More

    ವಾಟ್ಸ್​ಆ್ಯಪ್​ ಬಳಸಿ ಜಮ್ಮು ಕಾಶ್ಮೀರದಲ್ಲಿ ಹೆರಿಗೆ ಮಾಡಿಸಿದ ವೈದ್ಯರು!

    ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಆಧುನಿಕ ಜಗತ್ತಿನೊಂದಿಗೆ ಅಷ್ಟಾಗಿ ಸಂಪರ್ಕ ಹೊಂದಿರದ ಕೆರಾನ್​ ಎನ್ನುವ ಪ್ರದೇಶದಲ್ಲಿ ಗರ್ಭಿಣಿ ಮಹಿಳೆಗೆ ಹೆರಿಗೆ ಸಂದರ್ಭ ತೊಂದರೆಯಾಗಿತ್ತು. ಆ ಮಹಿಳೆಯನ್ನು ಏರ್​ಲಿಫ್ಟ್​ ಮಾಡಿ ಆಧುನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹಿಮಪಾತ ಅಡ್ಡಿಯಾಗಿತ್ತು. ಈ ಸಂದರ್ಭ ಬೇರೆ ದಾರಿ ಕಾಣದ ವೈದ್ಯರು ವಾಟ್ಸಾಪ್ ಕರೆ ಮೂಲಕ ಆರೋಗ್ಯವಂತ ಮಗುವಿಗೆ ಜನ್ಮ ನೀಡುವಲ್ಲಿ ಸಹಾಯ ಮಾಡಿದ್ದಾರೆ.

    “ಶುಕ್ರವಾರ ರಾತ್ರಿ ಎಕ್ಲಾಂಪ್ಸಿಯಾ, ದೀರ್ಘಕಾಲದ ಹೆರಿಗೆ ಮತ್ತು ಎಪಿಸಿಯೊಟೊಮಿಯೊಂದಿಗೆ ಸಂಕೀರ್ಣವಾದ ಹೆರಿಗೆಯ ಇತಿಹಾಸ ಹೊಂದಿರುವ ಕೆರಾನ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾವು ಮಹಿಳೆಗೆ ಜನ್ಮ ನೀಡುವಲ್ಲಿ ಸಹಾಯ ಮಾಡಿದ್ದೇವೆ” ಎಂದು ಕ್ರಾಲ್ಪೋರಾದ ಬ್ಲಾಕ್ ವೈದ್ಯಕೀಯ ಅಧಿಕಾರಿ ಡಾ ಮೀರ್ ಮೊಹಮ್ಮದ್ ಶಾಫಿ ಹೇಳಿದರು.

    ಚಳಿಗಾಲದಲ್ಲಿ ಕುಪ್ವಾರ ಜಿಲ್ಲೆಯ ಉಳಿದ ಭಾಗಗಳಿಂದ ಕೆರನ್ ಸಂಪರ್ಕ ಕಡಿತಗೊಂಡಿದ್ದರಿಂದ ರೋಗಿಯನ್ನು ಹೆರಿಗೆ ಸೌಲಭ್ಯವಿರುವ ಆಸ್ಪತ್ರೆಗೆ ಕರೆದೊಯ್ಯಲು ಏರ್​ಲಿಫ್ಟ್​ಮಾಡುವ ಅಗತ್ಯವಿದೆ. ಆದರೆ ಅಂದು ಹಿಮಪಾತ ಹೆಚ್ಚಾದ ಕಾರಣ ವಾಟ್ಸ್​ಆ್ಯಪ್​ ಮೂಲಕ ವೈದ್ಯರು ಹೆರಿಗೆ ಮಾಡಿಸಿದ್ದಾರೆ.

    ಕ್ರಾಲ್ಪೋರಾ ಉಪಜಿಲ್ಲಾ ಆಸ್ಪತ್ರೆಯ ಸ್ತ್ರೀರೋಗತಜ್ಞ ಡಾ.ಪರ್ವೈಜ್ ಅವರು ಕೆರಾನ್ ಪಿಎಚ್‌ಸಿಯಲ್ಲಿ ಡಾ ಅರ್ಷದ್ ಸೋಫಿ ಮತ್ತು ಅವರ ಅರೆವೈದ್ಯಕೀಯ ಸಿಬ್ಬಂದಿಗೆ ಮಗುವನ್ನು ಹೆರಿಗೆ ಮಾಡುವ ಕಾರ್ಯವಿಧಾನದ ಕುರಿತು ವಾಟ್ಸಾಪ್ ಕರೆ ಮೂಲಕ ಮಾರ್ಗದರ್ಶನ ನೀಡಿದರು.

    “ಮಹಿಳೆಯನ್ನು ಹೆರಿಗೆಗೆ ಒಳಪಡಿಸಲಾದ ಆರು ಗಂಟೆಗಳ ನಂತರ ಆರೋಗ್ಯವಂತ ಹೆಣ್ಣು ಮಗು ಜನಿಸಿತು. ಪ್ರಸ್ತುತ ಮಗು ಮತ್ತು ತಾಯಿ ಇಬ್ಬರೂ ನಿಗಾದಲ್ಲಿದ್ದಾರೆ ಮತ್ತು ಉತ್ತಮ ಆರೋಗ್ಯವನ್ನು” ಎಂದು ಡಾ ಶಫಿ ಹೇಳಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts