಿ ಪುಸ್ತಕ ಪಿಠೋಪಕರಣ ಬಿಸಾಕಿ ರಂಪಾಟ ಮಾಡಿದ್ದಾಳೆ. ಹೀಗಾಗಿ ಆಸ್ವತ್ರೆಯಲ್ಲಿನ ವೈದ್ಯರ ‌ವಿರುದ್ಧ ಮಹಿಳೆಯ ರಂಪಾಟ ನೋಡಿ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯ ಮನವೊಲಿಸಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಪೊಲೀಸರ ವಿರುದ್ದವೇ ಮಹಿಳೆ ತಿರುಗಿಬಿದ್ದಿದ್ದು ಶವಪರೀಕ್ಷೆ ಮಾಡಲು ಬಿಡಲ್ಲ ಅಂತ ಕಿಡಿಕಾರಿದ್ದಳು. ಈ ವೇಳೆ ಪೊಲೀಸರು ಮೊದಲು ದೂರು ನೀಡಿ ನಾವು ಕ್ರಮ ತೆಗೆದುಕೊಳ್ತೆವೆ ಅಂತಾ ಮನವೊಲಿಸಿ ವೃದ್ದನ ಮೃತದೇಹವನ್ನ ಶವಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ.

    ಈ ಬಗ್ಗೆ ಮಾತನಾಡಿರೋ ಟಿಹೆಚ್ಓ ಹಾಗೂ ಚಿಕಿತ್ಸೆ ನೀಡಿದ ವೈದ್ಯರು ‘ಬೆಳಗ್ಗೆ 10.30 ಗಂಟೆಗೆ ಆಸ್ಪತ್ರೆಗೆ ರೋಗಿಯನ್ನ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಶುಗರ್ ಟೆಸ್ಟ್ ಮಾಡಿದಾಗ 450 ದಾಟಿತ್ತು. ಆದರೂ ಚಿಕಿತ್ಸೆಯನ್ನ ಕೊಟ್ಟಿದ್ದೆವೆ. ಆದರೆ ರೋಗಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದು ನಮ್ಮದೇನು ನಿರ್ಲಕ್ಷವಿಲ್ಲ’ ಎನ್ನುತ್ತಿದ್ದಾರೆ.

    ಇತ್ತಿಚೆಗೆ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷದ ಆರೋಪಗಳು ಸಾಕಷ್ಟು ಕೇಳಿ ಬರುತ್ತಿವೆ. ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆ ನಂತರವೇ ವೈದ್ಯರ ನಿರ್ಲಕ್ಷದಿಂದ ವೃದ್ದ ಸಾವನ್ನಪ್ಪಿದ್ದಾ ಅಥವಾ ಬೇರೆ ಏನಾದರೂ ಕಾರಣ ಇದೆಯಾ ಅನ್ನೋದು ಗೊತ್ತಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts